ಜೇಡರ ದಾಸಿಮಯ್ಯ
ದಾಸಿಮಯ್ಯನವರು ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಬಿ ಗ್ರಾಮದಲ್ಲಿ ರಾಮಯ್ಯ -ಶಂಕರಿ ದಂಪತಿಯ ಪುತ್ರನಾಗಿ, ಚೈತ್ರ ಶುದ್ಧ ಪಂಚಮಿಯಂದು ನೇಕಾರ ಕುಟುಂಬದಲ್ಲಿ ಜನಿಸಿದರು.ಇವರನ್ನು ದೇವರ ದಾಸಿಮಯ್ಯ, ಜೇಡರ ದಾಸಿಮಯ್ಯ ಎಂದು ಎರಡು ರೀತಿಯಲ್ಲಿ ಆದ್ಯಪ್ರವರ್ತಕನೆಂದು ಗುರುತಿಸಲಾಗುತ್ತದೆ.[೧]
ನುಡಿಗಳು
[ಸಂಪಾದಿಸಿ]- “
ಮೊಲೆ ಮೂಡಿ ಬಂದರೆ ಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿಯುವಾತ್ಮನು
ಹೆಣ್ಣೂ ಅಲ್ಲ, ಗಂಡೂ ಅಲ್ಲ ರಾಮನಾಥ
” — ಜೇಡರ ದಾಸಿಮಯ್ಯ ವಚನಗಳು ಕಣಜ ಅಂತರ್ಜಾಲ ಪುಟ ಸಂಗ್ರಹ[೨]
- “
ಒಡಲುಗೊಂಡವ ಹಸಿವ
ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು ನೀನೊಮ್ಮೆ ಜರಿದು ನುಡಿಯದಿರು
ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ
” — ಜೇಡರ ದಾಸಿಮಯ್ಯ ವಚನಗಳು ಕಣಜ ಅಂತರ್ಜಾಲ ಪುಟ ಸಂಗ್ರಹ[೨]
- “
ಇಳೆ ನಿಮ್ಮ ದಾನ ಬೆಳೆ ನಿಮ್ಮ ದಾನ
ಸುಳಿದು ಬೀಸುವ ಗಾಳಿ ಅದು ನಿಮ್ಮ ದಾನ
ನಿಮ್ಮ ದಾನವನುಂಡು ಅನ್ಯರ ಹೊಗಳುವ
ಕುನ್ನಿಗಳನೇನೆಂಬೆ ರಾಮನಾಥ
” — ಜೇಡರ ದಾಸಿಮಯ್ಯ ವಚನಗಳು ಕಣಜ ಅಂತರ್ಜಾಲ ಪುಟ ಸಂಗ್ರಹ[೨]
- “
ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ
ಕಡೆಗೀಲು ಬಂಡಿಗಾಧಾರ
ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ
ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ! ರಾಮನಾಥ.
” — ಜೇಡರ ದಾಸಿಮಯ್ಯ ವಚನಗಳು ಕಣಜ ಅಂತರ್ಜಾಲ ಪುಟ ಸಂಗ್ರಹ[೨]
- “
ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ
ಸತಿಪತಿಗಳೊಂದಾಗದವನ ಭಕ್ತಿ
ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥ.
” — ಜೇಡರ ದಾಸಿಮಯ್ಯ ವಚನಗಳು ಕಣಜ ಅಂತರ್ಜಾಲ ಪುಟ ಸಂಗ್ರಹ[೨]
- “
ಬಂದುದನರಿದು ಬಳಸುವಳು
ಬಂದುದ ಪರಿಣಾಮಿಸುವಳು
ಬಂಧು ಬಳಗವ ಮರೆಸುವಳು
ದುಗ್ಗಳೆಯ ತಂದು ಬದುಕಿದೆನು ಕಾಣಾ ರಾಮನಾಥ
” — ಜೇಡರ ದಾಸಿಮಯ್ಯ ವಚನಗಳು ಕಣಜ ಅಂತರ್ಜಾಲ ಪುಟ ಸಂಗ್ರಹ[೨]
- ↑ . ದೇವರ/ಜೇಡರ ದಾಸಿಮಯ್ಯ (ಜುಲೈ 26, 2023). Retrieved on ಜುಲೈ 1, 2025.
- ↑ ೨.೦ ೨.೧ ೨.೨ ೨.೩ ೨.೪ ೨.೫ https://kanaja.karnataka.gov.in/ಜೇಡರ-ದಾಸಿಮಯ್ಯ-ವಚನಗಳು/