ಶಶಿ ತರೂರ್
ಗೋಚರ
ಶಶಿ ತರೂರ್-(ಜನನ ೯ ಮಾರ್ಚ್ ೧೯೫೬ ) ಕೇರಳದ ತ್ರಿವೇಂದ್ರಮ್ ಕ್ಷೇತ್ರದಿಂದ ಆರಿಸಿ ಬಂದ ಭಾರತದ ಸಂಸತ್ತಿನ ಸದಸ್ಯರಾಗಿದ್ದಾರೆ ಮತ್ತು ಈಗ ಭಾರತದ ವಿದೇಶಾಂಗ ಖಾತೆಯ ರಾಜ್ಯ ಸಚಿವರಾಗಿದ್ದಾರೆ. ಇದಕ್ಕೂ ಮುನ್ನ, ೨೦೦೨ರಿಂದ ೨೦೦೭ರವರೆಗೆ,ಯುನೈಟೆಡ್ ನೇಷನ್ಸ್ ನ ಪ್ರಧಾನ ಕಾರ್ಯದರ್ಶಿಯಾಗಿ ಕೋಫಿ ಅಣ್ಣನ್ ಕಾರ್ಯನಿರ್ವಹಿಸುತ್ತಿದ್ದ ಅವಧಿಯಲ್ಲಿ, ಯುನೈಟೆಡ್ ನೇಷನ್ಸ್ ನ ಸಂಪರ್ಕ ಮತ್ತು ಸಾರ್ವಜನಿಕ ಮಾಹಿತಿ ವಿಭಾಗದ ಅಧೀನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯವಹಿಸಿದರು. ೨೦೦೬ರಲ್ಲಿ ಯುನೈಟೆಡ್ ನೇಷನ್ಸ್ ನ ಪ್ರಧಾನ ಕಾರ್ಯದರ್ಶಿಯ ಕಚೇರಿಗೆ ಅವರು ಭಾರತದ ಅಧಿಕೃತ ಅಭ್ಯರ್ಥಿಯಾಗಿ ಸೂಚಿತರಾಗಿ,ಆ ಹುದ್ದೆಗೆ ಆಯ್ಕೆಯಾಗಲು ಮುಂಚೂಣಿಯಲ್ಲಿದ್ದ ಏಳು ಅಭ್ಯರ್ಥಿಗಳಲ್ಲಿ ಎರಡನೆಯ ಸ್ಥಾನವನ್ನು ಪಡೆದರು. ಅವರು ಉತ್ತಮ ಲೇಖಕರೂ, ಅಂಕಣಕಾರರೂ, ಪತ್ರಕರ್ತರೂ, ಮಾನವ-ಹಕ್ಕುಗಳನ್ನು ಪ್ರತಿಪಾದಿಸುವವರೂ ಹಾಗೂ ಪರೋಪಕಾರಿಗುಣ ಉಳ್ಳವರೂ ಆಗಿದ್ದಾರೆ.
ಉಕ್ತಿಗಳು
[ಸಂಪಾದಿಸಿ]- "ದೇಶದ ದೇಶೀಯ ಆರ್ಥಿಕತೆಯಲ್ಲಿ ಆಳವಾದ ಮತ್ತು ದ್ರವ ಮಾರುಕಟ್ಟೆಗಳು ಅಗತ್ಯವಾದ ಆಘಾತ ಅಬ್ಸಾರ್ಬರ್‌ಗಳಾಗಿವೆ."