ಶಿವರಾಜ್ಕುಮಾರ್ (ನಟ)
ಗೋಚರ
ಡಾ. ಶಿವರಾಜ್ಕುಮಾರ್ ಕನ್ನಡದ ಚಿತ್ರನಟ. ಡಾ. ರಾಜ್ಕುಮಾರ್ಅವರ ಹಿರಿಯಪುತ್ರ. ಶಿವಣ್ಣ ಎಂದೇ ಹೆಸರಾದ ಶಿವರಾಜ್ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು ೧೦೦ ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು.
ಉಲ್ಲೇಖಗಳು
[ಸಂಪಾದಿಸಿ]- “ಕನ್ನಡವೇ ನನ್ನ ಮೊದಲ ಆಯ್ಕೆ. ಎಲ್ಲ ಭಾಷೆಗಳೂ ಮುಖ್ಯ. ಆದರೆ ಕನ್ನಡ ಎಲ್ಲಕ್ಕಿಂತ ಮೊದಲು. ನಾನು ಕನ್ನಡಕ್ಕಾಗಿಯೇ ಪ್ರಾಣ ಕೊಡುವೆ.”
- “ನಮ್ಮ ಕುಟುಂಬ ಸ್ಯಾಂಡಲ್ವುಡ್ ಆಳೋದಕ್ಕೆ ಇಚ್ಛೆಪಡೋದಿಲ್ಲ.”
- "ರೈತ ದೇಶದ ಬೆನ್ನೆಲುಬು ಅಂತಾರೆ ಆ ರೈತನ ಬೆನ್ನೆಲುಬು ನಮ್ಮ ಕಾವೇರಿ. ರಾಜ್ಯದಲ್ಲಿ ಈ ಸರಿ ಮಳೆಯ ಅಭಾವವಿದು ರೈತ ಆಗಲೇ ಸಂಕಷ್ಟದಲ್ಲಿದಾನೆ. ಎರಡು ರಾಜ್ಯದ ನಾಯಕರು ಹಾಗು ನ್ಯಾಯಾಲಯ ಎಲ್ಲ ಅಂಶಗಳನ್ನು ಪರಿಶೀಲಿಸಿ ಒಂದು ಸಮಾಧಾನಕರ ಪರಿಹಾರ ಕಂಡುಕೊಳ್ಳಬೇಕು ಅನ್ನೋದು ನನ್ನ ಪ್ರಾರ್ಥನೆ."
- "ನನ್ನ ತಂದೆ ನಿಧನರಾದ ನಂತರ ನಾವು ಕೆಲವು ವಿಷಯಗಳಲ್ಲಿ ಮೌನವಾಗಿದ್ದೇವೆ ಎಂದು ಹಲವರು ಭಾವಿಸುತ್ತಾರೆ. ನಾನು ನಿಮಗೆ ಹೇಳುತ್ತೇನೆ, ನಾವು ಮೌನವಾಗಿಲ್ಲ ಮತ್ತು ಡಾ. ರಾಜ್ಕುಮಾರ್ ಅವರ ಆದರ್ಶಗಳಿಗೆ ವಿರುದ್ಧವಾದ ಯಾವುದೇ ಬೆಳವಣಿಗೆಯನ್ನು ನಾವು ಅನುಮತಿಸುವುದಿಲ್ಲ. ನಾನು ಮಾತ್ರವಲ್ಲ, ನನ್ನ ಇಬ್ಬರು ಸಹೋದರರು ಮತ್ತು ಅವರ ಮಕ್ಕಳು ಕನ್ನಡ ಚಲನಚಿತ್ರೋದ್ಯಮಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿದ್ದೇವೆ"
- "ನಾವು ಬೇರೆ ಬೇರೆ ಭಾಷೆಯ ಸಿನಿಮಾಗಳನ್ನು ನೋಡುತ್ತೇವೆ ಮತ್ತು ಬೇರೆ ಯಾವುದೇ ಭಾಷೆಯ ಸಿನಿಮಾಗಳ ವಿರುದ್ಧ ನಾವು ಇಲ್ಲ. ಬೇರೆ ದಾರಿಯ ಮೂಲಕ ಪ್ರವೇಶಿಸಲು ಪ್ರಯತ್ನಿಸುವ ಮೂಲಕ ಮಿತಿಮೀರುವುದು ಸ್ವೀಕಾರಾರ್ಹವಲ್ಲ ಮತ್ತು ಇದು ಸಂಭವಿಸಲು ನಾವು ಬಿಡುವುದಿಲ್ಲ ಎಂದು ನನ್ನ ತಂದೆಯ ಮೇಲೆ ಪ್ರಮಾಣ ಮಾಡುತ್ತೇನೆ."
