ವಿಷಯಕ್ಕೆ ಹೋಗು

ಲಲಿತಾ ಸಿದ್ಧಬಸವಯ್ಯ

ವಿಕಿಕೋಟ್ದಿಂದ

ಕವಯಿತ್ರಿ ಲಲಿತಾ ಸಿದ್ಧಬಸವಯ್ಯ ಕನ್ನಡ ಸಾಹಿತ್ಯ ಲೋಕದ ಪ್ರಸಿದ್ಧ ಲೇಖಕಿ, ಕವಿ, ನಾಟಕಕಾರ್ತಿಯಾಗಿದ್ದಾರೆ. ಅವರು ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದಾರೆ. ಇವರು ೨೮ ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿ ಕಾರ್ಯನಿರ್ವಹಿಸಿದರು.

ಕವಿತೆಗಳು

[ಸಂಪಾದಿಸಿ]

ಪ್ರೀತಿಗೊಂಡು

  • ಕಾಮದೇವನ

ಕಂಡ ಮೇಲಿನ್ನಾರನು ಕಾಣುವುದೇ ಹೇಳು ಸಖೀ, ಉಂಟೆಲ್ಲೆ ಜಗದೊಳು ಟಿಂವ್ವಟಿಂವ್ವನೆ ಎದೆ ಮೀಂಟಿದವನಂಥ ಪುರುಷ !

  • ಕಂಡೇನೇ ಆ ಕಣ್ಣು

ಹಾಲ ಗಡಿಗೆಯೊಳು ಚಲಚಲಿಪ ಗುಂಡು ನೇರಳೆಹಣ್ಣು ಅದೆಂತಹ ಹಣೆಯೇ ಅದು ಸಣ್ಣದಲ್ಲ ದೊಡ್ಡದಲ್ಲ ಬೆಣ್ಣೆ ಸವರಿದಂಗೆ ರೇಸಿಮೆಯ ಮೇಲೆ ನುಣ್ಣಗೆ ಮಿನುಗುವುದಲ್ಲೆ ಆ ತಿಲಕವೊ ಒಂಟಿ ಎಳೆ ಮಾವಿನಕಾಯಿ ಗೊನೆ ಕಳಚಿ ಕೂತಂಗೆ ಕೆನೆಮೊಸರ ಮೇಗೆ ಪಳಗಿದ ಕೈ ಬರೆದ ಚಿತ್ರದೊಳು ತಿದ್ದಿದಂತಿದ್ದಾವೆ ಏರಿಯೇರಿಳಿವ ಆ ಜೋಡುಹುಬ್ಬು

  • ಬೆದರುಬೊಂಬೆ

ಗೆ ಬಣ್ಣ ಬಳಿದಂಗಲ್ಲವೇ ಅವನ ಕದಪು ಅಲ್ಲವೇ ಅವನ ತುಟಿ ಹೊಗೆಬತ್ತಿ ಸೇದಿದ್ಹಾಂಗೆ ಮುದ್ದೆ ಗಲ್ಲವಲ್ಲವೇ ಅವನವು ಕಿವಿ ಮುತ್ತುಗವಲ್ಲ ಮುತ್ತು ಆರಿಸಿ ಚಿತ್ತ ಒತ್ತೆಯಿರಿಸಿ ಕೆತ್ತಿಟ್ಟ ಚಿತ್ತಿಲ್ಲದ ಚೆದುರನೇ ಎನ್ನ ಕಾಮದೇವ

  • ಯಾರ ಆಸ್ತಿಯನು ತಿರುವಿಕೊಂಡಿದ್ದನೇ

ಯಾರ ಮಸ್ತಿಯನು ಕೆಡಿಸಿ ಕೇಕೆಯಿಟ್ಟಿದ್ದನೇ ಏನು ಮಾಡಿದ್ದನೇ ಅಂಥದ್ದೇನು ಮಾಡಿದ್ದನೇ ಮಾಡಬಾರದ್ದೇನು ಮಾಡಿದ್ದನೇ ನನ್ನ ಮನ್ಮಥರಾಯ , ಸುಟ್ಟರಲ್ಲೇ ಅವನ ನಿಂತ ನಿಲುವಿಗೆ ಸುಟ್ಟರೇ. []

ಕವನ ಸಂಕಲನಗಳು

[ಸಂಪಾದಿಸಿ]
  • ಮೊದಲಸಿರಿ
  • ಇಹದಸ್ವರ
  • ಕೆಬ್ಬೆನ್ನೆಲ
  • ದಾರಿನೆಂಟ
  • ಬಿಡಿ ಹರಳು
  • ಮರಕತಮಣಿ