ವಿಷಯಕ್ಕೆ ಹೋಗು

ಡಾ. ರಾಜ್‌ಕುಮಾರ್

ವಿಕಿಕೋಟ್ದಿಂದ

ಡಾ. ರಾಜ್‌ಕುಮಾರ್, ಅಂದರೆ 'ವರನಟ' ಎಂದು ಕರೆಯಲ್ಪಡುವ ಅವರು, ಕನ್ನಡ ಚಿತ್ರರಂಗದ ನಂಬಲಸದ ಮಹಾಪ್ರಭೆ. 1954ರಲ್ಲಿ 'ಬೇಡರ ಕಣ್ಣಪ್ಪ' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಅವರು, 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಮಿಂಚಿದಿದ್ದಾರೆ. ಕನ್ನಡ ಸಾಹಿತ್ಯ ಆಧಾರಿತ ಚಿತ್ರಗಳಿಗೆ ಒತ್ತು ನೀಡಿ, ಕಾದಂಬರಿ ಆಧಾರಿತ ಅನೇಕ ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಕಾಮಿಡಿ, ಕೌಟುಂಬಿಕ, ನೆಗೆಟಿವ್ ಎಲ್ಲ ರೀತಿಯ ಪಾತ್ರಗಳಲ್ಲಿ ನಟಿಸಿ ಅನನ್ಯತೆ ತೋರಿದವರು. ಅವರು ನಟನಷ್ಟೆ ಅಲ್ಲ, ಕನ್ನಡದ ಭಾವಗೀತೆಗಳಿಗೆ ಜೀವ ನೀಡಿದ ಗಾಯಕರೂ ಹೌದು. 'ಸಂಪತ್ತಿಗೆ ಸವಾಲ್' ಚಿತ್ರದ ನಂತರ ಗಾಯಕನಾಗಿ ಇನ್ನಿಂಗ್ಸ್ ಆರಂಭಿಸಿ, ರಾಷ್ಟ್ರ ಪ್ರಶಸ್ತಿ ಪಡೆದ ಭಾರತದ ಮೊದಲ ನಟ ಎನಿಸಿಕೊಂಡರು. ತಮ್ಮ ಸರಳತೆಯೊಂದಿಗೆ, ಹಿರಿಯ-ಕಿರಿಯ ಎಲ್ಲರಿಗೂ ಮಾದರಿಯಾದ ಅಣ್ಣಾವ್ರು, ಕನ್ನಡಿಗರ ಮನದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾರ. ಚಿತ್ರರಂಗದ ಬೆಳವಣಿಗೆಗಾಗಿ ಪತ್ನಿ ಪಾರ್ವತಮ್ಮ ರಾಜ್‌ಕುಮಾರ್ ಅವರ ಸಹಕಾರದೊಂದಿಗೆ, ನಿರಂತರ ಪ್ರಯತ್ನಮಾಡಿದ ಅವರು, ಕನ್ನಡ ಚಿತ್ರರಂಗದ ಸುವರ್ಣ ಯುಗದ ನೈಜ ಶಿಲ್ಪಿಯಾಗಿದ್ದಾರೆ.[]

ನುಡಿಗಳು

[ಸಂಪಾದಿಸಿ]

ನನ್ನಿಂದ ಜನರಿಗೆ ಆಗಲಿ, ಜಗತ್ತಿಗೆ ಆಗಲಿ ಯಾವುದೂ ಪ್ರಯೋಜನವಾಗಿಲ್ಲ. ಎಲ್ಲರಿಂದ ನನಗೆ ಮಾರ್ಗ ದೊರೆತಿದೆ.

ಇತರರಿಗೆ ಮಾರ್ಗದರ್ಶನ ಮಾಡುವುದು ಸುಲಭ. ಆದರೆ ನಾವೇ ಹೊಸ ಮಾರ್ಗ ಹುಡುಕುವುದು ಕಷ್ಟ.

ದೇವರನ್ನು ನಾವು ದೇವಸ್ಥಾನದಲ್ಲಿ ಹುಡುಕುವ ಮೊದಲು ನಮ್ಮಲ್ಲಿಯೇ ಕಾಣಬೇಕು.

ಯೋಚಿಸಿ ನೋಡಿ, ನಮ್ಮ ಬದುಕಿನ ಸಾರ್ಥಕತೆ ಬೇರೆಲ್ಲೋ ಇದೆ. ಖಂಡಿತವಾಗಿ ಬಿರುದು ಪ್ರಶಸ್ತಿಗಳಲ್ಲಲ್ಲ.

ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡ ಕಲಿತು ಕನ್ನಡಿಗರಾಗಿ ಬಾಳಬೇಕು.

ಅನುಮಾನವೇ ಇಲ್ಲ. ಒಂದು ವೇಳೆ ನಾನು ನಟ ಆಗದಿದ್ದರೇ ನನ್ನೂರಿನ ಹೊಲ ಊಳುತ್ತಾ ರೈತನಾಗಿರುತ್ತಿದ್ದೆ.

ನಾನು ಪ್ರತಿದಿನವೂ ಏನನ್ನಾದರೂ ಮರೆತಿರಬಹುದು.. ಆದರೆ ನನ್ನ ಅಪ್ಪಾಜಿಯ ನೆನೆಯದಿದೇ ಇರುವ ದಿನವಿಲ್ಲ.

ಯಾವುದೇ ಸಾಧನೆ ನನ್ನಿಂದ ಆಗಿದೆ ಎಂದು ಹೇಳಿದರೆ ನಾನೆಂದೂ ಅದನ್ನು ನಾನು ಮಾಡಿದ್ದು ಅನ್ನುವುದಿಲ್ಲ.

ಒಳ್ಳೆತನ ಅನ್ನೋದನ್ನು ಮನುಷ್ಯ ಬುದ್ಧಿ ತಿಳಿದಾಗಿನಿಂದ ಸಾಯೋವರೆಗೂ ಕಲೀತಾನೇ ಇರಬೇಕು.

ಮಾನವೀಯತೆಯ ಪ್ರಯೋಗಶಾಲೆಯಲ್ಲಿ ಯಾರು ತೇರ್ಗಡೆಯಾಗುವರೋ ಅವರೇ ನಿಜವಾದು ಮನುಷ್ಯರು. []

ಉಲ್ಲೇಖಗಳು

[ಸಂಪಾದಿಸಿ]