ಹೆನ್ರಿ ಫೋರ್ಡ್
ಹೆನ್ರಿ ಫೋರ್ಡ್(ಜುಲೈ ೩೦, ೧೮೬೩ - ಏಪ್ರಿಲ್ ೭, ೧೯೪೭) ಅಮೇರಿಕದ ಕೈಗಾರಿಕೋದ್ಯಮಿ, ಫೋರ್ಡ್ ಮೋಟಾರ್ ಕಂಪನಿಯ ಸಂಸ್ಥಾಪಕರು ಮತ್ತು ಸಾಮೂಹಿಕ ಉತ್ಪಾದನೆ ಜೋಡಣೆ ತಂತ್ರ ಅಭಿವೃದ್ಧಿಯ ಪ್ರಾಯೋಜಕರು. ಫೋರ್ಡ್ ಮೋಟಾರ್ ಕಂಪನಿ ಮಾಲೀಕರಾಗಿ, ಅವರು ವಿಶ್ವದ ಶ್ರೀಮಂತ ಮತ್ತು ಪ್ರಸಿದ್ಧ ವ್ಯಕ್ತಿಯಾದರು. ೧೯ ನೆಯ ಶತಮಾನದ ಕೊನೆಯಲ್ಲಿ ಜಾಗತಿಕ ಕೈಗಾರಿಕಾ ಬೆಳವಣೆಗೆ ರೈಲು ರಸ್ತೆ ಮತ್ತು ಕಬ್ಬಿಣದ ಮೇಲೆ ಕೇಂದ್ರಿಕೃತವಾಗಿತ್ತು. ೧೯೨೦ ರ ಹೊತ್ತಿಗೆ ಜನರಿಗೆ ಉಪಯುಕ್ತವಾದ ಮತ್ತು ಬಳಕೆಗೆ ಬೇಕಾಗುವ ವಸ್ತುಗಳನ್ನು ತಯಾರಿಸುವ ಕೈಗಾರಿಕೆಗಳಿಂದ ಈ ಬೆಳವಣೆಗೆ ಪ್ರಭಾವಗೊಂಡಿತು. ಇವುಗಳಲ್ಲಿ ಬಹಳ ಮುಖ್ಯವಾದದ್ದು ಸ್ವಚಾಲಿತ ವಾಹನಗಳ ತಯಾರಿಕೆ. ಈ ದಿಶೆಯಲ್ಲಿ ಮುಂದಾಳುತನ ಪ್ರದರ್ಶಿಸಿ ಪ್ರಪಂಚದ ಮುಖವನ್ನೇ ಬದಲಾಯಿಸಲು ಕಾರಣನಾದವರು ಹೆನ್ರಿ ಫೋರ್ಡ್.
ನುಡಿಗಳು=
[ಸಂಪಾದಿಸಿ]- ಹಣವು ಮನುಷ್ಯರನ್ನು ಬದಲಾಯಿಸುವುದಿಲ್ಲ, ಅದು ಅವರ ಮುಖವಾಡವನ್ನು ಬಯಲಿಗೆಳೆಯುತ್ತದೆ.ವ್ಯಕ್ತಿಯು ಸ್ವಭಾವತಃ ಸ್ವಾರ್ಥಿ, ದುರಹಂಕಾರಿ ಅಥವಾ ದುರಾಸೆಯುಳ್ಳವನಾಗಿದ್ದರೆ ಹಣ ಅವನ್ನು ಹೊರಗೆಳೆಯುತ್ತದೆ ಅಷ್ಟೇ.
-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೪ ನವೆಂಬರ್ ೨೦೨೩ (UTC)
- ಬಹುತೇಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುವುದಕ್ಕೇ ಹೆಚ್ಚು ಸಮಯ ಮತ್ತು ಶಕ್ತಿಯನ್ನು ವ್ಯಯಿಸುತ್ತಾರೆಯೇ ವಿನಾ ಅವುಗಳನ್ನು ಪರಿಹರಿಸುವುದಕ್ಕೆ ಪ್ರಯತ್ನಿಸುವುದಿಲ್ಲ.
-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೧೫ ಎಪ್ರಿಲ್ ೨೦೧೯ (UTC)
- ಹಣವು ಸ್ವಾತಂತ್ರ್ಯ ತಂದುಕೊಡುತ್ತದೆ ಎಂಬ ಆಶಾಭಾವನೆ ನಿಮ್ಮದಾಗಿದ್ದರೆ,ಅದೆಂದೂ ಈಡೇರದು. ನಿಜವಾಗಲೂ ನಮಗೆ ಭದ್ರತಾ ಭಾವನೆ ತಂದುಕೊಡುವುದು, ನಾವು ಹೊಂದುವ ಜ್ಞಾನ,ಅನುಭವ ಮತ್ತು ಸಾಮರ್ಥ್ಯ.
-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೩೧ ಜುಲೈ ೨೦೨೩ (UTC)
- ಸೋಲೆಂದರೆ ಕೆಲಸವೊಂದನ್ನು ಪುನಃ, ಮತ್ತಷ್ಟು ಜಾಣತನದಿಂದ ಆರಂಭಿಸಲು ಸಿಗುವ ಇನ್ನೊಂದು ಅವಕಾಶ.
-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೨೧ ಡಿಸೆಂಬರ್ ೨೦೧೮ (UTC)