ವಿಷಯಕ್ಕೆ ಹೋಗು

ರಾಲ್ಫ್ ವಾಲ್ಡೋ ಎಮರ್ಸನ್

ವಿಕಿಕೋಟ್ದಿಂದ

ರಾಲ್ಫ್ ವಾಲ್ಡೋ ಎಮರ್ಸನ್ (ಮೇ 25, 1803 – ಏಪ್ರಿಲ್ 27, 1882) ಅಮೆರಿಕದ ಪ್ರಬಂಧಕಾರ, ಉಪನ್ಯಾಸಕ, ತತ್ತ್ವಜ್ಞಾನಿ, ಧರ್ಮಗುರು, ದಾಸ್ಯ ನಿರ್ಮೂಲಕ ಮತ್ತು ಕವಿ ಆಗಿದ್ದರು. ಅವರು 19ನೇ ಶತಮಾನದ ಮಧ್ಯದ ಟ್ರಾನ್ಸೆಂಡೆಂಟಲಿಸಂ ಚಳವಳಿಗೆ ನಾಯಕತ್ವ ನೀಡಿದರು. ಅವರು ವ್ಯಕ್ತಿತ್ವಾಭಿವ್ಯಕ್ತಿ, ಸ್ವಾವಲಂಬನೆ ಮತ್ತು ಸಮಾಜದ ಒತ್ತಡ ವಿರೋಧಿ ಚಿಂತನೆಗಳಿಗೆ ಪ್ರಚಾರಕನಾಗಿದ್ದರು.

ಅವರ 1836ರ ಪ್ರಬಂಧ "Nature" ಮತ್ತು 1837ರ ಭಾಷಣ "The American Scholar" ಅವರನ್ನು ಅಮೆರಿಕದ ತಾತ್ವಿಕ ಚಿಂತನೆಯ ಪ್ರಮುಖ ವ್ಯಕ್ತಿಯನ್ನಾಗಿ ಮಾಡಿತು. ಅವರು ತಮ್ಮ ಪ್ರಬಂಧಗಳನ್ನು ಉಪನ್ಯಾಸ ರೂಪದಲ್ಲಿ ರೂಪಿಸಿ ನಂತರ ಮುದ್ರಣಕ್ಕಾಗಿ ಪುನರ್‌ಸಂಪಾದಿಸುತ್ತಿದ್ದರು. ಅವರ Essays: First Series (1841) ಮತ್ತು Essays: Second Series (1844) ಎನ್ನುವ ಪ್ರಬಂಧ ಸಂಗ್ರಹಗಳು ಅವರ ಮುಖ್ಯ ಆಲೋಚನೆಗಳನ್ನು ಒಳಗೊಂಡಿವೆ. [] ಎಮರ್ಸನ್ ನಿಶ್ಚಿತ ತತ್ತ್ವಶಾಸ್ತ್ರೀಯ ನೀತಿಗಳನ್ನು ಹುರಿದುಂಬಿಸದೆ, ಬದಲಿಗೆ ವ್ಯಕ್ತಿತ್ವ, ಸ್ವಾತಂತ್ರ್ಯ, ಮಾನವಶಕ್ತಿಯ ಸಾಮರ್ಥ್ಯ ಮತ್ತು ಆತ್ಮ ಮತ್ತು ಪ್ರಕೃತಿಯ ಸಂಬಂಧಗಳ ಬಗ್ಗೆ ಆಳವಾದ ವಿಚಾರಗಳನ್ನು ವ್ಯಕ್ತಪಡಿಸಿದರು. ಅವರು ದೇವರನ್ನು ಪ್ರಪಂಚದಿಂದ ವಿಭಿನ್ನವಾದ ಅಸ್ತಿತ್ವವಾಗಿ ನೋಡದ ಪಾಂಥೀಯ ದೃಷ್ಟಿಕೋನವನ್ನು ಹೊಂದಿದ್ದರು. ಎಮರ್ಸನ್, ತತ್ತ್ವಚಿಂತಕ ಹೆನ್ರಿ ಡೇವಿಡ್ ಥೋರೊ ಅವರ ಸ್ನೇಹಿತ ಮತ್ತು ಮಾರ್ಗದರ್ಶಕರಾಗಿದ್ದರು.[]

ನುಡಿಗಳು

[ಸಂಪಾದಿಸಿ]

ಜೀವನದ ಉದ್ದೇಶ ಸಂತೋಷವಾಗಿರುವುದಲ್ಲ; ಬದಲಾಗಿ ಬದುಕು ಉಪಯುಕ್ತವಾಗಿರಬೇಕು, ಗೌರವಯುತವಾಗಿರಬೇಕು, ಕರుణೆಯಿಂದ ಕೂಡಿರಬೇಕು ಮತ್ತು ನೀವು ಈ ಭೂಮಿಯಲ್ಲಿ ಬದುಕಿದ ಎದೆಯಾದರೂ ಒಂದು ಸಕಾರಾತ್ಮಕ ಬದಲಾವಣೆ ತಂದಿರಬೇಕು.

ನಿನ್ನ ಹಿಂದೆ ಇರುವದು ಅಥವಾ ನಿನ್ನ ಮುಂದೆ ಎದುರಾಗುವದು, ನಿನ್ನೊಳಗಿನ ಶಕ್ತಿಯ ಮುಂದೇನು ಮಾತ್ರ?

ನಿನ್ನನ್ನು ಸದಾ ಬೇರೆಯವನಾಗಿಸಲು ಯತ್ನಿಸುವ ಜಗತ್ತಿನಲ್ಲಿ ನಿನ್ನಂತೆ ನೀನೇ ಉಳಿಯುವುದು ಬಹುಮುಖ್ಯ ಸಾಧನೆ.

ನೀನು ಪ್ರತಿದೊಮ್ಮೆ ಕೋಪದಿಂದ ಉರಿಯುವಾಗ, ಆ ಕ್ಷಣಕ್ಕೆ ತಕ್ಕಷ್ಟು ಮನಃಶಾಂತಿಯನ್ನು ಕಳೆದುಕೊಳ್ಳುತ್ತೀಯೆ.


ಪ್ರತಿದಿನವನ್ನು ಮುಗಿಸಿ ಅದು ಮುಗಿದಂತೆ ಬಿಟ್ಟುಬಿಡು. ನಿನಗೆ ಸಾಧ್ಯವಾದಷ್ಟು ಮಾಡಿದೆಯಲ್ಲಾ? ಅದರಿಂದ ಪಾಠ ಕಲಿತುಕೋ... ನಾಳೆ ಹೊಸ ದಿನ.

ನಿಮನ್ನು ಬೇರೇನನ್ನೋ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿರುವ ಜಗತ್ತಿನಲ್ಲಿ ನೀವೇ ಆಗಿರುವುದು ದೊಡ್ಡ ಸಾಧನೆಯಾಗಿದೆ. ನಿಮ್ಮ ಸ್ವಂತ ಮನಸ್ಸಿನ ಸಮಗ್ರತೆಯನ್ನು ಹೊರತುಪಡಿಸಿ ಯಾವುದೂ ಅಂತಿಮವಾಗಿ ಪವಿತ್ರವಲ್ಲ.

ಉಲ್ಲೇಖಗಳು

[ಸಂಪಾದಿಸಿ]
  1. Stanford Encyclopedia of Philosophy – Transcendentalism
  2. merson, Ralph Waldo. Essays and Lectures, Library of America, 1983.