ವಿಷಯಕ್ಕೆ ಹೋಗು

ಲಾರೆನ್ಸ್ ರೀಡ್

ವಿಕಿಕೋಟ್ದಿಂದ

ಲಾರೆನ್ಸ್ ರೀಡ್ ಅಮೇರಿಕಾದ ಅರ್ಥ ಶಾಸ್ತ್ರ ಪರಿಣತ.

  • ಮಾರಿಜುನಾ(ಮಾದಕ ದ್ರವ್ಯ)ಕ್ಕಿಂತಲೂ, ಈಜುಕೊಳಗಳು ಹೆಚ್ಚು ಜನರನ್ನು ಬಲಿತೆಗೆದುಕೊಂಡಿವೆ. ಮಾದಕ ದ್ರವ್ಯಗಳ ವಿರುದ್ದದ ಸಮರವು ಮಾದಕ ದ್ರವ್ಯಗಳಿಗಿಂತ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿವೆ.[]
  • ಸಮಾಜ ಕಲ್ಯಾಣ ಕಾರ್ಯಕ್ರಮಗಳ ಮೂಲಮಂತ್ರ: ತನಗಾಗಿ ಹಣ ಖರ್ಚು ಮಾಡುವುದು ಸ್ವಾರ್ಥ ಮತ್ತು ಕೆಟ್ಟದ್ದು, ಪರರಿಗಾಗಿ ಹಣ ಖರ್ಚು ಮಾಡುವುದು ಒಳ್ಳೆಯದು ಮತ್ತು ಉದಾತ್ತತೆ. []
  • ಚಲನಚಿತ್ರಗಳಲ್ಲಿ, ಬಂಡವಾಳಶಾಹಿಗಳು ಸದಾಕಾಲವೂ ಖೂಳರೇ
  • ನಿರಾಶಾವಾದದಿಂದ ಪ್ರಯೋಜನವಿಲ್ಲ. ಕೆಲಸ ಆಗದು ಎಂದು ನಂಬಿದರೆ ಯಾರೂ ಕೂಡಾ ಕೆಲಸಕ್ಕೆ ಕೈ ಜೋಡಿಸಲಾರರು.
  • ಸಮಾಜವಾದ ಪ್ರಕಾರ ಒಳ್ಳೆಯ ಗುರಿಯನ್ನು ತಲುಪಲು, ಹಲವು ಮಂದಿಯ ಬಲಿ ತೆಗೆದುಕೊಂಡರೂ ಪರವಾಗಿಲ್ಲ.
  • ಸಮಾಜವಾದವು ಹಸುವನ್ನು ಹಿಂಡುತ್ತಾ ಕೊಲ್ಲುವ ವಿಧಾನವೇ ಸರಿ.
  • ಜನರಿಂದ ಅವರ ದುಡಿಮೆಯ ಫಲವನ್ನು ಕಿತ್ತು, ಪರರಿಗೆ ಹಂಚುವ ವಿಧಾನವನ್ನು ಏಸು ಪ್ರಭುವು ಒಪ್ಪಲಾರ []
  • ಸರ್ಕಾರವು ಮೊದಲು ಜನರಿಂದ ಕಿತ್ತುಕೊಳ್ಳುತ್ತದೆ. ಬೇಕಾಬಿಟ್ಟಿ ಖರ್ಚು ಮಾಡಿ, ಉಳಿದುದರಲ್ಲಿ ಸ್ವಲ್ಪವನ್ನು ಹಂಚುತ್ತದೆ.
  • ಯಾರೋ ಒಬ್ಬರು ದುಡಿದು ಇಟ್ಟದ್ದನ್ನು, ಕಿತ್ತುಕೊಂಡು, ಸರ್ಕಾರ ಒಳಿತು ಮಾಡಲು ಹೊರಡುತ್ತವೆ. ಆ ಒಳಿತು, ಜನರಿಗೋ, ಸರ್ಕಾರಿ ನೌಕರರಿಗೋ ಎಂಬುದೇ ನಿಗೂಢ ರಹಸ್ಯ
  • ಹೆಚ್ಚಿನ ತೆರಿಗೆ ವಿಧಿಸುವುದರಿಂದ ಯಾವ ದೇಸೀ ಉದ್ಯಮವನ್ನೂ ಉಳಿಸಲಾಗದು. ಜನಬಳಕೆಯ ವಸ್ತುಗಳನ್ನು ಲಾಭಕರವಾಗಿ ತಯಾರಿಸಲು ಆಗದ ಉದ್ಯಮವನ್ನು ಉಳಿಸುವ ಯಾವ ಪ್ರಯತ್ನಗಳೂ ಫಲ ನೀಡವು.
  • ಸಮಾಜವಾದವು ಉಂಟುಮಾಡಿರುವ ದುಃಖ, ಹಿಂಸೆ, ಅಮಾನವೀಯ ಸಾವು, ರಕ್ತಪಾತ, ಇವನ್ನು ಕೆಲ ನಾಯಕರ ತಪ್ಪುಗಳು ಎಂದು ಹೇಳುವುದು, ಘೋರವಾದ ಮತ್ತು ಅತಿ ನೀಚವಾದ ವಾದ.
  • ಜನರ ಕಲ್ಯಾಣ ಮಾಡುವುದೇ ಧ್ಯೇಯ ಎನ್ನುವ ಮಂದಿಯ ಬಗ್ಗೆ ಎಚ್ಚರ