ರತನ್ ಟಾಟಾ
ಗೋಚರ
ರತನ್ ನವಲ್ ಟಾಟಾ (ಜನನ:ಡಿಸೆಂಬರ್ ೨೮ ೧೯೩೭-ಮರಣ:ಅಕ್ಟೋಬರ್ ೯ ೨೦೨೪) ಒಬ್ಬ ಭಾರತೀಯ ಕೈಗಾರಿಕೋದ್ಯಮಿ ಮತ್ತು ಲೋಕೋಪಕಾರಿ. 1991ರಿಂದ 2012 ರವರೆಗೆ ಟಾಟಾ ಗ್ರೂಪ್ ಮತ್ತು ಟಾಟಾ ಸನ್ಸ್‌ನ ಅಧ್ಯಕ್ಷರಾಗಿದ್ದರು ಮತ್ತು ಅಕ್ಟೋಬರ್ 2016 ರಿಂದ ಫೆಬ್ರವರಿ 2017ರವರೆಗೆ ಹಂಗಾಮಿ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದರು. ಭಾರತ ಸರ್ಕಾರವು ೨೦೦೦ನೇ ಇಸವಿಯಲ್ಲಿ ಪದ್ಮಭೂಷಣ ಮತ್ತು ೨೦೦೮ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಇವರನ್ನು ಗೌರವಿಸಿತು.
ಯುಕ್ತಿಗಳು
[ಸಂಪಾದಿಸಿ]- ನಿಮ್ಮ ಮಕ್ಕಳಿಗೆ ಶ್ರೀಮಂತರಾಗುವಂತೆ ಬೋಧಿಸಬೇಡಿ. ಸಂತೋಷವಾಗಿ ಇರುವುದನ್ನು ಕಲಿಸಿ.
-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೨೦ ಅಕ್ಟೋಬರ್ ೨೦೨೦ (UTC)
- ನಾನು ಯಾವಾಗಲೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದೇನೆ ಎಂದು ನನಗೆ ಅನ್ನಿಸುವುದಿಲ್ಲ. ಆದರೆ, ತೆಗೆದುಕೊಂಡ ನಿರ್ಧಾರಗಳನ್ನು ಸರಿಯಾದ ನಿರ್ಧಾರ ಸಾಬೀತುಪಡಿಸಲು ನಿಷ್ಠೆಯಿಂದ ಪ್ರಯತ್ನಿಸುತ್ತೇನೆ.
- ಯಾರೂ ಕಬ್ಬಿಣವನ್ನು ನಾಶ ಮಾಡುವುದಿಲ್ಲ, ಆದರೆ ಅದರ ಸ್ವಂತ ತುಕ್ಕು ಅದನ್ನೇ ನಾಶ ಮಾಡಬಹುದು. ಅದೇ ರೀತಿ ಯಾವೊಬ್ಬ ವ್ಯಕ್ತಿಯನ್ನು ನಾಶ ಮಾಡಲು ಸಾಧ್ಯವಿಲ್ಲ, ಆದರೆ ಅವರ ಮನಸ್ಥಿತಿಯಿಂದ ಅದು ಸಾಧ್ಯ.
- ನಿಮ್ಮ ಜೊತೆಗಿರುವವರು ಬೆಳೆಯಲು ಪ್ರೋತ್ಸಾಹ ನೀಡಿ. ಅವರಿಗೆ ಪ್ರಶ್ನೆ ಕೇಳಲು ಅವಕಾಶ ಕೊಟ್ಟು, ಅವರಲ್ಲಿರುವ ಹೊಸ ಐಡಿಯಾಗಳ ಬಗ್ಗೆ ಮುಕ್ತ ಮನಸ್ಸಿನಿಂದ ಚರ್ಚಿಸಲು ಬಿಡಿ. ಹೊಸ ಆಲೋಚನೆಗಳಿಂದ ಮಾತ್ರ ಅದ್ವಿತೀಯವಾದುದನ್ನು ಸಾಧಿಸಲು ಸಾಧ್ಯ.[೧]
- ನಮ್ಮ ಜೀವನದ ರೇಖೆಯು ಸದಾ ಏರಿಳಿತ ಕಾಣುತ್ತಲೇ ಇರಬೇಕು. ಒಂದು ವೇಳೆ, ಅದು ನೇರವಾಗಿ ಒಂದೇ ದಿಕ್ಕಿನಲ್ಲಿ ಚಲಿಸುತ್ತಿದೆಯೆಂದೆರೆ ನಾವು ಸತ್ತಿದ್ದೇವೆ ಎಂದರ್ಥ. ಹಾಗೆಯೇ ಇಸಿಜಿಯಲ್ಲಿ ನೇರವಾಗಿ ಗೆರೆಗಳು ಬಂದರೆ ಸಾವು ಪಕ್ಕಾ ಎಂದರ್ಥ. ಆದ್ದರಿಂದ, ಜಿವನದಲ್ಲಿ ಏರಿಳಿತಗಳು ಉನ್ನತ ಮಟ್ಟಕ್ಕೇರಲು ಪ್ರಮುಖಪಾತ್ರವಹಿಸುತ್ತವೆ.
- ಜನರು ನಿಮ್ಮ ಕಡೆ ಎಸೆಯುವ ಕಲ್ಲುಗಳನ್ನು ನೀವು ತಾಳ್ಮೆಯಿಂದ ಸಂಗ್ರಹಿಸಿ. ಮುಂದೆ ಮನೆ ಕಟ್ಟುವಾಗ ಅವುಗಳೇ ಉಪಯೋಗಕ್ಕೆ ಬರುತ್ತವೆ.
- ಜೀವನದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳುವುದಿಲ್ಲ ಎಂದರೆ, ಮುಂದೆ ಯಾವುದೇ ಯಶಸ್ಸು ಕಾಣಲು ಸಾಧ್ಯವಿಲ್ಲ.
- "ನಿಮ್ಮ ಕನಸುಗಳನ್ನು ಸಾಧಿಸುವುದನ್ನು ತಡೆಯುವ ಏಕೈಕ ವಿಷಯವೆಂದರೆ ನೀವೇ." - "ಅಪಾಯಗಳನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ಪ್ರಯತ್ನಗಳಲ್ಲಿ ಧೈರ್ಯಶಾಲಿಯಾಗಿರಿ."
- "ನಿಮ್ಮ ಹೋರಾಟಗಳನ್ನು ಸ್ವೀಕರಿಸಿ ಮತ್ತು ಯಶಸ್ಸನ್ನು ಕಂಡುಕೊಳ್ಳಿ."
- "ಯಶಸ್ವಿಯಾಗಲು, ನಿಮಗೆ ಸ್ಪಷ್ಟವಾದ ದೃಷ್ಟಿ ಇರಬೇಕು."
- "ಇಂದಿನ ಜಗತ್ತಿನಲ್ಲಿ ನಾವೀನ್ಯತೆ ಯಶಸ್ಸಿಗೆ ಪ್ರಮುಖವಾಗಿದೆ."
- "ನಿಮ್ಮ ಕನಸುಗಳನ್ನು ಎಂದಿಗೂ ಬಿಟ್ಟುಕೊಡಬೇಡಿ."