ವಿಷಯಕ್ಕೆ ಹೋಗು

ಪಿ ಎನ್ ಪಣಿಕ್ಕರ್

ವಿಕಿಕೋಟ್ದಿಂದ

ಪಿ ಎನ್ ಪಣಿಕ್ಕರ್ (1 ಮಾರ್ಚ್ 1909 - ಜೂನ್ 1995) ಇವರ ಪೂರ್ಣ ಹೆಸರು ಪುತ್ತುವೈಲ್ ನಾರಾಯಣ ಪಣಿಕ್ಕರ್. ಅವರನ್ನು ಕೇರಳದ ಗ್ರಂಥಾಲಯ ಚಳವಳಿಯ ಪಿತಾಮಹ ಎಂದು ಪರಿಗಣಿಸಲಾಗಿದೆ. ಅವರು ಸಾಕ್ಷರತಾ ಚಳವಳಿಯ ಪಿತಾಮಹರೂ ಆಗಿದ್ದರು. ಅವರ ಪುಣ್ಯತಿಥಿ ಜೂನ್ 19ನೇ ತಾರೀಕನ್ನು ಕೇರಳ ಸರಕಾರವು ಓದುವ ದಿನವೆಂದು (ವಾಯನ ದಿನಂ)ಎಂದು ಘೋಷಿಸಿತು. ಜೂನ್ ೧೯ನೇ ತಾರೀಕನ್ನು ಭಾರತದಾದ್ಯಂತ ರಾಷ್ಟ್ರೀಯ ಓದುವ ದಿನವೆಂದು ಘೋಷಿಸಿದರು ಅವರು ವಿದ್ಯಾಭ್ಯಾಸದ ನಂತರ ೧೯೨೬ ರಲ್ಲಿ ತಮ್ಮ ಗ್ರಾಮದಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು ಮತ್ತು ಸನಾತನ ಧರ್ಮ ಎಂಬ ಗ್ರಂಥಾಲಯವನ್ನು ಪ್ರಾರಂಭಿಸಿದರು.

ಉಕ್ತಿಗಳು

[ಸಂಪಾದಿಸಿ]
  • ಓದಿರಿ ಮತ್ತು ಬೆಳೆಯಿರಿ(ವಾಯುಚು ವಳರುಕು)
    • ಪಣಿಕ್ಕರ್ 1945ರಲ್ಲಿ 47 ಗ್ರಾಮೀಣ ಗ್ರಂಥಾಲಯದೊಂದಿಗೆ ತಿರುವಿತಂಕೂರ್ ಗ್ರಂಥಶಾಲಾ ಸಂಘವನ್ನು ಸ್ಥಾಪಿಸುವಲ್ಲಿ ನೇತೃತ್ವ ವಹಿಸಿದರು.ಈ ಸುಭಾಷಿತ ಗ್ರಂಥಶಾಲಾ ಸಂಘದ ಘೋಷಣೆಯಾಗಿತ್ತು
  • ಅಮೃತಂ ತು ವಿದ್ಯಾ
    • ಪಿ ಎನ್ ಪಣಿಕ್ಕರ್ ಫೌಂಡೇಶನ್ ಈ ವಾಕ್ಯವನ್ನು ಉಲ್ಲೇಖಿಸಿ ಇಡಿ ದೇಶಕ್ಕೆ ಕಲಿಕೆಯ ಅಮೃತವನ್ನು ವಿಸ್ತರಿಸುತ್ತದೆ