ಲುಡ್ವಿಗ್ ವೋನ್ ಮೈಸೆಸ್
ಗೋಚರ

ಲುಡಿಗ್ ವೋನ್ ಮೈಸೆಸ್ (೨೯ ಸೆಪ್ಟೆಂಬರ್ ೧೮೮೧ - ೧೦ ಅಕ್ಟೋಭರ್ ೧೯೭೩) ಆಸ್ಟ್ರಿಯಾ ಮೂಲದ ಅರ್ಥಶಾಸ್ತ್ರಿ, ಲೇಖಕ ಮತ್ತು ತತ್ವಶಾಸ್ತ್ರ ನಿಪುಣ. ಆಸ್ಟ್ರಿಯಾ ಅರ್ಥಶಾಸ್ತ್ರ ಶಾಲೆಯ ಅಗ್ರಗಣ್ಯ ಮೇಧಾವಿ ಎನಿಸಿದ ಮೈಸೆಸ್ ೧೯೭೪ರ ಅರ್ಥಶಾಸ್ತ್ರ ನೊಬೆಲ್ ಪಡೆದರು.
- ಉದಾರವಾದದ ಮುಖ್ಯ ಗುರಿ ಮನುಜರ ನಡುವೆ ಶಾಂತಿಯುತ ಸಹಕಾರ. ಉತ್ಪಾದನೆ ಮಾಡುವ ಮೂಲಗಳು, ಸರಕಾರದ ಅಧೀನದಲ್ಲಿ ಇರದೆ, ಜನಸಾಮಾನ್ಯರ ಅಧೀನದಲ್ಲಿ ಇದ್ದರೆ ಜನಗಳು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಸರಕು, ಸರಂಜಾಮುಗಳನ್ನು ತಯಾರು ಮಾಡುವರು ಮತ್ತು ಪರಸ್ಪರ ವ್ಯಾಪಾರ ವಹಿವಾಟು ನಡೆಸುವರು. ವಹಿವಾಟುಗಳು ಪರಸ್ಪರ ಅನುಕೂಲದ ಉದ್ದೇಶದಿಂದ ನಡೆವಾಗ, ಅಶಾಂತಿಗೆ ಅವಕಾಶ ಕಡಿಮೆ.
- ಹಣದುಬ್ಬರ ಎಂದರೆ ಹಣದ ಅಗತ್ಯಕ್ಕಿಂತಲೂ, ಹಣದ ಪ್ರಮಾಣ ಹೆಚ್ಚು ಆಗುವುದು. ಸರಕುಗಳು ಇರುವಷ್ಟೇ ಇರುವುದು ಆದರೆ, ಸರಕಾರ ತನ್ನ ನೋಟುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡೂಗಡೆ ಮಾಡುತ್ತದೆ. ಅದಾಗ ಮಾತ್ರ ಸರಕುಗಳ ಬೆಲೆ ಹೆಚ್ಚು ಆಗುತ್ತದೆ
- ಸರಕಾರ ತನ್ನ ಆದಾಯವನ್ನು ಬಲು ಸುಲಭವಾಗಿ ಹೆಚ್ಚು ಮಾಡಿಕೊಳ್ಳುವ ವಿಧಾನ ಎಂದರೆ ಹಣದುಬ್ಬರ. ಇದು ಜನರಿಗೆ ಸುಲಭವಾಗಿ ಅರ್ಥ ಆಗದು.
- ಸಿದ್ಧಾಂತಗಳ ಪುರಾವೆ, ನಿಖರತೆಯನ್ನು ತರ್ಕದ ಆಧಾರದ ಮೇಲೆ ನಿರ್ಧಾರ ಮಾಡಬೇಕು. ದುರದೃಷ್ಟ ಎಂದರೆ, ಇಂದು ಸಿದ್ಧಾಂತಗಳ ನಿಖರತೆಯನ್ನು ಯಾರು ಅವುಗಳಿಗೆ ಬೆಂಬಲ ವ್ಯಕ್ತಪಡಿಸುವರೋ, ಅದರ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತಿದೆ.
- ಯುದ್ಧದ ಕಾರಣಕ್ಕಾಗಿ ಮಾಡಿದ ಉತ್ಪಾದನೆಯಿಂದ ಪ್ರಗತಿ ಉಂಟಾಯಿತು ಎನ್ನುವ ವಾದ ಭೂಕಂಪ, ಪ್ಲೇಗ್ ಇವುಗಳಿಂದ ಪ್ರಗತಿ ಉಂಟಾಯಿತು ಎನ್ನುವ ಹಾಗೆಯೇ.
- ಸಮಾಜವಾದವೇ ನಮ್ಮ ನಿತ್ಯ ಬದುಕಿನ ಮಂತ್ರ ಆಗಿಬಿಟ್ಟಿದೆ. ಜನರ ಮನಸ್ಸಿನಲ್ಲಿ, ಇದು ಸಮಾಜವಾದ ಸರಿ ಎನ್ನುಅ ಬೀಜ ಬಿತ್ತುವ ಕೆಲಸ ಅಹರ್ನಿಶಿ ನಡೆದಿದೆ. ಅದರ ವಿನಃ ಬೇರೆ ಯಾವುದೇ ಬಗೆಯೇ ಇಲ್ಲ ಎಂದು ಜನಸಾಮಾನ್ಯರು ನಂಬಿಬಿಟ್ಟಿದ್ದಾರೆ.
- ತರ್ಕಬದ್ಧ ನಿರ್ಧಾರ ಮತ್ತು ನಡತೆಗಳು ಉಳಿತಾಯದ ಮೂಲ. ಅದನ್ನು ಕೇವಲ ಒಬ್ಬ ವ್ಯಕ್ತಿಯ ಮಟ್ತದಲ್ಲಿ ಮಾಡಲು ಮಾತ್ರ ಸಾಧ್ಯ. ವೈಯಕ್ತಿಕ ಮಟ್ಟದಲ್ಲಿ ಮಾತ್ರ ತರ್ಕಬದ್ ನಿರ್ಧಾರ, ನಡೆ ಇವು ಸಾಧ್ಯ. ಜನರು ಕೂಡಿದಾಗ, ಹಲವು ಬಗೆಯ ನಿರ್ಧಾರಗಳು ಚರ್ಚೆಯಾಗಿ, ಬಹುಮತದ ನಿರ್ಧಾರವೇ ಅಂತಿಮ ಆಗುತ್ತದೆ. ತರ್ಕಕ್ಕಿಂತ, ಬಹುಮತ ಮತ್ತು ಒಪ್ಪಿಗೆಗಳು ಮುಖ್ಯ ಆಗುತ್ತವೆ. ಅಂತಹ ಸಮಯದಲ್ಲಿ, ತಾರ್ಕಿಕವಾಗಿ ಸರಿಯಾದುದನ್ನು ಮಾಡಲು ಆಗದು. ಇದು ಸಮಾಜವಾದದ ಮೂಲ ವೈಫಲ್ಯ.
- ಬೇರೆಯವರು ನಮ್ಮ ಹೊಟ್ಟೆಪಾಡಿಗೆ ದಾರಿ ಮಾಡಿಕೊಡುತ್ತಾರೆ ಎಂಬ ಅಚಲ ನಂಬಿಕೆಯೇ ನಿರುದ್ಯೋಗ ಸಮಸ್ಯೆಯ ಮೂಲ. ಈ ರೀತಿಯ ಮನೋಭಾವ, ಜನರ ಮನದಲ್ಲಿ ಕೆಲಸದ ಎಡೆಗೆ ಇರುವ ಶ್ರದ್ಧೆಯನ್ನು ಕಿತ್ತು ಹಾಕುತ್ತದೆ. ಉದಾಸೀನತೆ ಮನೆ ಮಾಡಿದಾಗ, ಸೋಮಾರಿತನ ಮಗೆ ಅಂಟಿಬಿಡುತ್ತದೆ.
- ಮೂಲಧನವಾದ(ಬಂಡವಾಳವಾದ)ದ ವಿರೋಧವೇ ಎಲ್ಲಾ ಯುದ್ಧಕೋರರ, ಸರ್ವಾಧಿಕಾರಿಗಳ ಮತ್ತು ಕ್ರಾಂತಿಕೋರರ ಗುಣಲಕ್ಷಣ. ಸರಕಾರವೇ ಎಲ್ಲವನ್ನೂ ನಿರ್ಧಾರ ಮಾಡಬೇಖು ಎನ್ನುವ ನೀತಿಯಿಂದ ದುಡಿದು ಗಳಿಸಿ ಬದುಕಬೇಕು ಎನ್ನುವ ಗುರಿ ಜನರ ಮನದಿಂದ ದೂರ ಆಗುತ್ತದೆ.
- ಸರಕಾರವು ಎಲ್ಲವನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಹವಣಿಸುತ್ತದೆ.

- ಸರಕಾರದ ಹಂಚುವಿಕೆಯಿಂದ ಉದ್ಯೋಗಗಳು ಸೃಷ್ಟಿ ಆಗಲಾರವು. ಸರಕಾರದ ತೆರಿಗೆಗಳು ಮತ್ತು ಸರಕಾರದ ಸಾಲಗಳು ಯಾವತ್ತೇ ಆದರೂ, ಉದ್ಯೋಗಗಳನ್ನು ಕಡಿತಗೊಳಿಸುತ್ತವೆ. ಎಲ್ಲಿಯೇ ನೋಡಿ, ತೆರಿಗೆ ಇಲ್ಲದೆಯೇ ಇರುವುದು ಮತ್ತು ಕಡಿಮೆ ತೆರಿಗೆ ಇರುವ ಜಾಗಗಳಲ್ಲಿ ಮಾತ್ರವೇ ಉದ್ಯೋಗಗಳು ಭರಪೂರವಾಗಿ ಇರುತ್ತವೆ.
- ಕೇವಲ ಸಾಲದ ಆಧಾರದ ಮೇಲೆ ನಿಂತಿರುವ ಪ್ರಗತಿಯು ಕ್ಷಣಿಕ ಆದದ್ದು. ಅದು, ನಿಶ್ಚಿತವಾಗಿ ಆರ್ಥಿಕ ಕುಸಿತವನ್ನು ತರುತ್ತದೆ.
