ಧನುಷ್
ಗೋಚರ
ವೆಂಕಟೇಶ್ ಪ್ರಭು ಕಸ್ತೂರಿ ರಾಜ್(ಜನನ ೨೮ ಜನವರಿ ೧೯೮೩) - ಇವರು ತಮಿಳುನಾಡಿನ ಚೆನೈ ನಲ್ಲಿ ಜನಿಸಿದರು[೧]. ಧನುಷ್ ರವರು ಭಾರತೀಯ ಪ್ರಸಿದ್ಧ ಚಿತ್ರ ನಟ, ನಿರ್ಮಾಪಕ, ಮತ್ತು ಹಿನ್ನೆಲೆ ಗಾಯಕರು, ತಮಿಳು ಚಿತ್ರರಂಗದಲ್ಲಿ ಪ್ರಸಿದ್ಧ ನಟರಾಗಿದಾರೆ. ಇವರು ಇಗ ಧನುಷ್ ಎಂಬ ಹೆಸರಿನಿಂದ ಪ್ರಖ್ಯಾತಿ ಗಳಿಸಿದ್ದಾರೆ.ಇವರ ಪ್ರಪ್ರತಮ ಚಿತ್ರ ತುಳುವಾಧೋ ಇಲಾಮಯ 2002 ರಲ್ಲಿ ತೆರೆಕಂಡಿತು. ಈ ಚಿತ್ರವನ್ನು ನಿರ್ದೇಶಿಸಿದವರು ಇವರ ತಂದೆ ಕಸ್ತೂರಿರಾಜ್ ಈ ಚಿತ್ರ ಧನುಷ್ ರವರಿಗೆ ಹೆಸರು ತಂದಿತು.ನಂತರ ಹತ್ತು ವರ್ಷಗಳಲ್ಲಿ ಧನುಷ್ ರವರು ಇಪತೈದು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಅದುಕುಲಂ ಎಂಬ ಚಿತ್ರದಲ್ಲಿ ಉತ್ತಮ ನಾಯಕ ನಟ ಪ್ರಶಸ್ತಿಯನ್ನು,58ನೇ ನ್ಯಾಷನಲ್ ಫಿಲಂ ಅವಾರ್ಡಸ್ ನಲ್ಲಿ ಲಭಿಸಿದೆ. ಹಾಗು ಇವರ " ವೈ ದಿಸ್ ಕೊಲವರಿ ಡಿ" ಎಂಬ ಹಾಡಿಗೆ ಅಂತಾರಾಷ್ಟ್ರೀಯ ಜನಪ್ರಿಯತೆ ದೊರಕಿದೆ.