ವಿಷಯಕ್ಕೆ ಹೋಗು

ಮಾರೇಶ್ವರೊಡೆಯರ ವಚನ

ವಿಕಿಕೋಟ್ದಿಂದ

ಮಾರೇಶ್ವರೊಡೆಯರ ವಚನಗಳು ಶರಣ ಸಾಹಿತ್ಯದ ಭಾಗವಾಗಿದೆ ಮತ್ತು ಅವುಗಳನ್ನು ಕಣಜ ವೆಬ್‌ಸೈಟ್‌ನಲ್ಲಿ ಕಾಣಬಹುದು. ಅವರ ವಚನಗಳು 12 ನೇ ಶತಮಾನಕ್ಕೆ ಸೇರಿವೆ ಮತ್ತು ಅಂಕಿತನಾಮ "ಮಾರೇಶ್ವರ" ಆಗಿದೆ. ಅವರು ತಮ್ಮ ವಚನಗಳಲ್ಲಿ ನಿಜವಾದ ಜ್ಞಾನ ಮತ್ತು ಭಕ್ತಿ ಹಾಗೂ ಆಧ್ಯಾತ್ಮಿಕ ಮಾರ್ಗವನ್ನು ವಿವರಿಸಿದ್ದಾರೆ. ಈ ವಚನಗಳು ನಿಜವಾದ ಜ್ಞಾನ ಮತ್ತು ಭಕ್ತಿಯ ಮಾರ್ಗವನ್ನು ಸೂಚಿಸುತ್ತವೆ ಮತ್ತು ಜೀವನದ ಸತ್ಯಗಳನ್ನು ಅರಿಯಲು ಪ್ರೇರೇಪಿಸುತ್ತವೆ. []

ವಚನಗಳು

[ಸಂಪಾದಿಸಿ]
  • ಅಪ್ಪುವಿನ ಶಿಲೆಯ, ಉಳಿಯ ಮೊನೆಯಲ್ಲಿ ಚಿತ್ರಿಸಬಹುದೆ ?

ಅರಗಿನ ಪಟವ, ಉಳಿಯ ಮೊನೆಯಲ್ಲಿ ಅಕ್ಷರವ ಬರೆಯಬಹುದೆ ? ಮೃತ್ತಿಕೆಯ ಹರುಗೋಲನೇರಿ, ನದಿಯ ತಪ್ಪಲಿಗೆ ಹೋಗಬಹುದೆ ? ನಿಜನಿಶ್ಚಯವನರಿಯದವನ ವಾಚಾರಚನೆ ಇಷ್ಟಲ್ಲದಿಲ್ಲ. ನಿಜತತ್ವವನರಿದವನ ವಾಚಾರಚನೆಯ ಕುರುಹೆಂತುಟೆಂದಡೆ ! ಶಿಲೆಯೊಳಗಣ ಸುರಭಿಯಂತೆ, ಪ್ರಳಯದೊಳಗಾಗದ ನಿಜನಿವಾಸದಂತೆ, ಆಯದ ಗಾಯದಂತೆ, ಸಂಗಾಯದ ಸುಖದಂತೆ. ಇಂತೀ ಭಾವರಹಿತವಾದ ಭಾವಜ್ಞನ ತೆರ, ಕೂಗಿಂಗೆ ಹೊರಗು, ಮಹಾಮಹಿಮ ಮಾರೇಶ್ವರಾ.

  • ಉಂಬವರೆಲ್ಲ ಒಂದೇ ಪರಿಯೆ,

ತಮ್ಮ ತಮ್ಮ ಬಾಯಿಚ್ಫೆಯಲ್ಲದೆ ? ಇಕ್ಕುವರಂದಕ್ಕೆ ಉಂಡಡೆ, ತನಗೇ ಸಿಕ್ಕೆಂದೆ ಮಾರೇಶ್ವರಾ.

  • ಉಕ್ಕುವ ಬೆಣ್ಣೆಯ ಒಲೆಯ ಮೇಲಿರಿಸಿ,

ಅಳಲುತ್ತ ಬಳಲುತ್ತಲಿರ್ದಾರಯ್ಯ. ಅಲ್ಲದ ಚೇಳಿನೊಳು ಚಲ್ಲವಾಡಿ, ಎಲ್ಲರೂ ನಾಣುಗೆಟ್ಟರಲ್ಲಯ್ಯಾ. ಎಲ್ಲರ ಅರಿವು, ಇಲ್ಲಿಯೆ ಉಳಿಯಿತ್ತು. ಇದ ಬಲ್ಲವರಾರೊ, ಮಾರೇಶ್ವರಾ ? []

ಉಲ್ಲೇಖಗಳು

[ಸಂಪಾದಿಸಿ]