ಶಿವರಂಜನ್ ಸತ್ಯಂಪೇಟೆ
ಗೋಚರ
ಪತ್ರಕರ್ತ-ಲೇಖಕ ಶಿವರಂಜನ್ ಸತ್ಯಂಪೇಟೆ ಅವರು ಹೈದರಾಬಾದ್ ಕರ್ನಾಟಕದ ಸಾಂಸ್ಕೃತಿಕ ವಲಯದಲ್ಲಿ ಚಿರಪರಿಚಿತರು. 1973ರ ಏಪ್ರಿಲ್ 1ರಂದು ಶಹಾಪುರದಲ್ಲಿ ಜನಿಸಿದರು. ತಂದೆ ಹೆಸರಾಂತ ಪತ್ರಕರ್ತ-ವಿಚಾರವಾದಿ ಲಿಂಗಣ್ಣ ಸತ್ಯಂಪೇಟೆ. ತಂದೆಯ ಪ್ರಖರ ವೈಚಾರಿಕತೆಯ ಬೆಳಕಿನಲ್ಲಿ ಬೆಳೆದ ಶಿವರಂಜನ್ ಅವರು ಕಲ್ಬುರ್ಗಿಯ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಸ್ನಾತಕ (ಬಿ.ಎ.) ಮತ್ತು ಸ್ನಾತಕೋತ್ತರ (ಎಂ.ಎ.) ಪದವಿ ಪಡೆದಿದ್ದಾರೆ.
ಕೃತಿಗಳು
[ಸಂಪಾದಿಸಿ]- ಒಂದು ಮುಂಜಾವು,
- ಎಲೆಮರೆ,
- ಅರಿವಿನ ಹಣತೆ,
- ನಾಡೋಜ ಪಾಟೀಲ ಪುಟ್ಟಪ್ಪ,
- ಮುಖಾಮುಖಿ