ಡಾ.ಎಚ್.ಎಲ್.ಪುಷ್ಪ
ಗೋಚರ
ಕನ್ನಡದ ಕವಯತ್ರಿ, ನಾಟಕಕಾರ್ತಿ ಮತ್ತು ವಿಮರ್ಶಕಿ ಡಾ. ಎಚ್ ಎಲ್ ಪುಷ್ಪ ಅವರು ದೊಡ್ಡಬಳ್ಳಾಪುರದ ಹೊಸಹಳ್ಳಿ ಉಜ್ಜನಿಯಲ್ಲಿ ೧೮ ಸೆಪ್ಟಂಬರ್ ೧೯೬೨ರಂದು ಜನಿಸಿದರು. ಇವರ ತಾಯಿ ಕಮಲಮ್ಮ, ತಂದೆ ಲಕ್ಷ್ಮಣಗೌಡ. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಭಾಷಾ ವಿಷಯದಲ್ಲಿ ತೌಲನಾತ್ಮಕ ಅಧ್ಯಯನ ಕುರಿತು ಸ್ನಾತಕೋತ್ತರ ಪದವಿ ಪಡೆದಿದ್ದಾರೆ.'ಕನ್ನಡ ನಾಟಕಗಳಲ್ಲಿ ಮೈಮನಸ್ಸುಗಳ ಸಂಬಂಧ' ವಿಷಯವಾಗಿ ಪ್ರಬಂಧ ಮಂಡಿಸಿ, ಹಂಪಿ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕವನ ರಚನೆಯಲ್ಲಿ ಅತೀವ ಆಸಕ್ತಿ ಇರುವ ಇವರು ಅಮೃತಮತಿ ಸ್ವಗತ ಕೃತಿಯ ಮೂಲಕ ಕಾವ್ಯ ಕ್ಷೇತ್ರ ಪ್ರವೇಶಿಸಿದರು.
ಪ್ರಕಟಗೊಂಡ ಕೃತಿಗಳು
[ಸಂಪಾದಿಸಿ]= ಕವನ ಸಂಕಲನಗಳು
[ಸಂಪಾದಿಸಿ]- ಅಮೃತಮತಿಯ ಸ್ವಗತ - ೧೯೯೨[೧]
- ಗಾಜುಗೋಳ - ೨೦೦೦[೨]
- ಲೋಹದ ಕಣ್ಣು - ೨೦೦೯
- ಸೋಲಾಬರಸ್ ಹುಡಗರು ಹಾಗೂ ಎಕ್ಕದ ಬೀಜ - ೨೦೨೦
- ಮದರಂಗಿ ವೃತ್ತಾಂತ (ಸಮಗ್ರ ಕಾವ್ಯ)
ನಾಟಕಗಳು
[ಸಂಪಾದಿಸಿ]- ಭೂಮಿಯಲ್ಲ ಇವಳು - ೨೦೦೪
- ಸ್ಯಾಫೋ – ಒಂದು ನೀಲಾಗ್ನಿ (ಗ್ರೀಕ್ ಕವಯತ್ರಿ ಸ್ಯಾಫೋ ಬದುಕು, ಬರಹ ಕುರಿತಾದ ನಾಟಕ)
- ಗೆಲ್ಲಲಾರ್ಕುಮೆ ಮೃತ್ಯುರಾಜನಂ
- ಪರ್ವಾಪರ್ವ