ವಿಷಯಕ್ಕೆ ಹೋಗು

ಹೆಲೆನ್ ಕೆಲ್ಲರ್

ವಿಕಿಕೋಟ್ದಿಂದ
ಹೆಲೆನ್ ಆಡಮ್ಸ್ ಕೆಲ್ಲರ್

ಹೆಲೆನ್ ಆಡಮ್ಸ್ ಕೆಲ್ಲರ್ (ಜೂನ್ 27, 1880 - ಜೂನ್ 1, 1968) ಒಬ್ಬ ಅಮೇರಿಕನ್ ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ; 19 ತಿಂಗಳ ವಯಸ್ಸಿನಲ್ಲಿ ಅನಾರೋಗ್ಯ ಅವರನ್ನು ಕಿವುಡ ಮತ್ತು ಕುರುಡರನ್ನಾಗಿ ಮಾಡಿತು.

ನುಡಿಗಳು

[ಸಂಪಾದಿಸಿ]
  • ಯಾರಿಗಾದರು ಮೇಲಕ್ಕೆ ಹಾರುವ ಶಕ್ತಿ ಬಂದಾಗ ಅವರು ಮತ್ತೆ ತೆವಳಲು ಎಂದಿಗೂ ಬಯಸುವುದಿಲ್ಲ.
  • ಕ್ರಿಸ್‌ಮಸ್ ಸಮಯದಲ್ಲಿ ನಿಜವಾದ ಕುರುಡನೆಂದರೆ, ಹೃದಯದಲ್ಲಿ ಕ್ರಿಸ್‌ಮಸ್ ಇಲ್ಲದೇ ಇರುವವನು ಮಾತ್ರ.
  • ಕುರುಡುತನವು ನಮ್ಮನ್ನು ವಸ್ತುಗಳಿಂದ ದೂರ ಮಾಡುತ್ತದೆ, ಆದರೆ ಕಿವುಡುತನವು ನಮ್ಮನ್ನು ಜನರಿಂದ ದೂರ ಮಾಡುತ್ತದೆ.[]
  • ಸಂತೋಷದ ಒಂದು ಬಾಗಿಲು ಮುಚ್ಚಿದಾಗ, ಇನ್ನೊಂದು ಬಾಗಿಲು ತೆರೆಯುತ್ತದೆ; ಆದರೆ ಆಗಾಗ್ಗೆ ನಾವು ಮುಚ್ಚಿದ ಬಾಗಿಲಿನತ್ತ ಬಹಳ ಹೊತ್ತು ನೋಡುತ್ತೇವೆ, ನಮಗಾಗಿ ತೆರೆದಿರುವ ಬಾಗಿಲನ್ನು ನಾವು ನೋಡುವುದಿಲ್ಲ.
  • ನೀವು ಅತ್ಯಂತ ಅತೃಪ್ತರಾಗಿರುವಾಗ, ಜಗತ್ತಿನಲ್ಲಿ ನೀವು ಏನಾದರೂ ಮಾಡಲು ಇದೆ ಎಂದು ನಂಬಿರಿ. ನೀವು ಇನ್ನೊಬ್ಬರ ನೋವನ್ನು ಸಿಹಿಗೊಳಿಸಲು ಸಾಧ್ಯವಾದರೆ, ಜೀವನವು ವ್ಯರ್ಥವಾಗುವುದಿಲ್ಲ.

ಉಲ್ಲೇಖಗಳು

[ಸಂಪಾದಿಸಿ]