ದೀಪಕ್ ಚೋಪ್ರಾ
ಗೋಚರ
ದೀಪಕ್ ಚೋಪ್ರಾ ಒಬ್ಬ ಭಾರತೀಯ-ಅಮೆರಿಕನ್ ಲೇಖಕ, ವಾಗ್ಮಿ, ಮತ್ತು ಪರ್ಯಾಯ ವೈದ್ಯಕೀಯ ಸಲಹೆಗಾರ. ಅವರು ಏಕೀಕೃತ ಔಷಧ ಮತ್ತು ವೈಯಕ್ತಿಕ ರೂಪಾಂತರದ ಪ್ರವರ್ತಕರಾಗಿದ್ದಾರೆ. ಅವರು 90 ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ ಮತ್ತು ಟೈಮ್ ಮ್ಯಾಗಜೀನ್‌ನಿಂದ 100 ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರೆಂದು ಹೆಸರಿಸಲ್ಪಟ್ಟಿದ್ದಾರೆ.
ಯುಕ್ತಿಗಳು
[ಸಂಪಾದಿಸಿ]- ನೀವು ಬೇರೆಯವರನ್ನು ದೂಷಿಸುತ್ತಾ, ಟೀಕಿಸುತ್ತಾ ಇರುವಾಗ, ನಿಮ್ಮ ಬಗೆಗಿನ ಕೆಲವು ಸತ್ಯ ಸಂಗತಿಗಳನ್ನು ಮರೆಮಾಚುತ್ತ ಇರುತ್ತೀರಿ.
-೨೩ ಅಕ್ಟೋಬರ್ ೨೦೨೪(UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನೀವು ಪ್ರೀತಿ ಮತ್ತು ಸಂತೋಷದಿಂದ ಇರಲು ಬಯಸುವಿರಾದರೆ, ಇತರರು ಹಾಗೆ ಇರುವಂತೆ ಮಾಡಲು ನೀವೇನು ಮಾಡಬಹುದೋ ಅದೆಲ್ಲವನ್ನೂ ಮಾಡಿ .
-೧೪ ಜೂನ್ ೨೦೨೩(UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ನಿಮ್ಮ ಬಗ್ಗೆ ನೀವು ಮೊದಲು ಕಾಳಜಿ ವಹಿಸಿ.ಆ ಬಳಿಕ ಕುಟುಂಬದ ಇತರರ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿ ವಹಿಸಲು ನೀವು ಸಮರ್ಥರಾಗಿರುತ್ತೀರಿ.
-೨೬ ಡಿಸೆಂಬರ್ ೨೦೨೪(UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.