ವಿಷಯಕ್ಕೆ ಹೋಗು

ಸುನಿತಾ ವಿಲಿಯಮ್ಸ್

ವಿಕಿಕೋಟ್ದಿಂದ
ಸುನಿತಾ ವಿಲಿಯಮ್ಸ್
ಸುನಿತಾ ವಿಲಿಯಮ್ಸ್

ಸುನೀತಾ ವಿಲಿಯಮ್ಸ್ (ಜನನ ಸೆಪ್ಟೆಂಬರ್ ೧೯, ೧೯೬೫) ಅವರು ಅಮೇರಿಕದಲ್ಲಿ ನೌಕಾದಳದಲ್ಲಿ ಅಧಿಕಾರಿ ಹಾಗೂ ನಾಸಾದಲ್ಲಿ ಗಗನಯಾತ್ರಿಯಾಗಿದ್ದಾರೆ.[] ಅವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಏರ್ಪಡಿಸಿದ್ದ ಎಕ್ಸ್‌ಪೆಡಿಷನ್ ೧೪ ರ ಯಾನದಲ್ಲಿಯ ಗಗನ ಯಾತ್ರಿಗಳಲ್ಲಿ ಒಬ್ಬರನ್ನಾಗಿ ಆಯ್ಕೆ ಮಾಡಲಾಗಿತ್ತು. ನಂತರ ಎಕ್ಪ್‌ಪೆಡಿಷನ್ ೧೫ ರಲ್ಲೂ ಕೂಡ ಅವರನ್ನು ಬಳಸಿಕೊಳ್ಳಲಾಯ್ತು. ಅವರು ಅತಿ ಹೆಚ್ಚು ದಿನ (೧೯೫ ದಿನ) ಬಾಹ್ಯಾಕಾಶ ನೌಕೆಯಲ್ಲಿ ಕಾಲ ಕಳೆದ ಮಹಿಳೆ ಎಂಬ ದಾಖಲೆಯನ್ನು ಹೊಂದಿದ್ದಾರೆ.[]

ನುಡಿಗಳು

[ಸಂಪಾದಿಸಿ]
  • ಪ್ರಯಾಣ ಯಾವಾಗಲೂ ಆಶ್ಚರ್ಯಕರವಾಗಿರುತ್ತದೆ. ಒಂದು ತಾಣದ ಬಗ್ಗೆ ಅರ್ಥಮಾಡಿಕೊಳ್ಳಲು ಅಥವಾ ಅಲ್ಲಿಗೆ ಹೋಗುವವರೆಗೆ ಅದು ಹೇಗಿರುತ್ತದೆ ಎಂಬುದನ್ನು ನೀವು ಪುಸ್ತಕದಲ್ಲಿ ಓದಿದರೆ ಸಾಲುವುದಿಲ್ಲ, ಸ್ವತಃ ಅದನ್ನು ನೋಡಬೇಕು. ಆದ್ದರಿಂದ, ನಾನು ಸ್ಥಳಗಳ ಬಗ್ಗೆ ನನ್ನ ತೀರ್ಪನ್ನು ಕಾಯ್ದಿರಿಸುತ್ತೇನೆ. ಏಕೆಂದರೆ ನಾನು ಪ್ರತಿ ಬಾರಿ ಬೇರೆ ಬೇರೆ ಸ್ಥಳಗಳಿಗೆ ಹೋದಾಗ ನನಗೆ ಆಶ್ಚರ್ಯವಾಗಿದೆ ಮತ್ತು ನನಗೆ ಅದು ತುಂಬಾ ಇಷ್ಟ.
  • ಬಾಹ್ಯಾಕಾಶದಿಂದ ಭಾರತವು ಒಂದು ರತ್ನದಂತೆ ಕಾಣುತ್ತದೆ.



ಉಲ್ಲೇಖಗಳು

[ಸಂಪಾದಿಸಿ]
  1. ನಾಸಾ (2007). Sunita L. Williams (Commander, USN). National Aeronautics and Space Administration. Retrieved on December 19 2007.
  2. Tariq Malik (2007). Orbital Champ: ISS Astronaut Sets New U.S. Spacewalk Record. Space.com. Retrieved on December 19 2007.