ರಾಮಸ್ವಾಮಿ ವೆಂಕಟರಾಮನ್
ರಾಮಸ್ವಾಮಿ ವೆಂಕಟರಾಮನ್(4 ಡಿಸೆಂಬರ್ 1910 – 27 ಜನವರಿ 2009)ವಕೀಲ, ಸ್ವಾತಂತ್ರ್ಯ ಹೋರಾಟಗಾರ, ಕೇಂದ್ರ ಸಚಿವರಾಗಿದ್ದರು. ಇವರು ೧೯೮೭ರಿಂದ ೧೯೯೨ರವರೆಗೆ ಭಾರತದ ರಾಷ್ಟ್ರಪತಿಗಳಾಗಿದ್ದರು. ರಾಷ್ಟ್ರಪತಿಯಾಗಿ ಸೇವೆಯ ಅವಧಿ: ೨೫.೦೭.೧೯೮೭ ರಿಂದ ೨೪.೦೭.೧೯೯೨. ೧೯೧೦ರ ಡಿಸೆಂಬರ್ ೪ ರಂದು ತಮಿಳು ನಾಡಿನ ತಂಜಾವೂರ್ ಜಿಲ್ಲೆಯ ರಾಜಮಡಮ್ ಹಳ್ಳಿಯಲ್ಲಿ ವೆಂಕಟರಾಮನ್ ಅವರ ಜನನ. ತಂದೆ ರಾಮಸ್ವಾಮಿ ಅಯ್ಯರ್ ವಕೀಲರು. ಸುಸಂಸ್ಕೃತ ವ್ಯಕ್ತಿ ದೇಶ ಸೇವೆಯ ಮೊದಲ ಪಾಠಗಳು ಕುಟುಂಬದ ಹಿರಿಯರಿಂದಲೇ ವೆಂಕಟರಾಮನ್ ಅವರಿಗೆ ಲಭಿಸಿತ್ತು. ವಿಶ್ವವಿದ್ಯಾಲಯದವರೆಗಿನ ಶಿಕ್ಷಣವನ್ನು ತಮ್ಮ ಜಿಲ್ಲೆಯಲ್ಲಿ ಮುಗಿಸಿ, ಮದರಾಸ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ.ಹಾಗೂ ಕಾನೂನಿನಲ್ಲಿ ಬಿ.ಎಲ್.ಪದವಿಗಳನ್ನು ಪಡೆದರು. ಬ್ರಿಟಿಷ್ ಸರ್ಕಾರದ ಗುಲಾಮನಾಗಲು ಇಷ್ಟವಿಲ್ಲದೆ, ೧೯೩೫ರಲ್ಲಿ ಮದರಾಸ್, ಉಚ್ಚನ್ಯಾಯಲಯದಲ್ಲಿ ವಕೀಲರಾದರು. ೧೯೩೮ರಲ್ಲಿ ಜಾನಕಿದೇವಿ ಅವರೊಂದಿಗೆ ವಿವಾಹವಾಯಿತು. ಮುಂದೆ, ೧೯೫೧ರಲ್ಲಿ ಭಾರತದ ಶ್ರೇಷ್ಠ ನ್ಯಾಯಲಯದಲ್ಲಿ ನ್ಯಾಯವಾದಿಯಾದರ. ವಕೀಲ ವೃತ್ತಿಯನ್ನು ಆರಂಭಿಸಿದ ದಿನಗಳಿಂದಲೂ ಅವರು ತೋರಿದ ಅಸಾಧಾರಣ ಪ್ರತಿಭೆ ಮತ್ತು ಜಾಣ್ಮೆಗಳು ರಾಜಾಜಿಯವರಿಂದಲೂ ಪ್ರಶಂಸೆ ಗಳಿಸಿದ್ದವು.