ವಿಷಯಕ್ಕೆ ಹೋಗು

ಡಾ. ಬಿ.ಆರ್.ಅಂಬೇಡ್ಕರ್

ವಿಕಿಕೋಟ್ದಿಂದ

ಡಾ. ಬಿ.ಆರ್. ಅಂಬೇಡ್ಕರ್

ಡಾ. ಭೀಮರಾವ್ ರಾಮ್‌ಜಿ ಅಂಬೇಡ್ಕರ್ (1891–1956) ಅವರನ್ನು ನಾವು ‘ಭಾರತ ಸಂವಿಧಾನದ ಶಿಲ್ಪಿ’ ಎಂದು ಗೌರವದಿಂದ ಕರೆದುಕೊಳ್ಳುತ್ತೇವೆ. ಏಪ್ರಿಲ್ 14, 1891ರಂದು ಮಹೂದಲ್ಲಿ ಜನಿಸಿದ ಬಾಬಾ ಸಾಹೇಬ್‌ ಅಂಬೇಡ್ಕರ್, ತಮ್ಮ ಜೀವನವನ್ನೆಲ್ಲಾ ಭಾರತದಲ್ಲಿನ ಅಸಮಾನತೆ, ಅಸ್ಪೃಶ್ಯತೆ ಮತ್ತು ಸಾಮಾಜಿಕ ಅನ್ಯಾಯಗಳ ವಿರುದ್ಧ ಹೋರಾಟಕ್ಕೆ ಮೀಸಲಿಟ್ಟಿದ್ದರು. ಅವರು ಸುಬೇದಾರ್ ರಾಮ್‌ಜಿ ಮಾಲೋಜಿ ಸಕ್ಪಾಲ್ ಅವರ ಪುತ್ರರಾಗಿದ್ದು, ಶಿಸ್ತಿನ ಸೈನಿಕ ಮತ್ತು ಸಂನ್ಯಾಸ ಚಿಂತನಶೀಲತೆಯ ಪುರುಷನ ಮಗನಾಗಿ ಪ್ರಜ್ಞಾವಂತ ವ್ಯಕ್ತಿಯಾಗಿ ಬೆಳೆದರು.

ಅಂಬೇಡ್ಕರ್ ಅವರು ತಮ್ಮ ಬಾಲ್ಯದಿಂದಲೂ ಅಸ್ಪೃಶ್ಯತೆಯ ನೋವನ್ನು ಅನುಭವಿಸಿದರು. ಈ ದುಃಖದ ಅನುಭವವೇ ಅವರೊಳಗೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಬೇಕೆಂಬ ಸಂಕಲ್ಪದ ಬೀಜ ಬಿತ್ತಿತು. ಎಲ್ಫಿನ್‌ಸ್ಟನ್ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿ, ಬರೋಡಾ ಸಂಸ್ಥಾನದ ವಿದ್ಯಾರ್ಥಿವೇತನದ ಸಹಾಯದಿಂದ ಅವರು ಉನ್ನತ ವಿದ್ಯಾಭ್ಯಾಸಕ್ಕಾಗಿ ಕೊಲಂಬಿಯಾ ವಿಶ್ವವಿದ್ಯಾಲಯ ಮತ್ತು ನಂತರ ಲಂಡನ್‌ಗೆ ತೆರಳಿದರು. ಅಲ್ಲಿ ಎಂ.ಎ., ಪಿಎಚ್.ಡಿ., ಡಿ.ಎಸ್.ಸಿ ಮತ್ತು ಬಾರ್-ಅಟ್-ಲಾ ಪದವಿಗಳನ್ನು ಪಡೆದ ಅವರು ಅಪಾರ ಜ್ಞಾನಸಂಪತ್ತಿಗೆ ಧನ್ಯರಾದರು.

ಅವರು ಅಸ್ಪೃಶ್ಯರ ಹಕ್ಕುಗಳಿಗಾಗಿ "ಬಹಿಷ್ಕೃತ ಭಾರತ" ಪತ್ರಿಕೆಯನ್ನು ಪ್ರಾರಂಭಿಸಿದರು ಹಾಗೂ ಅನೇಕ ಸಂಘಟನೆಗಳನ್ನು ಸ್ಥಾಪಿಸಿ ದಲಿತ ಸಮುದಾಯದ ಶಕ್ತೀಕರಣಕ್ಕೆ ಪಣ ತೊಟ್ಟರು. ಅಸ್ಪೃಶ್ಯತೆಯ ವಿರುದ್ಧ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ ಅವರು, “ನಾನು ಹಿಂದುವಾಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯುವುದಿಲ್ಲ” ಎಂದು ಘೋಷಿಸಿ 1956ರಲ್ಲಿ ಬೌದ್ಧ ಧರ್ಮವನ್ನು ಅಂಗೀಕರಿಸಿದರು.

ಅಂಬೇಡ್ಕರ್ ಅವರು ಕಾನೂನು ಮತ್ತು ನ್ಯಾಯ ಸಚಿವರಾಗಿಯೂ ಕಾರ್ಯನಿರ್ವಹಿಸಿದರು. ಭಾರತದ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಅವರು ನೀಡಿದ ಕೊಡುಗೆ ಅಮೋಘ. ಅವರು ಸಮಾನತೆ, ಸ್ವಾತಂತ್ರ್ಯ ಮತ್ತು ಬಾಂಧವ್ಯ ಎಂಬ ತಾತ್ವಿಕ ಮೌಲ್ಯಗಳ ಆಧಾರದಲ್ಲಿ ಭಾರತದ ಪ್ರಥಮ ಸಂವಿಧಾನವನ್ನು ರೂಪಿಸಿದರು.

ಅವರ ತೀವ್ರ ಚಿಂತನೆ, ಶ್ರಮ ಮತ್ತು ತ್ಯಾಗದ ಫಲವಾಗಿ ಅವರು ಜಗತ್ತಿನಲ್ಲಿ ಬೌದ್ಧ ಧರ್ಮವನ್ನು ಪ್ರಚಾರಪಡುವ ಮಹಾನ್ ನಾಯಕನಾಗಿದರು. "ಬೋಧಿಸತ್ವ" ಎಂಬ ಬಿರುದನ್ನು ಅವರು ಬದುಕಿರುವಾಗಲೇ ಪಡೆದ ಅಪರೂಪದ ಗೌರವ ಅವರ ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.

ಡಾ. ಅಂಬೇಡ್ಕರ್ ಅವರ ಜೀವಿತ ಯಾನವು ಜ್ಞಾನ, ಶ್ರದ್ಧೆ, ಹೋರಾಟ ಮತ್ತು ಸಮಾಜಮುಖಿ ಸೇವೆಯ ಸಂಕೇತವಾಗಿದೆ. ಅವರು ನೀಡಿದ ಕೊಡುಗೆಗಳು ಅಜರಾಮರವಾಗಿದ್ದು, ಭಾರತದ ಸಾಂವಿಧಾನಿಕ ಮತ್ತು ಮಾನವೀಯ ಇತಿಹಾಸದಲ್ಲಿ ಚಿರಸ್ಥಾಯಿಯಾಗಿವೆ.[]


ನುಡಿಗಳು

[ಸಂಪಾದಿಸಿ]

” ಶಿಸ್ತೇ ಶಿಕ್ಷಣದ ತಳಹದಿ ”[]

"ಒಂದು ಸಮುದಾಯದ ಪ್ರಗತಿಯನ್ನು, ಅಲ್ಲಿ ಮಹಿಳೆಯರು ಸಾಧಿಸಿರುವ ಪ್ರಗತಿಯ ಮಟ್ಟದ ಆಧಾರದಲ್ಲಿ ನಾನು ಅಳೆಯುವೆ, ."

"ಶಿಕ್ಷಣ ಹೊಂದಿರಿ, ಸಂಘಟಿತರಾಗಿ, ಅಸಮಾಧಾನ ವ್ಯಕ್ತಪಡಿಸಿ."

"ಜೀವನವು ದೀರ್ಘವಾಗಿರಬೇಕೆಂಬುದಕ್ಕಿಂತ ಮಹಾನ್ ಆಗಿರಬೇಕು."

"ಮಾನವ ಜೀವನದ ಅಂತಿಮ ಗುರಿಯೆಂದರೆ ಬುದ್ಧಿಯ ಬೆಳೆಸುವುದು."

"ಸಮಾನತೆ ಒಂದು ಕಲ್ಪನೆಯಾಗಿರಬಹುದು, ಆದರೂ ಅದು ಆಡಳಿತ ತತ್ವವಾಗಿ ಅಂಗೀಕರಿಸಬೇಕಾದದು."[]

ಉಲ‍್ಲೇಖಗಳು

[ಸಂಪಾದಿಸಿ]