ವಿಷಯಕ್ಕೆ ಹೋಗು

ರಮೇಶ್ ಅರವಿಂದ್

ವಿಕಿಕೋಟ್ದಿಂದ
ರಮೇಶ್ ಅರವಿಂದ್
ರಮೇಶ್ ಅರವಿಂದ್

ರಮೇಶ್ ಅರವಿಂದ್ (ಜನನ ೧೧ ಸಪ್ಟೆಂಬರ್ ೧೯೬೪೪) ಒಬ್ಬ ಭಾರತದ ನಟ, ನಿರ್ದೇಶಕ ಮತ್ತು ನಿರೂಪಕ.ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲೊಬ್ಬರು. ಕೆ.ಬಾಲಚಂದರ್ ನಿರ್ದೇಶನದ ಸುಂದರ ಸ್ವಪ್ನಗಳು ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಅದಕ್ಕೆ ಮೊದಲು ಬೆಂಗಳೂರು ದೂರದರ್ಶನದಲ್ಲಿ ಪರಿಚಯ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಅನೇಕ ಚಿತ್ರಗಳಲ್ಲಿ ನಾಯಕ ನಟರಾಗಿ ನಟಿಸಿ, ಯಶಸ್ವಿಯಾಗಿದ್ದಾರೆ. ರಾಮ ಶಾಮ ಭಾಮ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಹೂಮಳೆ ಮತ್ತು ಅಮೃತಧಾರೆ ಚಿತ್ರಕಥೆಗೆ ನೆರವು ನೀಡಿದ್ದಾರೆ. ಅವರ ಆರ್ಟ್ ಆಫ್ ಸಕ್ಸಸ್ ಎಂಬ ಪುಸ್ತಕದ ಕೆಲವು ನುಡಿಮುತ್ತುಗಳು ಇಲ್ಲಿವೆ.[]

ನುಡಿಮುತ್ತುಗಳು

[ಸಂಪಾದಿಸಿ]
  • ಸಾಧನೆಯ ಹಾದಿಯಲ್ಲಿದ್ದ ಕೆಲವರು ಬಲಗಾಲಿಟ್ಟು ಸೋತು ಹೋಗುತ್ತಾರೆ. ಮತ್ತೆ ಕೆಲವರು ನಿರಾಸೆ, ನೋವುಗಳನ್ನು ಮೀರಿ ಗೆದ್ದು ನಿಲ್ಲುತ್ತಾರೆ. ಸಾಧಕರ ಪ್ರತಿ ಹೆಜ್ಜೆ ಗುರುತು ಒಂದೊಂದು ಗೆಲುವಿನ ಕಥೆ ಹೇಳುತ್ತದೆ.
  • ಈ ನೆನಪೇ ಹಾಗೆ ಖುಷಿ ಕೊಡುತ್ತದೆ. ಭಾವುಕ ದಂಡೆ ಮೇಲೆ ನಿಲ್ಲಿಸುತ್ತೆ, ದಣಿವು ಮರೆಸುತ್ತೆ.
  • ಬರಿಗೈಲಿ ಬಂದು ಕೈತುಂಬಾ ಕೊಡೋದು, ಬರಿಗಾಲಲ್ಲಿ ಬಂದು ಹೆಜ್ಜೆಗುರುತು ಉಳಿಸೋದು, ಇತಿಹಾಸವನ್ನು ರಚಿಸೋದಕ್ಕೆ ಇತಿಹಾಸವನ್ನೇ ಅಳಿಸೋದು, ಸಾಧನೆಯ ಜೊತೆ ಸಂಸ್ಕೃತಿಯನ್ನು ಬೆಳೆಸೋದು. ಇವನ್ನೆಲ್ಲ ಸೇರಿಸಿ ಕೋಟೆ ಕಟ್ಟುವವನು ನಿಜವಾದ ಸಾಧಕ.
  • ಸಕ್ಸಸ್ ಅಂದರೆ ಏನು? ಅದು ಎಲ್ಲಿ ಸಿಗುತ್ತದೆ? ಅದನ್ನು ಪಡೆಯುವುದಕ್ಕೆ ಏನು ಮಾಡಬೇಕು? ಗೆಲ್ಲುವುದಕ್ಕೆ ನಮಗೆ ನೂರೆಂಟು ಪ್ರಶ್ನೆಗಳು ಕಾಡುವುದು ಸಹಜ. ಬಟ್, ಸಕ್ಸಸ್ ಇರುವುದು ಎರಡೇ ಎರಡು ಮೆಟ್ಟಿಲು ಮೇಲೆ. ಅದು ಹಾರ್ಡ್ ವರ್ಕ್ ಮತ್ತು ಸ್ಮಾರ್ಟ್ ವರ್ಕ್. ಈ ಪರಿಶ್ರಮ ಎನ್ನುವ ಸಕ್ಸಸ್ ಮಂತ್ರ ಇಟ್ಟುಕೊಂಡು ಸೋತ ಉದಾಹರಣೆಯೇ ಇಲ್ಲ. ಹಾರ್ಡ್ ವರ್ಕ್‍ನಲ್ಲಿ ನೋವಿದೆ. ಸ್ಮಾರ್ಟ್ ವರ್ಕ್‍ನಲ್ಲಿ ಸೆಲೆಬ್ರೇಷನ್ ಇದೆ. ಹಾರ್ಡ್ ವರ್ಕ್‍ನಲ್ಲಿ ಕನಸಿದೆ. ಸ್ಮಾರ್ಟ್ ವರ್ಕ್‍ನಲ್ಲಿ ಗೆಲುವಿದೆ.[]
  • ಗೆಲುವಿಗೆ ದುಡಿಯುವಂತಹ ಮನುಷ್ಯ ಆಗಬಾರದು. ಮೌಲ್ಯಕ್ಕಾಗಿ ಹೋರಾಡುವಂತಹ ಮನುಷ್ಯ ಆಗಬೇಕು. ಆಗ ತನಗೆ ತಾನೇ ನಮ್ಮ ಮುಂದೆ ಗೆಲುವು ಬರುತ್ತದೆ.
  • ಜನ ನ್ಯಾಯದ ಪರವಾಗಿ ಹೋರಾಡುವವರನ್ನು ನಂಬುತ್ತಾರೆ. ಸಾಧಕರ ಬೆನ್ನು ತಟ್ಟುತ್ತಾರೆ. ಅವರು ಕನಸಿನ ಹಿಂದೆ ಓಡುವುದಕ್ಕೆ ದೇಹ ಮಾತ್ರ ಮುಖ್ಯ ಅಲ್ಲ, ಧ್ಯೇಯ ಮತ್ತು ಧೈರ್ಯ ಮುಖ್ಯ ಅಂಶ ನಂಬಿರೋರು.
  • ಜವಾಬ್ದಾರಿಗಳನ್ನು ಸ್ವೀಕರಿಸುವ ಹೆಗಲುಗಳಿಗೆ ಮಾತ್ರಾ ಸ್ವಾತಂತ್ರ್ಯ ಸಿಗುತ್ತದೆ. ನೀವು ಎಷ್ಟು ಚೆನ್ನಾಗಿ ಜವಾಬ್ದಾರಿಗಳನ್ನು ಸ್ವೀಕರಿಸುತ್ತೀರೋ, ಎಷ್ಟು ಅಚ್ಚುಕಟ್ಟಾಗಿ ನಿಮಗೆ ಕೊಟ್ಟ ಕೆಲಸಗಳನ್ನು ಮಾಡುತ್ತೀರೋ ಅಷ್ಟು ಚೆನ್ನಾಗಿ ಏಳ್ಗೆಯಾಗುತ್ತದೆ.
  • ಸಾಧನೆಯ ಹಾದಿಯಲ್ಲಿ ಕಲ್ಲಿರುತ್ತದೆ ಮುಳ್ಳಿರುತ್ತದೆ, ಕಾಲೆಳೆಯುವವರೂ ಇರುತ್ತಾರೆ. ಹಾಗೆಯೇ ಕೈಹಿಡಿದು ಎತ್ತುವವರೂ ಇರುತ್ತಾರೆ.
  • ದೃಢಚಿತ್ತ, ಗೆಲ್ಲಬೇಕು ಎನ್ನುವ ಹಠ , ಕಠಿಣ ಪರಿಶ್ರಮ, ಇದಿಷ್ಟು ಇದ್ದರೆ ವಿಜಯಪತಾಕೆ ನಿಮ್ಮ ಪಾಲಿಗೆ ದಕ್ಕೇ ದಕ್ಕುತ್ತದೆ.
  • ಸಾಮಾನ್ಯ ವ್ಯಕ್ತಿಗಳು ಕನಸು ಕಂಡರು, ಕನಸು ಬೆನ್ನು ಹತ್ತಿದರು. ಆದರೆ ಎಷ್ಟೇ ಸಾರಿ ಬಿದ್ದರೂ, ಮೈಕೊಡವಿಕೊಂಡು ಮತ್ತೆ ಮೇಲೆದ್ದವರು ಮಾತ್ರ ಸಾಧಕರಾಗುತ್ತಾರೆ.
  • ಒಂದು ಕೆಲಸದಲ್ಲಿ ಎಡವಿದರೆ , ಆ ಸೋಲನ್ನು ಸುಲಭದಲ್ಲಿ ಒಪ್ಪಿಕೊಳ್ಳದೆ , ಎಡವಿದ್ದಕ್ಕೆ ಕಾರಣಗಳನ್ನು ತಿಳಿದುಕೊಂಡು ಮತ್ತೆ ಪ್ರಯತ್ನ ಪಟ್ಟು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡರೆ ಗೆಲುವು ನಿಶ್ಚಿತ.
  • ಎಲ್ಲರಲ್ಲೂ ತಮ್ಮದೇ ಆದ ಶಕ್ತಿ ಇದ್ದೇ ಇರುತ್ತದೆ. ವೀಕ್ನೆಸ್ ಕೂಡ ಇರುತ್ತದೆ. ಆದರೆ, ವೀಕ್ನೆಸ್‍ನ ಮೈನಸ್ ಪ್ಲಸ್ ಮಾಡುವುದು ಹೇಗೆ ಎನ್ನುವುದೇ ನಿಗವಾದ ಜೀವನ.
  • ಯಶಸ್ಸು ಯಾರೊಬ್ಬರ ಸ್ವತ್ತೂ ಅಲ್ಲ, ಯಾರು ಅವಿರತ ಶ್ರಮಪಟ್ಟು ಹಗಲು ರಾತ್ರಿ ಕನಸಿನ ಬೆನ್ನು ಹತ್ತುತ್ತಾರೋ ಅವರಿಗೆ ಯಶಸ್ಸು ವಶವಾಗುತ್ತದೆ.

ಉಲ್ಲೇಖಗಳು

[ಸಂಪಾದಿಸಿ]