ವಿಷಯಕ್ಕೆ ಹೋಗು

ಸ್ವರಾಜ್ ಪ್ರಕಾಶ್ ಗುಪ್ತಾ

ವಿಕಿಕೋಟ್ದಿಂದ

ಎಸ್.ಪಿ. ಗುಪ್ತಾ ಎಂದೇ ಪ್ರಸಿದ್ಧರಾದ ಸ್ವರಾಜ್ ಪ್ರಕಾಶ್ ಗುಪ್ತಾ (1931 - 2007) ಒಬ್ಬ ಭಾರತೀಯ ಪುರಾತತ್ವಶಾಸ್ತ್ರಜ್ಞ ಮತ್ತು ಇತಿಹಾಸಕಾರರಾಗಿದ್ದರು.

ಉಲ್ಲೇಖಗಳು

[ಸಂಪಾದಿಸಿ]
  • “ಸಾಮಾನ್ಯವಾಗಿ ಹೇಳುವುದಾದರೆ, ದೇವಾಲಯವು 'ಪೂಜಾ ಸ್ಥಳ'. ಇದನ್ನು 'ದೇವರ ಮನೆ' ಎಂದೂ ಕರೆಯುತ್ತಾರೆ. ಆದಾಗ್ಯೂ, ಒಬ್ಬ ಹಿಂದೂಗೆ, ಅದು ಎರಡೂ ಒಂದೇ ಮತ್ತು ಅದಕ್ಕಿಂತಲೂ ಮಿಗಿಲಾದದ್ದು. ಇದು ಇಡೀ ಬ್ರಹ್ಮಾಂಡವಾಗಿದೆ ಚಿಕಣಿ ರೂಪದಲ್ಲಿ ಇದೆ”
    • ಎಲಿಮೆಂಟ್ಸ್ ಆಫ್ ಇಂಡಿಯನ್ ಆರ್ಟ್(೨೦೦೨ ರಲ್ಲಿ)
  • “ಗ್ರೀಕ್ ಕಲೆ ಗ್ರೀಕ್ ಸಂಸ್ಕೃತಿಯ ಉತ್ಪನ್ನದಂತೆ ಅಥವಾ ರೋಮನ್ ಕಲೆ ರೋಮನ್ ಸಂಸ್ಕೃತಿಯ ಉತ್ಪನ್ನದಂತೆ, ಭಾರತೀಯ ಕಲೆ ಭಾರತೀಯ ಸಂಸ್ಕೃತಿಯ ಉತ್ಪನ್ನವಾಗಿದೆ. ಆದಾಗ್ಯೂ, ಭಾರತೀಯ ಸಂಸ್ಕೃತಿಯು ಎರಡು ಆಲೋಚನೆಗಳು ಮತ್ತು ಆಚರಣೆಗಳ ಉತ್ಪನ್ನವಾಗಿದೆ, ಒಂದು - ಜಾನಪದ, ಹಳ್ಳಿಗಳಲ್ಲಿ ಜಾನಪದ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಮೌಖಿಕ ಸಂಪ್ರದಾಯಗಳಿಗೆ ಸೇರಿದ್ದು, ಮತ್ತು ಇನ್ನೊಂದು - ಶಾಸ್ತ್ರೀಯ, ಅತ್ಯಾಧುನಿಕ ಸಾಹಿತ್ಯ ಸಂಪ್ರದಾಯಗಳಿಗೆ ಸೇರಿದ್ದು, ಮೊದಲನೆಯದನ್ನು ಕೆಲವೊಮ್ಮೆ 'ಕೆಳ ಸಂಪ್ರದಾಯ' ಮತ್ತು ಎರಡನೆಯದನ್ನು 'ಉನ್ನತ ಸಂಪ್ರದಾಯ' ಎಂದು ಕರೆಯಲಾಗುತ್ತದೆ.”
    • ಎಲಿಮೆಂಟ್ಸ್ ಆಫ್ ಇಂಡಿಯನ್ ಆರ್ಟ್ (2002)
  • “ಸಿಂಧೂ-ಸರಸ್ವತಿ ನಾಗರಿಕತೆಯು ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಸಮಾನವಾಗಿ 1600 ಕಿ.ಮೀ.ಗಳಿಗಿಂತ ಹೆಚ್ಚು ವಿಸ್ತರಿಸಿದ್ದು, ಸುಮಾರು 2.5 ಮಿಲಿಯನ್ ಚದರ ಕಿ.ಮೀ ಮತ್ತು ಅದಕ್ಕಿಂತ ಹೆಚ್ಚಿನ ಪ್ರದೇಶವನ್ನು ಒಳಗೊಂಡಿದೆ. ಇಲ್ಲಿಯವರೆಗೆ ನಮಗೆ ತಿಳಿದಿರುವ ಉತ್ತರದ ಸ್ಥಳವೆಂದರೆ ಜಮ್ಮು ಬಳಿಯ ಬಿಯಾಸ್ ನದಿಯಲ್ಲಿರುವ ಮಂದಾ; ದಕ್ಷಿಣದ ಸ್ಥಳ ಗುಜರಾತ್‌ನ ತಪ್ತಿ ನದಿಯ ಭಗತ್ರವ್; ಪೂರ್ವದ ಸ್ಥಳ ಪೂರ್ವ ದೆಹಲಿಯ ಭೋರ್ಗಢ ಮತ್ತು ಮೀರತ್ ಜಿಲ್ಲೆಯ ಅಲಮ್‌ಗಿರ್ಪುರ; ಮತ್ತು ಪಶ್ಚಿಮದ ಸ್ಥಳ ಸುತ್ಕಾಗೆಂಡರ್, ಇದು ಇರಾನ್‌ನ ಪೂರ್ವ ಗಡಿಯ ಬಳಿ ಅರೇಬಿಯನ್ ಸಮುದ್ರದ ಪ್ರಾಚೀನ ತೀರದಲ್ಲಿದೆ. ಆದ್ದರಿಂದ, ಸಿಂಧೂ-ಸರಸ್ವತಿ ನಾಗರಿಕತೆಯು ಈಜಿಪ್ಟ್ ಮತ್ತು ಮೆಸೊಪಟ್ಯಾಮಿಯನ್ ಸೇರಿದಂತೆ ಯಾವುದೇ ಸಮಕಾಲೀನ ನಾಗರಿಕತೆಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು ವಿಸ್ತೀರ್ಣವನ್ನು ಹೊಂದಿತ್ತು”
    • ದಿ ಡಾನ್ ಆಫ್ ಇಂಡಿಯನ್ ಸಿವಿಲೈಸೇಶನ್ (ಪುಸ್ತಕ)
  • “ಇದು ಸಿಂಧೂ-ಸರಸ್ವತ ನಾಗರಿಕತೆಯ ಬಗ್ಗೆ ನೇರವಾಗಿ ಅಥವಾ ಪರೋಕ್ಷವಾಗಿ ವ್ಯವಹರಿಸುತ್ತಿದ್ದ ಜಗತ್ತಿನ ಎಲ್ಲಾ ಪುರಾತತ್ತ್ವಜ್ಞರಲ್ಲಿ ಗಂಭೀರ ಚರ್ಚೆಗೆ ಕಾರಣವಾಯಿತು, ಒಂದು ಗುಂಪು 'ಪೂರ್ವ-ಹರಪ್ಪನ್' ಎಂದು ಕರೆದರೆ, ಇನ್ನೊಂದು ಗುಂಪು 'ಆರಂಭಿಕ ಹರಪ್ಪನ್' ಎಂದು ಕರೆದಿದೆ. ಈ ವಿವಾದ ಏಕೆ ಹುಟ್ಟಿಕೊಂಡಿತು? ಇದೆಲ್ಲವೂ ಪುರಾತತ್ತ್ವ ಶಾಸ್ತ್ರದ ಅಧ್ಯಯನಗಳಲ್ಲಿನ 'ವಿಧಾನಗಳ' ಪ್ರಶ್ನೆಯಾಗಿದೆ”
    • "ಕಳೆದುಹೋದ (lost [ಇಂಗ್ಲಿಷ್ನಲ್ಲಿ])" ಸರಸ್ವತಿ ಮತ್ತು ಸಿಂಧೂ ನಾಗರಿಕತೆಯಲ್ಲಿ ಎಸ್.ಪಿ. ಗುಪ್ತಾ, ಪುಟ 186
  • “ವ್ಯಾಪಾರದ ಸಮತೋಲನವು ಭಾರತದ ಪರವಾಗಿರುವಂತೆ ಕಾಣುತ್ತದೆ; ಕೊಲ್ಲಿ ಮತ್ತು ಮೆಸೊಪಟ್ಯಾಮಿಯಾದಿಂದ ಆಮದು ಮಾಡಿಕೊಳ್ಳುವುದಕ್ಕಿಂತ ಹೆಚ್ಚಿನ ವಸ್ತುಗಳನ್ನು ಭಾರತದಿಂದ ರಫ್ತು ಮಾಡಲಾಗುತ್ತಿತ್ತು.”
    • ಗುಪ್ತಾ, ದಿ ಸಿಂಧೂ-ಸರಸ್ವತಿ ಸಿವಿಲೈಸೇಶನ್, ಪುಟಗಳು iv–v.

ಬಾಹ್ಯ ಕೊಂಡಿಗಳು

[ಸಂಪಾದಿಸಿ]
w
w
ವಿಕಿಪೀಡಿಯದಲ್ಲಿ ಇದರ ಬಗ್ಗೆ ಒಂದು ಲೇಖನವಿದೆ: