ವಿಷಯಕ್ಕೆ ಹೋಗು

ರಹಮತ್ ತರೀಕೆರೆ

ವಿಕಿಕೋಟ್ದಿಂದ

ಕನ್ನಡದ ಪ್ರಸಿದ್ಡ ಸಂಸ್ಕೃತಿ ಚಿಂತಕರು ಹಾಗೂ ವಿಮರ್ಶಕರಾದ ರಹಮತ್ ತರೀಕೆರೆ ಅವರು ಆಗಸ್ಟ್ ೨೬, ೧೯೫೯ರಂದು ತರೀಕೆರೆ|ತರೀಕೆರೆ ತಾಲೂಕಿನ ಸಮತಳದಲ್ಲಿ ಜನಿಸಿದರು. ಹಳ್ಳಿಯಲ್ಲಿ ಕಮ್ಮಾರಿಕೆಯಿಂದ ಮನೆಯವರ ಹೊಟ್ಟೆ ತುಂಬುವುದು ಅಸಾಧ್ಯವಾದಾಗ ಇವರ ಕುಟುಂಬ ತರೀಕೆರೆಗೆ ಬಂತು. ಆಗ ಇವರಿಗೆ ದೊರೆತದ್ದು ಅಕ್ಷರಶಃ ಸ್ಲಂ ಬದುಕು. ಅವರಿವರ ಜೋಪಡಿ ಪಟ್ಟಿಗಳ ಬೆಳಕಿನಲ್ಲಿ ಓದುತ್ತ ಎಸ್ ಎಸ್ ಎಲ್ ಸಿ, ಪಿಯುಸಿ ಮುಗಿಸಿದರು. ಇದಕ್ಕೆ ತಾಯಿಯ ಒತ್ತಾಸೆಯೂ ಇತ್ತು. ತರೀಕೆರೆಯಲ್ಲಿ ಓದುವಾಗ ಅಪ್ಪ ಅಣ್ಣಂದಿರೊಂದಿಗೆ ಇವರು ಹಮಾಲಿ ಮಾಡಿದ್ದೂ ಉಂಟು. ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಹಾಗೂ ಭಾಷಾಕಾಯದ ಡೀನ್ ಆಗಿ ಅವರು ಸೇವೆ ಸಲ್ಲಿಸಿದರು. ಈಗ ಹಿರಿಯ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೃತಿಗಳು

[ಸಂಪಾದಿಸಿ]
  • ಪ್ರತಿಸಂಸ್ಕೃತಿ (ವಿಮರ್ಶಾ ಸಂಕಲನ)
  • ಕರ್ನಾಟಕ ಸೂಫಿಗಳು
  • ಅಂಡಮಾನ್ ಕನಸು
  • ಕರ್ನಾಟಕದ ನಾಥಪಂಥ
  • ಧಮಪರೀಕ್ಷೆ ( ಚಿಂತನೆಗಳು)

ಪುಸ್ತಕಗಳು

[ಸಂಪಾದಿಸಿ]
  • ಮರದೊಳಗಿನ ಕಿಚ್ಚು (ಸಂಸ್ಕೃತಿ ಚಂತನೆ)
  • ಸಾಂಸ್ಕೃತಿಕ ಅಧ್ಯಯನ (ಚಿಂತನೆ)
  • ಲೋಕ ವಿರೋಧಿಗಳ ಜೊತೆಯಲ್ಲಿ (ಸಂದರ್ಶನಗಳು)
  • ಕತ್ತಿಯಂಚಿನ ದಾರಿ (ಸಾಹಿತ್ಯ ವಿಮರ್ಶೆ) - ೨೦೦೬[]
  • ಹೊಸ ತಲೆಮಾರಿನ ತಲ್ಲಣ (ಹೊಸಲೇಖಕರ ಬರೆಹದ ಬಗೆಗಿನ ವಿಶ್ಲೇಷಣೆ)
  • ಚಿಂತನೆಯ ಪಾಡು (ಸಾಹಿತ್ಯ ವಿಮರ್ಶೆ)
  • ಇಲ್ಲಿ ಯಾರೂ ಮುಖ್ಯರಲ್ಲ (ಸಾಹಿತ್ಯ ಮೀಮಾಂಸೆ)
  • ಕದಳಿ ಹೊಕ್ಕು ಬಂದೆ(ತಿರುಗಾಟದ ಕಥನಗಳು)
  • ನಡೆದಷ್ಟೂ ನಾಡು (ತಿರುಗಾಟದ ಕಥನಗಳು)
  • ಅಮೀರ್ ಬಾಯಿ ಕರ್ನಾಟಕಿ (ಜೀವನಚರಿತ್ರೆ)
  • ನೇತುಬಿದ್ದ ನವಿಲು (ಲೇಖನ ಸಂಕಲನ)
  • ಸಂಶೋಧನ ಮೀಮಾಂಸೆ (ಚಿಂತನೆ)
  • ನುಡಿಸಂಕರ ಸಾಹಿತ್ಯ (ಸಂಶೋಧನೆ)
  • ಕರ್ನಾಟಕದ ಮೊಹರಂ (ಸಂಶೋಧನೆ)
  • ನೆತ್ತರಸೂತಕ (ಲೇಖನ ಸಂಕಲನ)
  • ಗೇರಮರಡಿ ಕತೆಗಳು (ಜನಪದ ಸಂಪಾದನೆ)
  • ಕರ್ನಾಟಕ ಗುರುಪಂಥ (ಸಂಶೋಧನೆ)
  • ವಸಾಹತು ಪ್ರಜ್ಞೆ ಮತ್ತು ವಿಮೋಚನೆ (ಅನುವಾದ)
  • ಸಣ್ಣಸಂಗತಿ (ಚಿಂತನೆ)
  • ಹಾಸುಹೊಕ್ಕು (ಚಿಂತನೆ)
  • ಜೆರುಸಲೇಂ (ಪ್ರವಾಸಕಥನ)