ವಿಷಯಕ್ಕೆ ಹೋಗು

ನಾಟ್ ಹಾನ್

ವಿಕಿಕೋಟ್ದಿಂದ

ಥಿಚ್ ನಾಟ್ ಹಾನ್, ಅವರು ವಿಯೆಟ್ನಾಮೀಸ್ ಬೌದ್ಧ ಧಾರ್ಮಿಕ ನಾಯಕ ಮತ್ತು ಬರಹಗಾರರಾಗಿದ್ದರು. ಅವರು ಪಾಶ್ಚಿಮಾತ್ಯ ದೇಶಗಳಲ್ಲಿ ಜನಪ್ರಿಯ ಬೌದ್ಧ ಶಿಕ್ಷಕರಾಗಿದ್ದರು.

ನುಡಿಗಳು

[ಸಂಪಾದಿಸಿ]
  • ಯಾರಾದರೂ ನಿಮಗೆ ನೋವುಂಟು ಮಾಡುತಿದ್ದರೆ‌ ಅವರನ್ನು ಶಿಕ್ಷಿಸುವ ಅಗತ್ಯವಿಲ್ಲ. ಅವರಿಗೆ ಸಹಾಯದ ಅಗತ್ಯ ಇರುತ್ತದೆ. ಈ ಸಂದೇಶವನ್ನು ಅವರು ನಿಮಗೆ ನೀಡುತ್ತಿರುತ್ತಾರೆ.

-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ , ೨೩ ಮಾರ್ಚ್ ೨೦೨೪ (UTC)

  • ನಿಜವಾದ ಸಂತೋಷವು ನಿಮ್ಮನ್ನು ನೀವು ಅರ್ಥ ಮಾಡಿ ಕೊಳ್ಳುವುದರಲ್ಲಿ, ನಿಮ್ಮನ್ನು ನೀವು ಒಪ್ಪಿಕೊಳ್ಳುವುದರಲ್ಲಿ ಮತ್ತು ನಿಮ್ಮ ಬಗ್ಗೆ ನೀವು ವಿಶ್ವಾಸ ಹೊಂದುವುದರಲ್ಲಿ ಅಡಗಿರುತ್ತದೆ.

-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ,೧೨ ಸೆಪ್ಟೆಂಬರ್ ೨೦೨೪ (UTC)

  • ನಮ್ಮ ಜೀವನದ ಗುಣಮಟ್ಟವು ನಮ್ಮ ಪ್ರಜ್ಞೆಯಲ್ಲಿ ಆಳವಾಗಿ ಬೇರು ಬಿಟ್ಟಿರುವ ಬೀಜಗಳ ಗುಣಮಟ್ಟವನ್ನು ಅವಲಂಬಿಸಿರುತ್ತದೆ.

-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ , ೨೧ ಎಪ್ರಿಲ್ ೨೦೨೩ (UTC)

  • ಮೌನ ಎಂದರೆ ಮಾತನಾಡದಿರುವುದು ಮತ್ತು ಕೆಲಸ ಮಾಡದಿರುವುದು ಎಂದರ್ಥವಲ್ಲ.ನಿಮ್ಮ ಮನಸ್ಸು ಕ್ಷೋಭೆಗೆ ಒಳಗಾಗಿಲ್ಲ ಎಂದರ್ಥ.

-ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ, ೧೧ ಅಕ್ಟೋಬರ್ ೨೦೨೧ (UTC){