ವಿಷಯಕ್ಕೆ ಹೋಗು

ನಿಜಗುಣ ಶಿವಯೋಗಿ

ವಿಕಿಕೋಟ್ದಿಂದ

ಕನ್ನಡ ನಾಡಿನ ಅಧ್ಯಾತ್ಮದ ಶಿಖರ ಶ್ರಿಮನ್ ನಿಜಗುಣ ಶಿವಯೋಗಿಗಳು ವೀರವೈರಾಗ್ಯ ತಾಳಿ ಶಂಭುಲಿಂಗನ ಬೆಟ್ಟದಲ್ಲಿ ವಾಸ ಮಾಡಿ ಅಲ್ಲಿ ಷಟ್ ಶಾಸ್ತ್ರ ರಚನೆ ಮಾಡಿದ್ದಾರೆ. ಕನ್ನಡದ ಮೊಟ್ಟ ಮೊದಲ ವಿಶ್ವಕೋಶ ವಿವೇಕ ಚಿಂತಾಮಣಿಯ ಕತೃ ನಿಜಗುಣ ಶಿವಯೋಗಿಗಳು ಎನ್ನುವದು ಗಮನಾರ್ಹ. ಇವರ 'ಕೋಗಿಲೆ, ಚೆಲ್ವ ಕೋಗಿಲೆ, ಮುದ್ದು ಕೋಗಿಲೆ, ಜಾಣ ಕೋಗಿಲೆ' ಎನ್ನುವದು ತುಂಬ ಜನಪ್ರಿಯವಾದ ತತ್ವಪದವಾಗಿದೆ.

ವಚನಗಳು

[ಸಂಪಾದಿಸಿ]
  • ಅಗ ಲಿಂಗವೆಂಬನ್ನಕ್ಕ

ಯೋಗಪೂಜೆ ಪುಂಣ್ಯಕ್ಕೆ ಬೀಜ. ಆತ್ಮನನರಿದೆಹೆನೆಂಬನ್ನಕ್ಕ ಉಭಯದೊಡಲಾಯಿತ್ತು. ಉಭಯದ ಗಿಡಬಜೆಯಲ್ಲಿ ಸಿಲುಕದೆ ನಿಂದ ನಿಜಗುಣಯೋಗಿ.

  • ಅರಿಬಿರಿದಿನಾಲಯದೊಳಗೆ ದೊರೆ (ಯದೆ)

ತಿರಿತಿರಿಗಿ ಬರುವ ದುರದಿಕ್ಕಿಗಳನೊಲ್ಲ. ಕರುಕರತ ತಾಳತೋರಿ ಎನ್ನನಿಂಬುಗೊಂಡೆಯಲ್ಲಾ ನಿಜಗುಣಯೋಗಿ.

  • ಆನುಳ್ಳನ್ನಕ್ಕ ನೀನುಂಟೆಲೆ ಮಾಯೆ

ಆನಿಲ್ಲದಿರ್ದಡೆ ನೀನಿಲ್ಲ. ಆನು ನೀನೆಂಬುಭಯವಳಿಯಲು ಆನಂದ ನಿಜಗುಣಯೋಗ.

  • ನಿಜ ಹೃದಯಾಂಬುಜದಲ್ಲಿ

ನಿರಾಳ ಪ್ರಣಮ ಪೀಠವಾಗಿರ್ಪನೊರ್ವ ಆಗೋಚರ ಶಿವಯೋಗಿಯು. ಆತನೆರಡು ಗುಂಡು ಹೊಸೆದಡೆ ಗೋಚರನಪ್ಪ ಕಾಣಾ, ನಿಜಗುಣಲಿಂಗ ಸಾಕ್ಷಿಯಾಗಿ, ಸಿದ್ಧರಾಮಯ್ಯ

  • ವಾರಿಗಿದಿರಾದ ಕಾಷ್ಟ.

ಬವರಕ್ಕಿದಿರಾದ ಬಂಟ, ಅರಿದೊರೆಗೆ ಇದಿರಾದ ದೊರೆ ಮರಳುವದಕ್ಕೆ ನೆರೆ ಸ್ವಪ್ನ. ಕಾಯ ಜೀವಕ್ಕಿದಿರಾದ ಅರಿವು ಭಾವಕ್ಕೆ ಕುರುಹುಗೊಡಲಿಲ್ಲ. ಉಭಯವಳಿದಲ್ಲದೆ ನಿಜಗುಣಯೋಗಿಯ ಯೋಗಕ್ಕೆಹೊರಗಲ್ಲ.

  • ಸರ್ವಮಯ ಆತ್ಮನೆಂದಲ್ಲಿ

ರಕ್ಷಿಸಿ ಶಿಕ್ಷಿಸಿಹೆನೆಂಬುದೇನೊ? `ಅಣೋರಣೀಯಾನ್ಮಹತೋಮಹೀಯಾನ್’ ಎಂಬಲ್ಲಿ ಬೇರೊಂದರಿತು ಕುರಿತು ಕಾಬುದೇನು? ಇದಿರಿಗೆ ತಾನಿಲ್ಲ, ತನಗೆ ಇದಿರಿಲ್ಲ ಎಂದಲ್ಲಿ ಗಜಬಜೆಯಲ್ಲಿ ಕುಜನವೇತಕ್ಕೆ? ಬೇರಿಗೆ ನೀರನೆರೆದಲ್ಲಿ ಶಾಖೆಗೆ ಸಂದುಂಟೆ? ಅಂಗ ಪ್ರಾಣಲಿಂಗ ಒಂದೆಂದಲ್ಲಿ ಅರ್ಪಿತಕ್ಕೆ ಹಿಂದು ಮುಂದಿಲ್ಲ. ನಿಜಗುಣಯೋಗಿಯ ಯೋಗಕ್ಕೆ ಮುನ್ನವೆ ಇಲ್ಲ.

  • ಮಿಂಚಿನ ಸಂಚಾರದಂತೆ

ಬಹುವರ್ಣದ ಬಣ್ಣದ ಗನ್ನದಂತೆ, ರಂಜನೆಯಲ್ಲಿ ರಂಜಿಸಿ ತೋರಿ ಅಡಗುವ ಪ್ರತಿಬಿಂಬದಂತೆ, ಅಂಗವಿದ್ದಳಿದು ತೋರುವ ಜಲಮಣಿಯೊಳಗಿನಂತೆ ನಿರಂಗದ ಸಂಗಕ್ಕೆ ಹೊರಗು ನಿಜಗುಣಯೋಗಿಯ ಯೋಗ. []

ಗ್ರಂಥಗಳು

[ಸಂಪಾದಿಸಿ]
  • ಕೈವಲ್ಯ ಪದ್ಧತಿ
  • ಪರಮಾನುಭವ ಬೋಧೆ
  • ಅನುಭವಸಾರ
  • ಪರಮಾರ್ಥ ಗೀತೆ
  • ಪಾರಮಾರ್ಥ ಪ್ರಕಾಶಿಕೆ
  • ವಿವೇಕ ಚಿಂತಾಮಣಿ
  • ಅರವತ್ಮೂರು ಪುರಾತನ ತ್ರಿವಿಧಿ[]

ಉಲ್ಲೇಖಗಳು

[ಸಂಪಾದಿಸಿ]