ವಿಷಯಕ್ಕೆ ಹೋಗು

ಮಹಾದೇವಿ ವರ್ಮಾ

ವಿಕಿಕೋಟ್ದಿಂದ

ಮಹಾದೇವಿ ವರ್ಮಾ(೧೯೦೭- ೧೧, ಸೆಪ್ಟೆಂಬರ್ ೧೯೮೭)- ಇವರು ಹಿಂದಿ ಭಾಷೆಯ ಪ್ರಸಿದ್ಧ ಕವಯಿತ್ರಿ, ಸ್ವಾತಂತ್ರ್ಯ ಹೋರಾಟಗಾರ್ತಿ, ಮಹಿಳಾ ಹಕ್ಕುಗಳ ಪ್ರತಿಪಾದಕಿ ಹಾಗು ಶಿಕ್ಷಣ ತಜ್ಞೆ.೧೯೧೪ರಿಂದ ೧೯೩೮ರವರೆಗೆ ಹಿಂದಿ ಸಾಹಿತ್ಯಲೋಕದಲ್ಲಿ ನೆಡೆದ ಛಾಯಾವಾದ ಸಾಹಿತ್ಯ ಪ್ರಕಾರ ಹಾಗು ಹಲವು ಕವಿ ಸಮ್ಮೇಳನಗಳಲ್ಲಿ ಇವರು ಪ್ರಮುಖ ಪಾತ್ರವನ್ನು ನಿರ್ವಹಿಸಿದರು. "ಆಧುನಿಕ ಮೀರಾ" ಎಂದು ಖ್ಯಾತರಾಗಿದ್ದ ಇವರು ೧೯೮೨ ರಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದರು. ೧೯೧೬ರಲ್ಲಿ ಮಹಾದೇವಿಯವರು ೯ ವರ್ಷದವರಾಗಿದ್ದಾಗ ಅವರ ವಿವಾಹವನ್ನು ನಿಶ್ಚಯಿಸಿ ನೆರವೇರಿಸಲಾಯಿತು. ಆದರೆ ಮದುವೆಯ ನಂತರವೂ ಮಹಾದೇವಿಯವರು ತಮ್ಮ ತವರಿನಲ್ಲಿಯೇ ಉಳಿದು ತಮ್ಮ ಅಲಹಾಬಾದಿನ ಕ್ರಾಸ್ತ್ವಾಯಿಟ್ ಬಾಲಕಿಯರ ಶಾಲೆಯಲ್ಲಿ ತಮ್ಮ ವಿದ್ಯಾಭಾಸವನ್ನು ಮುಂದುವರಿಸಿದರು. ಈ ಶಾಲೆಯಲ್ಲಿಯೇ ಅವರು ಮುಂದೊಂದು ದಿನ ಇವರಂತೆಯೇ ಪ್ರಸಿದ್ಧ ಕವಯಿತ್ರಿಯೆಂದು ಗುರುತಿಸಿಕೊಂಡ ಸುಭದ್ರ ಕುಮಾರಿ ಚೌಹಾಣ್ರನ್ನು ಸಹಪಾಠಿಯಾಗಿ ಭೇಟಿಯಾದರು

ನುಡಿಗಳುಹಿಂದಿಯಿಂದ ಆಯ್ದು ಕನ್ನಡಕ್ಕೆ ಭಾಷಾಂತರಿಸಲಾಗಿದೆ

[ಸಂಪಾದಿಸಿ]

1. “ಪ್ರತಿಭೆ ಜಾತಿ ಮೇಲೆ ಅವಲಂಬಿತವಲ್ಲ, ಶ್ರಮವೇ ಸರ್ವವನ್ನೂ ಪಡೆದೀತು”
2. “ಕಲೆಯ ಸತ್ಯವು ಸೌಂದರ್ಯದಿಂದ ತನ್ನನ್ನು ವ್ಯಕ್ತಪಡಿಸುವ ಮೂಲಕ ಅಪೂರ್ವವಾಗಬಹುದು”
3. “ಸ್ವತಃ ಶಕ್ತಿಯಲ್ಲಿ ನಂಬಿಕೆಯಿಲ್ಲದವನು ತನ್ನದೇ ದುರ್ಬಲತೆಯಲ್ಲಿ ನಂಬಿಕೆ ಇಟ್ಟುಕೊಳ್ಳುತ್ತಾರೆ।”
4. “ಸ್ನೇಹವೇ ಮಾನವೀಯತೆಯ ದೇವಸ್ಥಾನದ ಏಕೈಕ ದೇವರು।”


ಉಲ್ಲೇಖಗಳು

[ಸಂಪಾದಿಸಿ]

1. https://www.insightfultake.com/details/mahadevi-verma-the-modern-mira-of-hindi-literature
2. https://en.wikipedia.org/wiki/Mahadevi_Varma


ಬಾಹ್ಯ ಕೊಂಡಿಗಳು

[ಸಂಪಾದಿಸಿ]
w
w
ವಿಕಿಪೀಡಿಯದಲ್ಲಿ ಇದರ ಬಗ್ಗೆ ಒಂದು ಲೇಖನವಿದೆ:

[೧] [೨]

<nowiki>