ನಂದಮೂರಿ ತಾರಕ ರಾಮಾರಾವು
ಗೋಚರ
ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿದ್ದ ನಂದಮೂರಿ ತರಕರಾಮಾರಾವು 1923 ಮೇ 28 ರಂದು ಕೃಷ್ಣಾ ಜಿಲ್ಲೆಯ ಪಾಮರ್ರು ತಾಲೂಕಿನ ನಿಂಮಕೂರು ಗ್ರಾಮದಲ್ಲಿ ಜನಿಸಿದರು. 300ಕ್ಕೂ ಮೇಲ್ಪಟ್ಟ ಚಲನಚಿತ್ರಗಳಲ್ಲಿ ಅಭಿನಯಿಸಿ 1982 ರಲ್ಲಿ ತೆಲುಗುದೇಶಂ ಪಕ್ಷವನ್ನು ಸ್ಥಾಪಿಸಿದರು. ಅವರು ಮೂರು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದರು. 1996 ರ ಜನವರಿ 18ರಂದು ಅವರು ನಿಧನರಾದರು.
ಪ್ರಮುಖ ನುಡಿಗಳು
[ಸಂಪಾದಿಸಿ]ಅನ್ನವಿಲ್ಲದ ದೇಶದಲ್ಲಿ ಏಷಿಯಾ ಕ್ರೀಡಾಕೂಟ! [೧] ತೆಲುಗು ದೇಶಂ ಪಕ್ಷ ನನೊಡನೆ ಬಂದು, ನನೊಡನೆ ಹೋಗುತ್ತದೆ.[೨] ಆರು ಲಕ್ಷ ಉದ್ಯೋಗಿಗಳ ಬಯಕಿಗಾಗಿ ಆರು ಕೋಟಿ ಜನರ ಭವಿಷ್ಯವನ್ನು ನಾಶಮಾಡಲು ನಾನು ಮೂರ್ಖನಾಗಿಲ್ಲ.[೩](ಉದ್ಯೋಗಿಗಳ ಹೋರಾಟ ಸಂದರ್ಭದಲ್ಲಿ ಎನ್ ಟಿ ಯಾರೆ ಆವೇಶದಿಂದ ಹೇಳಿದ ಮಾತುಗಳು)
ಸಮಾಜವೇ ದೇವಸ್ಥಾನ, ಜನರು ದೇವರುಗಳು.
