ವಿಷಯಕ್ಕೆ ಹೋಗು

ಸುದೀಪ್

ವಿಕಿಕೋಟ್ದಿಂದ

ಸುದೀಪ ಅಥವಾ ಕಿಚ್ಚ ಸುದೀಪ (ಜನನ ೨ ಸೆಪ್ಟೆಂಬರ್ ೧೯೭೩) ಒಬ್ಬ ಭಾರತೀಯ ಚಲನಚಿತ್ರ ನಟ, ನಿರ್ದೇಶಕ, ನಿರ್ಮಾಪಕ, ಕಥೆ,ಚಿತ್ರಕಥೆಗಾರ,ವಿತರಕ,ದೂರದರ್ಶನ ನಿರೂಪಕ ಮತ್ತು ಹಿನ್ನೆಲೆ ಗಾಯಕ, ಇವರು ಮುಖ್ಯವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ, ಜೊತೆಗೆ ತೆಲುಗು, ಹಿಂದಿ ಮತ್ತು ತಮಿಳು ಭಾಷೆಯ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಉಲ್ಲೇಖಗಳು

[ಸಂಪಾದಿಸಿ]
  • "ನಾವು ಲೈಫಲ್ಲಿ ಬೇಳಿಬೇಕು, ಮೇಲೆ ಹೋಗ್ಬೇಕು, ಏನೇನೋ ಸಾಧನೆ ಮಾಡ್ಬೇಕು ಅನ್ನೋದೆಲ್ಲಾ ಸರಿ. ಅದಕ್ಕೆ ಸಂಬಂಧಪಟ್ಟು ಒಂದು ಬ್ಯೂಟಿಫುಲ್ ಸೇಯಿಂಗ್ ಇದೆ. ಎಲ್ಲಾನೂ ಒಂದು ಪ್ಯಾಕೇಜ್. ಇಟ್ಸ್ ಓಕೆ.. ಆದ್ರೆ ಎಲ್ಲಾರಿಗೂ ಫೇಮಸ್ ಆಗೋದಕ್ಕಾಗ್ಲೀ, ಸಾಧನೆ ಮಾಡೋದಕ್ಕಾಗ್ಲೀ ಸಾಧ್ಯ ಆಗೋದಿಲ್ಲ.. ಇತಿಹಾಸದ ಪುಟದಲ್ಲಿ ಹೆಸರು ಬರೆದುಕೊಳ್ಳೋಕೆ ಎಲ್ರಿಗೂ ಆಗಲ್ಲ.. ಭಗವಂತ, ಪ್ರಕೃತಿ ನಮಗೆ ಅದನ್ನ ಕೊಟ್ಟಿದೆ ಅಂದಾಗ, ಅದರೊಟ್ಟಿಗೆ ಹೋಗ್ಬಿಡಿ"
  • "ಉಪೇಂದ್ರ ಅವರು ದೊಡ್ಡವರು. ರವಿ ಸರ್ ಆಗಲಿ, ಉಪ್ಪಿ ಸರ್ ಆಗಲಿ ಇವರನ್ನೆಲ್ಲ ನಾವು ಮರೆಯುವ ಹಾಗಿಲ್ಲ. ಕನ್ನಡ ಚಿತ್ರರಂಗಕ್ಕೆ ಬಹಳಷ್ಟು ಕೊಡುಗೆ ಕೊಟ್ಟಿದ್ದಾರೆ. ನಮ್ಮ ಕನ್ನಡ ಚಿತ್ರರಂಗ ಬೆಳೆಯುವುದಕ್ಕೆ ಅವರ ಕೊಡುಗೆ ತುಂಬಾನೇ ಇದೆ. ತಂತ್ರಜ್ಞರಾಗಿ ಇವರೆಲ್ಲರೂ ಬಹಳ ದೊಡ್ಡ ಶಕ್ತಿ. ಅವರು ನನ್ನ ಕರೆದು ಸಿನಿಮಾ ತೋರಿಸುತ್ತಾರೆ ಅಂದರೆ, ಖುಷಿ ಖುಷಿಯಾಗಿ ಹೋಗುತ್ತೇನೆ"
  • "ಕನ್ನಡ ಅಲ್ಲ ಕನ್ನಡ… ಭಾಷೆಯ ಹೆಸರನ್ನ ಸರಿಯಾಗಿ ಉಚ್ಛರಿಸಬೇಕು."
  • “ನನ್ನ ತಾಯಿ ತುಂಬಾ ಚೆನ್ನಾಗಿ ತುಳು ಮಾತಾಡುತ್ತಾರೆ. ಒಂದು ದಿನ ಅವರನ್ನು ಕಳಿಸಿಕೊಡುತ್ತೇನೆ ಕೇಳಿ. ನನಗೆ ಬೇರೆ ಏನೂ ಹೇಳಿಕೊಟ್ಟಿಲ್ಲ. ಎಂಚಿನ ಮಾರಾರ್ರೆ, ಉಣಸಾಂಡ ಇಷ್ಟೇ ಹೇಳಿಕೊಟ್ಟಿದ್ದಾರೆ. ಯಾಕಂದ್ರೆ ಬಂದಿರುವ ಅತಿಥಿಗಳೊಂದಿಗೆ ಮಾತಾಡುವುದಕ್ಕೆ ಇಷ್ಟನ್ನು ಹೇಳಿಕೊಟ್ಟಿದ್ದರು”

ಸುದೀಪ್ ಬಗ್ಗೆ

[ಸಂಪಾದಿಸಿ]
  • "ಅವರು ತುಂಬಾ ಆತ್ಮೀಯ ಗೆಳೆಯ... ನಾನು ಅವರೊಂದಿಗೆ ಕ್ರಿಕೆಟ್ ಆಡಿದ್ದೇನೆ! ಅವರು ಒಬ್ಬ ಸಂಪೂರ್ಣ ಸಂಭಾವಿತ ವ್ಯಕ್ತಿ, ತುಂಬಾ ಒಳ್ಳೆಯ ವ್ಯಕ್ತಿ."ಅವರು ಸಿನಿಮಾ ಕ್ಷೇತ್ರದ ಗಡಿಗಳನ್ನು ವಿಸ್ತರಿಸುತ್ತಿರುವುದನ್ನು ನೋಡಿ ನನಗೆ ಸಂತೋಷವಾಗಿದೆ ಇದಕ್ಕಿಂತ ಹೆಚ್ಚಿನ ರೋಮಾಂಚನವಿಲ್ಲ."

ಬಾಹ್ಯ ಕೊಂಡಿಗಳು

[ಸಂಪಾದಿಸಿ]
w
w
ವಿಕಿಪೀಡಿಯದಲ್ಲಿ ಇದರ ಬಗ್ಗೆ ಒಂದು ಲೇಖನವಿದೆ:
"https://kn.wikiquote.org/w/index.php?title=ಸುದೀಪ್&oldid=13166" ಇಂದ ಪಡೆಯಲ್ಪಟ್ಟಿದೆ