ವಿಷಯಕ್ಕೆ ಹೋಗು

ರೊನಾಲ್ಡ್ ರೇಗನ್.

ವಿಕಿಕೋಟ್ದಿಂದ

ರೊನಾಲ್ಡ್ ವಿಲ್ಸನ್ ರೇಗನ್ (1911–2004) ಅಮೆರಿಕದ ರಾಜಕಾರಣಿ ಮತ್ತು ನಟರಾಗಿದ್ದರು. ಅವರು 1981ರಿಂದ 1989ರವರೆಗೆ ಅಮೆರಿಕದ 40ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದರು. ರಿಪಬ್ಲಿಕನ್ ಪಕ್ಷದ ಸದಸ್ಯರಾದ ರೇಗನ್, ಅಮೆರಿಕದ ಕನ್ಸರ್ವೇಟೀವ್ (ಸಂಪ್ರದಾಯವಾದಿ) ಚಳವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿದ್ದರು. ಅವರ ಆಡಳಿತವನ್ನು "ರೇಗನ್ ಯುಗ" ಎಂದು ಕರೆಯುತ್ತಾರೆ.

ಇಲಿನಾಯ್ಸ್‌ನಲ್ಲಿ ಜನಿಸಿದ ಅವರು, ನಾಯಕತ್ವ ವಹಿಸುವ ಮೊದಲು ಚಲನಚಿತ್ರ ನಟ ಮತ್ತು ಪ್ರಸಾರಕರಾಗಿದ್ದರು. ಕ್ಯಾಲಿಫೋರ್ನಿಯಾ ರಾಜ್ಯದ ಗವರ್ನರ್ ಆಗಿ (1967–1975) ಸೇವೆ ಸಲ್ಲಿಸಿ, 1980ರಲ್ಲಿ ಜೆಮ್ಮಿ ಕಾರ್ಟರ್ ವಿರುದ್ಧ ಭಾರೀ ಮತಗಳಿಂದ ಜಯಗಳಿಸಿದರು. ರಾಷ್ಟ್ರಪತಿಯಾಗಿ ಅವರು "ರೇಗನಾಮಿಕ್ಸ್" ಅಂದರೆ ತೆರಿಗೆ ಕಡಿತ, ಸರ್ಕಾರಿ ವೆಚ್ಚ ಇಳಿಕೆ ಮತ್ತು ಆರ್ಥಿಕ ನಿಯಂತ್ರಣ ಮುಕ್ತ ನೀತಿಗಳನ್ನು ಅನುಸರಿಸಿದರು. ಶೀತಯುದ್ಧದ ಸಂದರ್ಭದಲ್ಲಿ ಸೋವಿಯತ್ ಯೂನಿಯನ್ ವಿರುದ್ಧ ಗಟ್ಟಿಯಾದ ನಿಲುವು ತೆಗೆದುಕೊಂಡರು. 1984ರ ಚುನಾವಣೆಯಲ್ಲಿಯೂ ಭಾರೀ ಜಯ ಗಳಿಸಿದರು.

ಅವರು 1989ರಲ್ಲಿ ಅಧಿಕಾರದಿಂದ ನಿವೃತ್ತರಾದ ನಂತರ 1994ರಲ್ಲಿ ಅಲ್ಜೈಮರ್‌ ರೋಗದ ನಿದಾನಗೊಂಡು, 2004ರಲ್ಲಿ ನಿಧನರಾದರು. ರೇಗನ್‌ರನ್ನು ಅಮೆರಿಕದ ರಕ್ಷಣಾತ್ಮಕ ಧೋರಣೆಯ ಪ್ರತೀಕವಾಗಿ ಪರಿಗಣಿಸಲಾಗುತ್ತದೆ.[]

ನುಡಿಗಳು

[ಸಂಪಾದಿಸಿ]

"ಶ್ರೇಷ್ಠ ನಾಯಕನು ಎಲ್ಲೋ ದೊಡ್ಡ ಕೆಲಸ ಮಾಡುವವನಲ್ಲ; ಬದಲಾಗಿ, ಜನರಿಂದ ದೊಡ್ಡ ಕೆಲಸ ಮಾಡಿಸಬಲ್ಲವನು."


"ನಾವು ಎಲ್ಲರಿಗೂ ಸಹಾಯ ಮಾಡಲಾಗದು, ಆದರೆ ಪ್ರತಿಯೊಬ್ಬರೂ ಯಾರಿಗಾದರೂ ಸಹಾಯ ಮಾಡಬಹುದು."

"ಸ್ವಾತಂತ್ರ್ಯ ಎಂಬುದು ಒಂದು ಪೀಳಿಗೆಯಿಂದ ಇನ್ನೊಂದಕ್ಕೆ ರಕ್ತದ ಮೂಲಕ ಸಾಗುವುದಿಲ್ಲ. ಅದನ್ನು ನಾವು ಕಾಪಾಡಬೇಕು, ಹೋರಾಡಬೇಕು ಮತ್ತು ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡಬೇಕು."


"ನಿಜವಾದ ಶಕ್ತಿಯು ಹೋರಾಡುವ ಅಗತ್ಯವಿಲ್ಲದಿರುವಂತೆ ಮಾಡುವ ಶಕ್ತಿಯೇ ಆಗಿದೆ—ಯಾಕೆಂದರೆ ಯಾರೂ ಆ ಶಕ್ತಿಯನ್ನು ಪ್ರಚೋದಿಸುವ ಧೈರ್ಯವಿರಿಸಬಾರದು."

ಸರ್ಕಾರ ಮತ್ತು ಹೊಣೆಗಾರಿಕೆ "ಸಮಸ್ಯೆಗಳಿಗೆ ಸರ್ಕಾರವೇ ಪರಿಹಾರವಲ್ಲ—ಸರ್ಕಾರವೇ ಸಮಸ್ಯೆಯಾಗಿದೆ... ಇದು ಚಲಿಸುತ್ತಿದ್ದರೆ ತೆರಿಗೆ ಹಾಕಿ, ಇನ್ನೂ ಚಲಿಸುತ್ತಿದ್ದರೆ ನಿಯಂತ್ರಿಸಿ, ನಿಲ್ಲಿಸಿದರೆ ಸಹಾಯಧನ ನೀಡಿ."


"ಪ್ರತಿ ಬಾರಿ ಕಾನೂನು ಉಲ್ಲಂಘನೆಯಾಗುವಾಗ ಸಮಾಜವನ್ನೇ ತಪ್ಪುಗಾರನೆಂದು ಕರೆಯುವ ಭಾವನೆಗೆ ತಡೆ ಹಾಕಬೇಕು. ಪ್ರತಿಯೊಬ್ಬನು ತನ್ನ ಕೃತ್ಯಗಳಿಗೆ ಜವಾಬ್ದಾರನಾಗಿರಬೇಕು ಎಂಬ ಅಮೆರಿಕದ ತತ್ತ್ವವನ್ನು ಮರಳಿ ಸ್ಥಾಪಿಸಬೇಕಾಗಿದೆ."


"ಅಮೆರಿಕದ ಎಲ್ಲಾ ಮಹತ್ತರವಾದ ಬದಲಾವಣೆಗಳು ಊಟದ ಮೇಜಿನಲ್ಲಿ ಆರಂಭವಾಗುತ್ತವೆ."


"ರಾಜಕೀಯ ನಾಯಕತ್ವದ ಸವಾಲು ಎಂದರೆ – ಉತ್ತಮ, ಸುರಕ್ಷಿತ ಲೋಕದ ಕನಸು ಕಾಣುವ ದೃಷ್ಟಿಯುಳ್ಳವನಾಗಿರಬೇಕು ಮತ್ತು ಅದನ್ನು ಸತ್ಯ ಮಾಡಲು ಧೈರ್ಯ, ಸಹನೆ ಹಾಗೂ ಸತತ ಪ್ರಯತ್ನ ಹೊಂದಿರಬೇಕು." []

ಉಲ್ಲೇಖಗಳು

[ಸಂಪಾದಿಸಿ]