ಮುನಿಶ್ರೀ ತರುಣ್ ಸಾಗರ್
ಮುನಿ ಶ್ರೀ ತರುಣ ಸಾಗರ್‌ಜಿ ಮಹಾರಾಜ್
ಮುನಿ ಶ್ರೀ ತರುಣ ಸಾಗರ್‌ಜಿ ಮಹಾರಾಜ್ ಅವರು ಭಾರತದ ಪ್ರಸಿದ್ಧ ಜೈನ ದಿಗಂಬರ ಮುನಿಗಳಲ್ಲೊಬ್ಬರು. ತಮ್ಮ ಕ್ರಾಂತಿಕಾರಿ ಚಿಂತನ, ಧಾರ್ಮಿಕ ತಪಸ್ಸು ಮತ್ತು ನಿಸ್ಸಂಶಯವಾಗಿ ಮಾತನಾಡುವ ಶೈಲಿಗೆ ಅವರು ಖ್ಯಾತರಾಗಿದ್ದರು. "ಕಹಿ ಮಾತ್ರೆಗಳು" ಎಂಬ ನುಡಿಮುತ್ತುಗಳ ಮೂಲಕ ಸಮಾಜದಲ್ಲಿ ನೈತಿಕತೆ, ಶಿಸ್ತು ಮತ್ತು ಸಂಸ್ಕಾರಗಳನ್ನು ಬಿತ್ತುತ್ತಿದ್ದ ಅವರು ಲಕ್ಷಾಂತರ ಭಕ್ತರ ಪ್ರೀತಿಗೆ ಪಾತ್ರರಾಗಿದ್ದರು.
ಅವರು ಕೇವಲ 13ನೇ ವಯಸ್ಸಿನಲ್ಲಿ ಸನ್ಯಾಸದ ದೀರ್ಘ ಮಾರ್ಗಕ್ಕೆ ಕಾಲಿಟ್ಟು, ಆಚಾರ್ಯ ಪುಷ್ಪದಂತ ಸಾಗರ್ ಅವರಿಂದ ದೀಕ್ಷೆ ಪಡೆದರು. ದಿಗಂಬರ ಪಂಥದ ಶಿಸ್ತನ್ನು ಜೀವಮಾನವಿಡೀ ಅನುಸರಿಸಿ, ಆಧ್ಯಾತ್ಮ, ತಾತ್ವಿಕತೆಯ ಜತೆಗೆ ಸಾಮಾಜಿಕ ವಿಚಾರಗಳ ಮೇಲೂ ಧೈರ್ಯವಾಗಿ ಮಾತನಾಡಿದ ವಿರಳ ಧರ್ಮಗುರು ಎನ್ನಬಹುದು.
ಜೈನ ಸಮಾಜದ ಗಡಿಗಳನ್ನು ಮೀರಿ, ಎಲ್ಲ ಧರ್ಮಗಳ ಜನರಲ್ಲಿಯೂ ಅವರು ಗೌರವವನ್ನು ಗಳಿಸಿದ್ದರು. ಅವರ ಪ್ರವಚನಗಳು ನಿರ್ವಿಜ್ಞಾನ, ನೇರವಾದ ಮತ್ತು ಸ್ಪಷ್ಟವಾದ ಶೈಲಿಗೆ ಹೆಸರಾಗಿದ್ದವು. ಈ ಕಾರಣಕ್ಕಾಗಿ ಹಲವು ರಾಷ್ಟ್ರ ನಾಯಕರು ಮತ್ತು ಜನಸಾಮಾನ್ಯರು ಅವರನ್ನು ಆಧ್ಯಾತ್ಮಿಕ ಮಾರ್ಗದರ್ಶಿಯಾಗಿ ಮಾನ್ಯಪಡುತ್ತಿದ್ದರು.
ಮುನಿ ಶ್ರೀ ತರುಣ ಸಾಗರ್‌ಜಿ ಅವರ ಜೀವನವೇ ಒಂದು ತಪಸ್ಸಿನ ಮೂರ್ತ ರೂಪವಾಗಿತ್ತು. ಅವರ ಸಮರ್ಥ ಬದುಕು ಮತ್ತು ಬೋಧನೆಗಳು ಇಂದಿಗೂ ಸಹ ಅನೇಕರನ್ನು ಪ್ರೇರೇಪಿಸುತ್ತಿವೆ.[೧]
ನುಡಿಗಳು
[ಸಂಪಾದಿಸಿ]ಕಳವು ಮಾಡಲೂ ಅವಕಾಶ ಸಿಗುವವರೆಲ್ಲರೂ ಅನಿವಾರ್ಯ ಪ್ರಾಮಾಣಿಕರು.[೨]
ಐವತ್ತು ವರ್ಷಗಳ ನಂತರ ನಮ್ಮ ಊಟದ ಪದ್ಧತಿಯನ್ನು ಬದಲಾಯಿಸಬೇಕು. 100 ವರ್ಷಗಳ ನಂತರ ಮನೆಯನ್ನು ಕೆಡಹಬೇಕು. 500 ವರ್ಷಗಳ ನಂತರ ಮಂದಿರ - ಮಸೀದಿಗಳನ್ನು ಬೀಳಿಸಬೇಕು. 1,000 ವರ್ಷಗಳ ನಂತರ ಧರ್ಮ ಗ್ರಂಥಕ್ಕೆ ಬೆಂಕಿ ಹಚ್ಚಬೇಕು.
50 ವರ್ಷಗಳಲ್ಲಿ ನಮ್ಮ ಊಟದ ಏಕತಾನತೆ ರುಚಿ ಹದಗೆಟ್ಟಿರುತ್ತದೆ. ನೂರು ವರ್ಷಗಳಲ್ಲಿ ಮನೆಗಳ ವಾಸ್ತುಶಿಲ್ಪ ಹಳೆಯದಾಗುತ್ತದೆ. ಐನೂರು ವರ್ಷಗಳಲ್ಲಿ ಮಂದಿರಗಳು ತಮ್ಮ ಮೂಲ ಉದ್ದೇಶಗಳನ್ನು ಮರೆತು ಬಿಡುತ್ತವೆ.
1,000 ವರ್ಷಗಳಲ್ಲಿ ಧರ್ಮದಲ್ಲಿಯೂ ( ರೂಢಿಗತವಾದ ಕಂದಾಚಾರಗಳಿಂದ) ಕೊಳೆ- ಗಲೀಜು ಸೇರಿಕೊಂಡು ಬಿಡುತ್ತದೆ. ಇಂದು ಪ್ರತಿಯೊಂದು ಧರ್ಮದ ಸ್ಥಿತಿಯೂ ಹೀಗೆ ಆಗಿರುವುದರಿಂದ ಅವುಗಳ ಸಮಸ್ಯೆಗಳಿಗೆ ಪರಿಹಾರ ಇಲ್ಲದಂತಾಗಿದೆ. ಅದಕ್ಕಾಗಿ ಈ ಬದಲಾವಣೆಗಳು ಅನಿವಾರ್ಯ.
ನಾನು ಮಹಾವೀರನನ್ನು ಮಂದಿರಗಳಿಂದ ಮುಕ್ತ ಮಾಡಲು ಇಚ್ಛಿಸುತ್ತೇನೆ. ಈ ಕಾರಣಗಳಿಂದಲೇ ನಾನು ಇತ್ತೀಚಿನ ದಿನಗಳಲ್ಲಿ ಮಂದಿರಗಳಲ್ಲಿ ಪ್ರವಚನ ಮಾಡುವುದನ್ನು ನಿಲ್ಲಿಸಿದ್ದೇನೆ. ನಾನು ಪಟ್ಟಣಗಳಲ್ಲಿ ನಾಲ್ಕು ರಸ್ತೆಗಳು ಕೂಡಿರುವ ಚೌಕಗಳಲ್ಲಿ ಪ್ರವಚನ ಮಾಡುತ್ತೇನೆ. ಮಹಾವೀರನನ್ನು ಜೈನರಿಂದ ಮುಕ್ತಗೊಳಿಸಿ, ಆತನ ಸಂದೇಶಗಳು, ಆತನ ಆಚಾರ, ಆದರ್ಶ ಜೀವನ ಜಗತ್ತಿನ ಮುಂದೆ ಬರಲಿ.
'ಸುಧಾರಣೆ ಪ್ರಕ್ರಿಯೆ ಕೆಳಗಿನಿಂದ ಅಲ್ಲ ಮೇಲಿನಿಂದ ಪ್ರಾರಂಭವಾಗಬೇಕು. ಏಕೆಂದರೆ ಭ್ರಷ್ಟಾಚಾರದ ಗಂಗೋತ್ರಿ ಮೇಲಿಂದ ಕೆಳಗಡೆ ಹರಿಯುತ್ತದೆ. ಋಷಿಕೇಶದಲ್ಲಿ ಗಂಗಾನದಿಯು ಶುದ್ದೀಕರಣವಾದರೆ, ಹರಿದ್ವಾರ ಮತ್ತು ಕೆಳಗಿನ ಎಲ್ಲಾ ಸ್ತರಗಳಲ್ಲಿ ಸ್ವತ : ಶುದ್ದವಾಗುತ್ತದೆ'. [೩]
ಉಲ್ಲೇಖಗಳು
[ಸಂಪಾದಿಸಿ]- ↑ https://prajapragathi.com/%e0%b2%87%e0%b2%b9%e0%b2%b2%e0%b3%8b%e0%b2%95-%e0%b2%a4%e0%b3%8d%e0%b2%af%e0%b2%9c%e0%b2%bf%e0%b2%b8%e0%b2%bf%e0%b2%a6-%e0%b2%9c%e0%b3%88%e0%b2%a8-%e0%b2%ae%e0%b3%81%e0%b2%a8%e0%b2%bf-%e0%b2%b6/
- ↑ https://dailyinspirationkannada.com/kannada-life-lession-quote/
- ↑ https://kannada.oneindia.com/news/india/jain-monk-tarun-sagarji-speech-about-religion-148947.html