ಡಾ.ನಾ.ಡಿಸೋಜ
ಗೋಚರ
ನಾ. ಡಿಸೋಜ (೬ನೇ ಜೂನ್ ೧೯೩೭ - ೫ನೇ ಜನವರಿ ೨೦೨೫) ಪರಿಸರ ಕಾಳಜಿಯುಳ್ಳ ಮಹತ್ವದ ಕಥೆಗಾರರೆನಿಸಿದ್ದು ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ.ತಮ್ಮೆಲ್ಲ ಕಥೆ, ಕಾದಂಬರಿಗಳ ಮೂಲಕ ಪರಿಸರ ಸಂರಕ್ಷಣೆಯ ಬಗ್ಗೆ ಎಚ್ಚರಿಸುತ್ತ ಬಂದಿದ್ದು, ಪರಿಸರ ನಾಶವೇ ಮಾನವ ಜನಾಂಗದ ವಿನಾಶದ ಮೂಲ, ಪರಿಸರವನ್ನುಳಿಸಿಕೊಂಡು ಬಾಳಿದರೆ ಮಾನವನ ಬಾಳೂ ಸಂತುಷ್ಟ ಎಂಬುದನ್ನು ಮತ್ತೆ ಮತ್ತೆ ಪ್ರಸ್ತಾಪಿಸುತ್ತಾರೆ, ಸುಮಾರು ಐದು ದಶಕಗಳಿಂದಲೂ ಕನ್ನಡ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಕೃತಿ ರಚಿಸುತ್ತ ಬಂದಿರುವ ನಾರ್ಬರ್ಟ್ ಡಿಸೋಜ.
ಕೃತಿಗಳು
[ಸಂಪಾದಿಸಿ]- ಅಜ್ಞಾತ
- ಇಂಜಿನಿಯರ್ ಆತ್ಮಕಥೆಯ ಮೊದಲ ಪುಟಗಳು
- ಆಸರೆ
- ಇಗರ್ಜಿಯ ಸುತ್ತಲಿನ ಮನೆಗಳು
- ಈ ನೆಲ ಈ ಜಲ
- ಒಂದು ಜಲಪಾತದ ಸುತ್ತ
- ಒಡ್ಡು
- ಕಾಡಿನ ಬೆಂಕಿ
- ಕುಂಜಾಲು ಕಣಿವೆಯ ಕೆಂಪು ಹೂ
- ಕೆಂಪು ತ್ರಿಕೋನ
- ಕ್ರಯ ವಿಕ್ರಯ
- ಗಾಂಧಿ ಬಂದರು
- ಜೀವಕಳೆ
- ಜೀವಕಳೆಯ ಮಹಾಸತಿ
- ದ್ವೀಪ [೧]
- ದುರ್ಗವೆಂಬ ವ್ಯೂಹ
- ನೀಲಮ್ಮ ವ್ಯಾಧಿ ಪುರಾಣ
- ನಡುವೆ ನಿಂತ ಜನ
- ನೆಲೆ
- ಪ್ರಜ್ಞಾಬಲಿ
- ಪ್ರೀತಿಯೆಂಬ ಚುಂಬಕ
- ಮುಳುಗಡೆ
- ವಿಷಾನಿಲ
- ಬಂಜೆ ಬೆಂಕಿ
- ಮಂಜಿನ ಕಾನು
- ಮಾನವ
ಮಕ್ಕಳ ಸಾಹಿತ್ಯ
[ಸಂಪಾದಿಸಿ]- ಆನೆ ಬಂತೊಂದಾನೆ
- ದಂತ ಮತ್ತು ಗಾಂಧಿ
- ಗೋಪಿಯ ಗೊಂಬೆ
- ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು
- ಹಾರುವ ಹಕ್ಕಿಗೆ ಚಿಗುರೆಲೆ ತೋರಣ