ವಿಷಯಕ್ಕೆ ಹೋಗು

ಭುವನೇಶ್ವರಿ ಹೆಗಡೆ

ವಿಕಿಕೋಟ್ದಿಂದ

ಭುವನೇಶ್ವರಿ ಹೆಗಡೆ ಕನ್ನಡ ಸಾಹಿತ್ಯದ ಹಾಸ್ಯಲೋಕದಲ್ಲಿ ಪ್ರಮುಖವಾದ ಹೆಸರು.೦೬-೦೫-೧೯೫೬ರಲ್ಲಿ ಜನಿಸಿದ ಭುವನೇಶ್ವರಿ ಹೆಗಡೆ, ಉತ್ತರ ಕನ್ನಡ ಜಿಲ್ಲೆ ಕತ್ರಗಾಲ ಗ್ರಾಮದವರು. ಇವರ ತಂದೆ ಶ್ರೀ ಗಣಪತಿ ಹೆಗಡೆ ಕತ್ರಗಾಲ, ತಾಯಿ ಗೌರಮ್ಮ. ತಮ್ಮ ಪದವಿ ವಿದ್ಯಾಭ್ಯಾಸವನ್ನು ಶಿರ್ಸಿಯ ಎಮ್.ಇ.ಎಸ್ ಕಾಲೇಜಿನಲ್ಲಿ ಪೂರೈಸಿ ಕನರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದವರು. ಪತಿ ಶ್ರೀ ಶಂಭುಹೆಗಡೆ ಹಾಗು ಮಗಳು ಆಭಾ. ಇವರ ೫೦೦ಕ್ಕೂ ಮಿಕ್ಕ ಹಾಸ್ಯ ಪ್ರಬಂಧ ರಚನೆ ಕನ್ನಡದ ಎಲ್ಲ ಪ್ರಮುಖ ಪತ್ರಿಕೆ,ನಿಯತಕಾಲಿಕೆಗಳಲ್ಲಿ ಪ್ರಕಟಿತವಾಗಿವೆ.

ಪ್ರಸ್ತುತ ವಿಶ್ವವಿದ್ಯಾನಿಲಯ ಕಾಲೇಜು,ಮಂಗಳೂರು ಇಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕಿಯಾಗಿದ್ದಾರೆ.

ಕೃತಿಗಳು

[ಸಂಪಾದಿಸಿ]
  • ಮುಗುಳು
  • ನೆಕ್ಕು ಹಗುರಾಗಿ
  • ಎಂಥದು ಮಾರಾಯ್ರೆ
  • ವಲಲ ಪ್ರತಾಪ
  • ಹಾಸಭಾಸ
  • ಮೃಗಯಾವಿನೋದ
  • ಬೆಟ್ಟದ ಭಾಗೀರಥಿ
  • ಪುಟ್ಟಿಯ ಪಟ್ಟೆ ಹುಲಿ
  • ಕೈಗುಣ ಬಾಯ್ಗುಣ
  • ಬೆಸ್ಟ್ ಆಫ್ ಭು.ಹೆ

ಅಂಕಣ ಬರಹ

[ಸಂಪಾದಿಸಿ]
  • ಲಂಕೇಶ್ ಪತ್ರಿಕೆ
  • ವಾರ್ತಾಭಾರತಿ
  • ಉದಯವಾಣಿ
  • ಕರ್ಮವೀರ
  • ಪ್ರಜಾವಾಣಿ

ಉಲ್ಲೇಖಗಳು

[ಸಂಪಾದಿಸಿ]