ಪುನೀತ್ ರಾಜ್ಕುಮಾರ್
ಪರಿಚಯ
[ಸಂಪಾದಿಸಿ]ಪುನೀತ್ ರಾಜ್‍ಕುಮಾರ್(೧೭ ಮಾರ್ಚ್ ೧೯೭೫ - ೨೯ ಅಕ್ಟೋಬರ್ ೨೦೨೧) -ಪುನೀತ್ ಅವರು ಭಾರತೀಯ ಚಿತ್ರನಟ, ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕ ಮತ್ತು ಸಿನಿಮಾ ನಿರ್ಮಾಪಕ. ಇವರು ೨೯ ಕನ್ನಡ ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲನಟನಾಗಿ ಕಾಣಿಸಿಕೊಂಡಿದ್ದರು. “ಪ್ರೇಮದ ಕಾಣಿಕೆ” (೧೯೭೬) ಚಿತ್ರದಲ್ಲಿ ಆರು ತಿಂಗಳ ವಯಸ್ಸು ಮತ್ತು ೧೯೮೫ ರ “ಬೆಟ್ಟದ ಹೂವು” ಚಿತ್ರದಲ್ಲಿ ರಾಂಲು ಪಾತ್ರಕ್ಕೆ ನ್ಯಾಷನಲ್ ಫಿಲ್ಮ್ ಅಲವಾಡಿಯನ್ನು ಪಡೆದರು.೨೦೦೨ ರ “ಅಪ್ಪು” ಚಿತ್ರದಿಂದ ನಟನಾಗಿ ಹೆಜ್ಜೆ ಇಟ್ಟರು. ಅವರಿಗೆ ಅಭಿಮಾನಿಗಳು ಪವರ್‌ಸ್ಟಾರ್ ಎಂದು ಕರೆಯುತ್ತಾರೆ. ಅವರು ನಟಿಸಿದ ಅಪ್ಪು(೨೦೦೨), ಅಭಿ(೨೦೦೩), ವೀರಕನ್ನಡಿಗ(೨೦೦೪), ಮೌರ್ಯ(೨೦೦೪), ಆಕಾಶ್ (೨೦೦೫), ಅಜಯ್ (೨೦೦೬), ಅರಸು (೨೦೦೭), ಮಿಲನ (೨೦೦೭), ವಂಶಿ(೨೦೦೮), ರಾಮ್ (೨೦೦೯), ಪೃಥ್ವಿ(೨೦೧೦), ಜಾಕಿ(೨೦೧೦), ಹುಡುಗರು (೨೦೧೧), ಅಣ್ಣಾ ಬಾಂಡ್ (೨೦೧೨), ಪವರ್ (೨೦೧೪), ರಣವಿಕ್ರಮ (೨೦೧೫), ದೊಡ್ಮನೆ ಹುಡುಗ (೨೦೧೬), ರಾಜಕುಮಾರ (೨೦೧೭), ಯುವರತ್ನ(೨೦೨೧), ಜೇಮ್ಸ್ (೨೦೨೨) ಸೇರಿದಂತೆ ಇತರ ಹಲವು ಚಲನಚಿತ್ರಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿವೆ. ಅವರು ಕನ್ನಡ ಚಿತ್ರರಂಗದ ಪ್ರಮುಖ ಹಾಗೂ ಅತ್ಯಂತ ಯಶಸ್ವಿ ನಾಯಕನಟರಾಗಿದ್ದರು. ಪುನೀತ್‍ರವರ(ಮೊದಲ ಹೆಸರು ಲೋಹಿತ್) ಇವರು ಡಾ. ರಾಜ್‌ಕುಮಾರ್ ಮತ್ತು ಪಾರ್ವತ್ತಮ್ಮ ರಾಜ್‌ಕುಮಾರ್ ಅವರ ಮಗ ಇವರು ರಾಜಕುಮಾರ್ ದಂಪತಿಯ ಮೂರನೆ ಮತ್ತು ಕಿರಿಯ ಮಗ. ಅವರು ಚೆನ್ನೈನಲ್ಲಿ ಜನಿಸಿದರು. ಇವರ ಸಹೋದರರಾದ ಶಿವರಾಜ್‍ಕುಮಾರ್(ನಟ) ಮತ್ತು ರಾಘವೇಂದ್ರ ರಾಜ್‍ಕುಮಾರ್(ನಟ) ಅವರು ಜನಪ್ರಿಯ ನಟರು. ಇವರ ಸಹೋದರಿಯರು ಲಕ್ಷ್ಮಿ ಮತ್ತು ಪೂರ್ಣಿಮಾ. ಪುನೀತ್ ಆರು ವರ್ಷ ವಯಸ್ಸಿನವನಾಗಿದ್ದಾಗ ಅವರ ಕುಟುಂಬ ಮೈಸೂರಿಗೆ ಸ್ಥಳಾಂತರಗೊಂಡಿತು. ಅವರು ಹತ್ತು ವರ್ಷ ವಯಸ್ಸಿನವನಾಗುವವರೆಗೂ ಅವರ ತಂದೆ ಅವರನ್ನು ಮತ್ತು ಅವರ ಸಹೋದರಿ ಪೂರ್ಣಿಮಾರನ್ನು ಚಲನಚಿತ್ರದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಪುನೀತ್ ೧ ಡಿಸೆಂಬರ್ ೧೯೯೯ರಂದು ಚಿಕ್ಕಮಗಳೂರಿನ ಅಶ್ವಿನಿ ರೇವಂತ್ ರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ಪುನೀತ್ ತನ್ನ ತಂದೆಯಂತೆಯೇ ವೃತ್ತಿಪರ ಗಾಯನದಲ್ಲಿ ಉತ್ತಮ ಸಾಧನೆ ಮಾಡಿದ ಕೆಲವೇ ಕೆಲವು ನಟರಲ್ಲಿ ಒಬ್ಬರು. ಅವರು ಅಪ್ಪುವಿನಲ್ಲಿ ಒಬ್ಬರೇ ಹಾಡಿದರು ಮತ್ತು ವಂಶಿ ಚಿತ್ರದಲ್ಲಿಜೊತೆ ಜೊತೆಯಲ್ಲಿ ಗೀತೆಯನ್ನು ಹಾಡಿದರು. ಅವರು ಜಾಕಿಯಲ್ಲಿ ವೇಗದ ಹಾಡನ್ನು ಹಾಡಿದರು ಮತ್ತು ಅವರ ಸಹೋದರ ಶಿವರಾಜ್‍ಕುಮಾರ್ (ನಟ) ಅವರ ಲವ ಕುಶ ಮತ್ತು ಮೈಲಾರಿ ಚಿತ್ರಗಳಲ್ಲಿ ಹಾಡಿದರು. ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿರುವ ಅಕಿರಾ ಚಿತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಅವರುಕಣ್ಣ ಸನ್ನೆ ಇಂದಲೇನೆ ಹಾಡನ್ನು ಹಾಡಿದ್ದಾರೆ. ಅವರ ಹೋಮ್-ಪ್ರೊಡಕ್ಷನ್ಸ್ ಹೊರತುಪಡಿಸಿ ಇತರ ಹಾಡುಗಳಿಗೆ ಅವರ ಸಂಭಾವನೆ ಸೇವಾ ಕಾರ್ಯಗಳಿಗೆ ಹೋಗುತ್ತದೆ ಎಂದು ಅವರು ಬಹಿರಂಗಪಡಿಸಿದ್ದಾರೆ.
ಹಠಾತ್ತಾಗಿ ಕಾಣಿಸಿಕೊಂಡ ಎದೆನೋವು ಮತ್ತು ತೀವ್ರ ಹೃದಯಾಘಾತದಿಂದಾಗಿ ೨೯ ಅಕ್ಟೋಬರ್ ೨೦೨೧ ರಂದು ಬೆಂಗಳೂರಿನ ವಿಕ್ರಮ ಆಸ್ಪತ್ರೆಯಲ್ಲಿ ನಿಧನರಾದರು. ಡಾ.ರಾಜ್‌ಕುಮಾರ್ ಅವರ ಇಡೀ ಕುಟುಂಬ ನೇತ್ರದಾನ ಮಾಡುವುದಕ್ಕೆ ಹಲವು ವರ್ಷಗಳ ಹಿಂದೆಯೇ ಸಹಿ ಮಾಡಿದ್ದರು. ಅಣ್ಣಾವ್ರು ಕೂಡ ನೇತ್ರದಾನ ಮಾಡಿ ಇಬ್ಬರಿಗೆ ಬೆಳಕಾಗಿ ಹೋದರು. ಹಾಗೆಯೇ ಪುನೀತ್ ಅವರು ಕೂಡ ನೇತ್ರದಾನ ಮಾಡಿ ನಾಲ್ವರಿಗೆ ಬೆಳಕಾಗಿದ್ದಾರೆ
ಉಲ್ಲೇಖಗಳು
[ಸಂಪಾದಿಸಿ]೧. https://kn.wikipedia.org/wiki/%E0%B2%AA%E0%B3%81%E0%B2%A8%E0%B3%80%E0%B2%A4%E0%B3%8D_%E0%B2%B0%E0%B2%BE%E0%B2%9C%E0%B3%8D%E2%80%8D%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D
೨. https://kannadadeevige.in/puneeth-rajkumar-prabandha-in-kannada/