ವಿಷಯಕ್ಕೆ ಹೋಗು

ಸಂಗೀತಾ ಕಲ್ಮನೆ

ವಿಕಿಕೋಟ್ದಿಂದ
  • ಅವರವರ ವೈಯಕ್ತಿಕ ಜೀವನ ಅವರವರಿಗೆ ಬಿಟ್ಟಿದ್ದು ಯಾರನ್ನು ನಾವು ದೂರುವಂತಿಲ್ಲ ಇದು ಗೊತ್ತಿದ್ದು ಆಗುವುದು ರಂಪಾಟ ಮದ್ಯದಲ್ಲಿ ಮೂಗು ತೂರಿಸುವ ಮೂರನೆಯ ವ್ಯಕ್ತಿಯಿಂದ ಇರಬೇಕು ನಮ್ಮ ಚಿತ್ತ ನಮ್ಮ ಕೈಯಲ್ಲಿ.
  • ನೋವು ಇದ್ದಿದ್ದೇ! ಮರುಗುತ್ತ ಕುಳಿತರೆ ನೋವು ಹೋಗುವುದೇ ಈಜಬೇಕು ಇದ್ದು ಜೈಸಬೇಕು ಮನೆಗೆ ಬಂದ ನೆಂಟ ಎಷ್ಟು ದಿನ ಇರಬಲ್ಲ?
  • ಗಿಡದ ಹೂವು ಯಾರನ್ನೂ‌ಕೇಳಿ ಅರಳುವುದಿಲ್ಲ ನದಿಯ ನೀರು ಯಾರನ್ನು ಕೇಳಿ ಹರಿಯುವುದಿಲ್ಲ ಬಾನಾಡಿಗಳು ಯಾರನ್ನು ಕೇಳಿ ಹಾರುವುದಿಲ್ಲ ಆದರೆ ಮನುಷ್ಯ ಏಕೆ ತನ್ನಿಷ್ಟದಂತೆ ಬದುಕಲು ಹಿಂಜರಿಯುವನು?
  • ಭಾವನೆಗಳು ನಮ್ಮನ್ನು ಆಳುತ್ತವೆ ಬಚ್ಚಿಡುವುದು ಅಸಾಧ್ಯ.
  • ನಿನ್ನ ನೀ ಅರಿಯದೆ ಅನ್ಯರನ್ನು ದೂರದಿರು ನಿನ್ನ ನಿಯತ್ತು ಅನ್ಯರಿಗೂ ವರವಾಗುವುದು. []

[]

ಕವಿತೆ

[ಸಂಪಾದಿಸಿ]
  • ಕವಿತೆ ಕಲ್ಪನೆಯ ದಾಹಕ್ಕೆ

ಶರಣಾಯಿತು ಪದಗಳು ದಂಡು ಪುಟ ಪುಟನೆ ನೆಗೆ ನೆಗೆದು ಬಿಳಿ ಹಾಳೆ ಅಲಂಕರಿಸಿಬಿಟ್ಟವು ಕಪ್ಪು ಬೊಟ್ಟನಿರಿಸಿಕೊಂಡು.

ಚುಟುಕುಗಳು

[ಸಂಪಾದಿಸಿ]
  • ಅಂದು ಖಾಲಿ ಹಾಳೆಯ ತುಂಬ

ಕನಸಿನ ಬುತ್ತಿ ತುಂಬಿ ಇಟ್ಟಿದ್ದೆ ಇಂದೇಕೋ ತೆಗೆದು ನೋಡಿದರೆ ಹಾಳೆಯ ಎಲ್ಲಾ ಖಾಲಿ ಖಾಲಿ.

  • ಅಂದು ನಿನ್ನ ಕಾಯುವಿಕೆ ಯಲ್ಲಿ

ಅದೇನೋ ಖುಷಿ ಇತ್ತು ಇಂದು ನಿನ್ನೊಂದಿಗೆ ಕಾಯುವಿಕೆಯೆಂಬ ಪದವೂ ಸುಳ್ಳಾಯಿತು.

ಉಲ್ಲೇಖಗಳು

[ಸಂಪಾದಿಸಿ]