ವಿಷಯಕ್ಕೆ ಹೋಗು

ರಾಷ್ಟ್ರಕವಿ ಜಿ.ಎಸ್.ಎಸ್

ವಿಕಿಕೋಟ್ದಿಂದ

ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಕನ್ನಡದ ಪ್ರಮುಖ ಕವಿ, ಬರಹಗಾರ ಮತ್ತು ಸಂಶೋಧಕರು. ಇವರಿಗೆ 2006 ರಲ್ಲಿ ಕರ್ನಾಟಕ ಸರ್ಕಾರವು ರಾಷ್ಟ್ರಕವಿ ಪ್ರಶಸ್ತಿ ನೀಡಿ ಗೌರವಿಸಿತು. ಅವರು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಮತ್ತು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. “ಹಣತೆ ಹಚ್ಚುತ್ತೇನೆ ನಾನು, ಕತ್ತಲನ್ನು

ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ, ಅದು ಇರುವಷ್ಟು ಕಾಲ ನನ್ನ ಮುಖ ನೀನು, ನಿನ್ನ ಮುಖ ನಾನು ನೋಡಬಹುದೆಂದು. ಹಣತೆ ಆರಿದ ಮೇಲೆ ನಾನು ಯಾರೋ ನೀನು ಯಾರೋ…..”

  • “ಹೇಗೋ ನನ್ನ ಪಾಡಿಗೆ ನಾನು ಬದುಕುತ್ತೇನೆ, ಇದ್ದಷ್ಟು ನೆಲವ ಉತ್ತಿ ಬಿತ್ತಿ ನೀರೆರೆದು
ಮಲಗಿರುವ ಬೀಜಗಳ ಕಣ್ಣು ತೆರೆಸುತ್ತೇನೆ,
ನಾಳೆ ಈ ಸಸಿಗಳೆಲ್ಲಾ ವಟವೃಕ್ಷಗಳಾಗಿ
ಸಾವಿರ ಜನಕ್ಕೆ ನೆರಳಾಗಲೆಂಬ ಮಹದಾಸೆ
ಇರದಿದ್ದರೂ ಒಂದೆರಡಾದರೂ ಬೀಜವಾಗುವ
ಹಣ್ಣು ಬಿಟ್ಟಾವೆಂದು ಕಾಯುತ್ತೇನೆ..” 
  • “ಎದೆ ತುಂಬಿ ಹಾಡಿದೆನು ಅಂದು ನಾನು….

ಮನವಿಟ್ಟು ಕೇಳಿದಿರಿ ಅಲ್ಲಿ ನೀವು….

ಕೃತಿಗಳು

[ಸಂಪಾದಿಸಿ]
  • ‘ಮಾಸ್ಕೋದಲ್ಲಿ ಇಪ್ಪತ್ತೆರಡು ದಿನ’
  • ‘ಕಾವ್ಯಾರ್ಥ ಚಿಂತನ’

ಮಾತುಗಳು

[ಸಂಪಾದಿಸಿ]
  • ”ಬರೆಯುತ್ತಾ ಬರೆಯುತ್ತಾ ನಾನೂ ಬದಲಾಗಿದ್ದೇನೆ, ಬೆಳೆದಿದ್ದೇನೆ. ಒಂದು ಕಾಲಕ್ಕೆ ಮುಖ್ಯವೆಂದು ತಿಳಿದುಕೊಂಡದ್ದು ಕ್ರಮೇಣ ಎಷ್ಟೊಂದು ಜಳ್ಳು ಎಂದು ಅನಿಸಿದೆ. ಯಾವುದೇ ರೋಚಕವಾದ ಪಕ್ಷ ಪಂಥಗಳಿಗೆ ಜಿಗಿದುಕೊಳ್ಳುವುದು, ನನಗೆ ನಾನೇ ಒಂದು ಮಿತಿಯನ್ನು ಹಾಕಿಕೊಂಡಂತೆ ಎಂಬ ‘ಜ್ಞಾನೋದಯ’ ಬಹು ಹಿಂದೆಯೇ ಆಗಿದೆ. ತೆರೆದ ಮನಸ್ಸಿನಿಂದ ಈ ಜೀವನವನ್ನು ಪ್ರೀತಿಸಬೇಕು. ಬಂದ ಎಲ್ಲ ರೀತಿಯ ಅನುಭವಗಳಿಗೂ ಎದೆಯೊಡ್ಡಬೇಕು. ಬದುಕಿನಲ್ಲಿ ಯಾವುದೂ ಅರ್ಥಹೀನವಲ್ಲ ಎನ್ನುವ ಧೋರಣೆಯನ್ನು ಉಳಿಸಿಕೊಳ್ಳಬೇಕು”.[]

ಪ್ರಮುಖ ಕೃತಿಗಳು

[ಸಂಪಾದಿಸಿ]
  • ಸಾಮಗಾನ,
  • ಚೆಲುವೆ-ಒಲವು,
  • ದೇವಶಿಲ್ಪ,
  • ದೀಪದ ಹೆಜ್ಜೆ,
  • ಕಾರ್ತೀಕ,
  • ತೀರ್ಥವಾಣಿ,
  • ಅನಾವರಣ,
  • ನನ್ನ ನಿನ್ನ ನಡುವೆ,
  • ವ್ಯಕ್ತ-ಮಧ್ಯ

ಉಲ್ಲೇಖಗಳು

[ಸಂಪಾದಿಸಿ]