ಡಾ.ಸಿದ್ಧಲಿಂಗಯ್ಯ
ಗೋಚರ
ಸಿದ್ದಲಿಂಗಯ್ಯನವರು (೩ ಫೆಬ್ರವರಿ ೧೯೫೪ - ೧೧ ಜೂನ್ ೨೦೨೧) ಕನ್ನಡದ ಲೇಖಕ|ಲೇಖಕರಲ್ಲೊಬ್ಬರು. 'ಬಂಡಾಯ ಸಾಹಿತಿ', 'ದಲಿತ ಕವಿ' ಎಂದೇ ಪ್ರಸಿದ್ಧರಾದ ಸಿದ್ಧಲಿಂಗಯ್ಯನವರು ದಲಿತ ಹೋರಾಟ ಮತ್ತು ಸಾಮಾಜಿಕ ಸಮಾನತೆಗಾಗಿ ಕಾವ್ಯ ಸಾಹಿತ್ಯಗಳನ್ನು ರಚಿಸಿದವರು. ಕಾವ್ಯ, ನಾಟಕ, ಪ್ರಬಂಧ, ವಿಮರ್ಶೆ, ಸಂಶೋಧನೆ, ಆತ್ಮಕಥೆ|ಆತ್ಮಕಥನ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚನೆ ಮಾಡಿದವರು. ಎರಡು ಬಾರಿ ಕರ್ನಾಟಕ ವಿಧಾನ ಪರಿಷತ್ತು|ವಿಧಾನಪರಿಷತ್ತಿನ ಸದಸ್ಯರಾಗಿದ್ದರು. ಸಿದ್ಧಲಿಂಗಯ್ಯನವರು ರಾಮನಗರ ಜಿಲ್ಲೆ(ಆಗಿನ ಬೆಂಗಳೂರು ಗ್ರಾಮಾಂತರ ಜಿಲ್ಲೆ)ಯ ಮಾಗಡಿ ತಾಲ್ಲೂಕಿನ ಮಂಚನಬೆಲೆ ಗ್ರಾಮದಲ್ಲಿ ೧೯೫೪ರಲ್ಲಿ ಜನಿಸಿದರು. ತಂದೆ ದೇವಯ್ಯ, ತಾಯಿ ಶ್ರೀಮತಿ ವೆಂಕಮ್ಮ.
ಪಿಎಚ್.ಡಿ. ಸಂಶೋಧನಾ ಪ್ರಬಂಧ
[ಸಂಪಾದಿಸಿ]- ಗ್ರಾಮ ದೇವತೆಗಳು, ೧೯೯೭[೧]
ಕವನ ಸಂಕಲನಗಳು
[ಸಂಪಾದಿಸಿ]- ಹೊಲೆ ಮಾದಿಗರ ಹಾಡು, ೧೯೭೫
- ಮೆರವಣಿಗೆ, ೨೦೦೦[೨]
- ಸಾವಿರಾರು ನದಿಗಳು, ೧೯೭೯
- ಕಪ್ಪು ಕಾಡಿನ ಹಾಡು, ೧೯೮೩
- ಆಯ್ದಕವಿತೆಗಳು, ೧೯೯೭
- ಅಲ್ಲೆಕುಂತವರೆ
- ನನ್ನ ಜನಗಳು ಮತ್ತು ಇತರ ಕವಿತೆಗಳು, ೨೦೦೫
ಮುಂತಾದ ಅನೇಕವುಗಳನ್ನು ರಚಿಸಿದ್ದಾರೆ
ವಿಮರ್ಶನಾ ಕೃತಿಗಳು
[ಸಂಪಾದಿಸಿ]- ಹಕ್ಕಿ ನೋಟ, ೧೯೯೧
- ರಸಗಳಿಗೆಗಳು
- ಎಡಬಲ
- ಉರಿಕಂಡಾಯ, ೨೦೦೯
ಲೇಖನಗಳ ಸಂಕಲನ
[ಸಂಪಾದಿಸಿ]- ಅವತಾರಗಳು, ೧೯೯೧
- ಜನಸಂಸ್ಕೃತಿ, ೨೦೦೭
ಭಾಷಣಗಳ ಸಂಕಲನ
[ಸಂಪಾದಿಸಿ]- ಸದನದಲ್ಲಿ ಸಿದ್ದಲಿಂಗಯ್ಯ ಭಾಗ -೧, ೧೯೯೬
- ಸದನದಲ್ಲಿ ಸಿದ್ದಲಿಂಗಯ್ಯ ಭಾಗ -೨, ೨೦೦೪
ನಾಟಕಗಳು
[ಸಂಪಾದಿಸಿ]- ಏಕಲವ್ಯ, ೧೯೮೬
- ನೆಲಸಮ, ೧೯೮೦
- ಪಂಚಮ, ೧೯೮೦