ವಿಷಯಕ್ಕೆ ಹೋಗು

ಡಾ.ಜಿ.ಆರ್‌.ತಿಪ್ಪೇಸ್ವಾಮಿ

ವಿಕಿಕೋಟ್ದಿಂದ

ಜಿ. ಆರ್. ಟಿ. ಎಂದೇ ವಿದ್ಯಾರ್ಥಿವಲಯದಲ್ಲಿ ಗುರುತಿಸಲ್ಪಟ್ಟವರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದ ತಿಪ್ಪೇಸ್ವಾಮಿಯವರು ಹಲವಾರು ಕೃತಿಗಳ ಕರ್ತೃ. ಜಾನಪದ, ಸಂಶೋಧನೆ-ಸಂಪಾದನೆ, ವಿಮರ್ಶೆ ಅವರ ಕೃತಿಗಳ ಪ್ರಮುಖ ವಸ್ತುಗಳು. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಗುಜ್ಜನಾಡು ಗ್ರಾಮದವರಾದ ಪ್ರೊ.ಜಿ.ಆರ್.ತಿಪ್ಪೇಸ್ವಾಮಿ ಅವರು ಬಂಗಾರಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ೧೯೯೯ರಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ರೀಡರ್ ಆಗಿ ಸೇರಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದರು. ಕನ್ನಡ ಸಾಹಿತ್ಯವನ್ನು ಗಂಭೀರವಾಗಿ ಮತ್ತು ಆಳವಾಗಿ ಅಧ್ಯಯನ ಮಾಡಿರುವ ಹೊಸ ಸಂವೇದನೆಯ ವಿದ್ವಾಂಸರಾಗಿದ್ದ ತಿಪ್ಪೇಸ್ವಾಮಿ ಅವರು ವಿಮರ್ಶಕರಾಗಿ ಜಾನಪದ ಕ್ಷೇತ್ರದಲ್ಲಿಯೂ ಪ್ರಸಿದ್ಧಿ ಪಡೆದಿದ್ದರು.

ಕೃತಿಗಳು

[ಸಂಪಾದಿಸಿ]
  • ಪ್ರಸ್ತಾಪ
  • ಪ್ರಣೀತ
  • ಅಭಿಮುಖ

ಜಾನಪದ

[ಸಂಪಾದಿಸಿ]
  • ಬಂದೀರೆ ನನ್ನ ಜಡೆವೊಳಗೆ
  • ಕೋಲಾರಮ್ಮ
  • ದಾಸ ಸಾಹಿತ್ಯ ಮತ್ತು ಜಾನಪದ

ವ್ಯಕ್ತಿಚಿತ್ರಗಳು

[ಸಂಪಾದಿಸಿ]
  • ಕನ್ನಡ ನಾಡಿನ ಕಲಾವಿದರು
  • ಬಾಲಣ್ಣ-ಭಾಗವತರು
  • ಜೀವನ ಕಥೆ
  • ಪ್ರಶಸ್ತಿ ಪಡೆದ ಮಹನೀಯರು

ಸಾಹಿತ್ಯ ವಾಚಿಕೆ

[ಸಂಪಾದಿಸಿ]
  • ಜಿ.ವೆಂಕಟಯ್ಯ

ಸಂಪಾದನೆ

[ಸಂಪಾದಿಸಿ]
  • ಅಗ್ನಿಸಾಕ್ಷಿ
  • ಕಮಲಾ ಕೃತಿ ವಿಮರ್ಶೆ
  • ಕುಮಾರವ್ಯಾಸ (ವಿರಹಗಳ ಶೃಂಗಾರ)
  • ಮೂಡಲ ವೈಭವ (ಲೇಖನಗಳ ಸಂಕಲನ)
  • ಹೊಂಗಿರಣ
  • ಸಿರಿನಂದಿ (ಸ್ಮರಣ ಸಂಚಿಕೆ)

[]

ಉಲ್ಲೇಖಗಳು

[ಸಂಪಾದಿಸಿ]