ಬ್ರಹ್ಮಗುಪ್ತ
ಬ್ರಹ್ಮಗುಪ್ತ(ಸುಮಾರು ೫೯೮ CE - ಸುಮಾರು ೬೬೮ CE) - ಇವರು ಒಬ್ಬ ಭಾರತದ ಗಣಿತಜ್ಞ ಮತ್ತು ಖಗೋಳಶಾಸ್ತ್ರಜ್ಞ. ಇವರು ಗಣಿತ ಮತ್ತು ಖಗೋಳಶಾಸ್ತ್ರದ ಕುರಿತು ಎರಡು ಆರಂಭಿಕ ಕೃತಿಗಳ ಲೇಖಕರು. (ಕ್ರಿ.ಶ. ೬೨೮) ರಲ್ಲಿ, ಬ್ರಹ್ಮಗುಪ್ತನು ಗುರುತ್ವಾಕರ್ಷಣೆಯನ್ನು(gravity) ಆಕರ್ಷಕ ಶಕ್ತಿ ಎಂದು ಮೊದಲು ವಿವರಿಸಿದನು ಮತ್ತು ಅದನ್ನು ವಿವರಿಸಲು ಸಂಸ್ಕೃತದಲ್ಲಿ "ಗುರುತ್ವಕರ್ಷಣ (गुरुत्वाकर्षणम्)" ಎಂಬ ಪದವನ್ನು ಬಳಸಿದನು. ಬ್ರಹ್ಮಗುಪ್ತನು ತನ್ನ ಹೇಳಿಕೆಯ ಪ್ರಕಾರ, (ಕ್ರಿ.ಶ. ೫೯೮) ರಲ್ಲಿ ಜನಿಸಿದನು. ಬ್ರಹ್ಮಗುಪ್ತರು ತಮ್ಮನ್ನು ಗಣಿತಶಾಸ್ತ್ರದಲ್ಲಿ ತೊಡಗಿಸಿಕೊಂಡ ಖಗೋಳಶಾಸ್ತ್ರಜ್ಞರೆಂದು ಪರಿಗಣಿಸಿದ್ದರೂ, ಇಂದು ಅವರು ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಚಾವ್ಡಾ ರಾಜವಂಶದ ದೊರೆ ವ್ಯಾಗ್ರಹಮುಖನ ಆಳ್ವಿಕೆಯಲ್ಲಿ ಗುರ್ಜರದೇಶ( ಭಾರತದ ರಾಜಸ್ಥಾನದಲ್ಲಿರುವ ಆಧುನಿಕ ಭಿನ್ಮಲ್ )ದ ಬಿಲ್ಲಮಾಲಾದಲ್ಲಿ ಜನಿಸಿದನು. ಬ್ರಹ್ಮಗುಪ್ತನು (ಕ್ರಿ.ಶ ೬೬೮) ರಲ್ಲಿ ನಿಧನರಾದರು, ಮತ್ತು ಅವರು ಉಜ್ಜಯಿನಿಯಲ್ಲಿ ನಿಧನರಾದರು ಎಂದು ಭಾವಿಸಲಾಗಿದೆ.
