ವಿಷಯಕ್ಕೆ ಹೋಗು

ಸ್ಮೃತಿ ಮಂದಾನ

ವಿಕಿಕೋಟ್ದಿಂದ

ಸ್ಮೃತಿ ಮಂದಾನ - ಸ್ಮೃತಿ ಶ್ರೀನಿವಾಸ್ ಮಂಧಾನ ( ಜನನ 18 ಜುಲೈ 1996) ಭಾರತೀಯ ಮಹಿಳಾ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಅವರು ಮಹಿಳಾ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುತ್ತಾರೆ.

ಉಲ್ಲೇಖಗಳು

[ಸಂಪಾದಿಸಿ]
  • “ನಮಗಿಂತ ಮೊದಲು ಆಡಿದವರ ಪ್ರಯತ್ನಗಳು ಮತ್ತು ನಾವೆಲ್ಲರೂ ಒಂದು ಸಮುದಾಯವಾಗಿ ಒಟ್ಟಾಗಿ ಸೇರಿ ಮಾಡಿದ ಪ್ರಯತ್ನಗಳು ಈಗ ಇದನ್ನು ಸಾಧ್ಯವಾಗಿಸಿದೆ. 30 ಅಥವಾ 40 ವರ್ಷಗಳ ಹಿಂದೆ ಹೆಚ್ಚು ಸಿಗದಿದ್ದರೂ ಸಹ, ಆಡುವುದನ್ನು ಮುಂದುವರೆಸಿದ ಆ ಮಾಜಿ ಮಹಿಳಾ ಕ್ರಿಕೆಟಿಗರನ್ನು ಊಹಿಸಿ ನೋಡಿ. ಅವರು ನಮ್ಮ ಪ್ರಸ್ತುತ ವಾಸ್ತವವನ್ನು ಸಾಧ್ಯವಾಗಿಸಿದರು.”
  • “ಪುರುಷರ ಕ್ರಿಕೆಟ್ ಮತ್ತು ಮಹಿಳಾ ಕ್ರಿಕೆಟ್ ನಡುವಿನ ಹೋಲಿಕೆ ನನಗೆ ಇಷ್ಟವಿಲ್ಲ.”
  • “ಇದು ಬೇರೆಯದೇ ಆಟ. ನಮ್ಮನ್ನು ಒಂದೇ ವರ್ಗಕ್ಕೆ ಸೇರಿಸುವ ಅಗತ್ಯವಿಲ್ಲ.”
  • “ಆರಂಭದಲ್ಲಿ, ಟೆನಿಸ್ ಕ್ರೀಡೆಯಾಗಿ ಅಭಿವೃದ್ಧಿ ಹೊಂದುತ್ತಿದ್ದಾಗ, ವಿವಿಧ ಆಟಗಾರ್ತಿಯರ ಸರ್ವ್ ದರಗಳ ನಡುವೆ ಹೋಲಿಕೆಗಳನ್ನು ಮಾಡಲಾಗುತ್ತಿತ್ತು. ಈಗ ಅದು ಸೆರೆನಾ ವಿಲಿಯಮ್ಸ್ ಅವರನ್ನು ರೋಜರ್ ಫೆಡರರ್ ಅವರಂತೆಯೇ ಮೆಚ್ಚುವ ಹಂತಕ್ಕೆ ತಲುಪಿದೆ. ಕ್ರಿಕೆಟ್ ಕೂಡ ಆ ಸ್ಥಾನವನ್ನು ತಲುಪುವ ಸಮಯ ಬಂದಿದೆ.”

ಬಾಹ್ಯ ಕೊಂಡಿಗಳು

[ಸಂಪಾದಿಸಿ]
w
w
ವಿಕಿಪೀಡಿಯದಲ್ಲಿ ಇದರ ಬಗ್ಗೆ ಒಂದು ಲೇಖನವಿದೆ: