ಚಂದ್ರಶೇಖರ ಕಂಬಾರ
ಗೋಚರ
ಚಂದ್ರಶೇಖರ ಕಂಬಾರ(ಜನನ: ೨ ಜನವರಿ ೧೯೩೭, ಘೋಡಗೆರಿ, ಬೆಳಗಾವಿ) ಅವರು ಬೆಂಗಳೂರು ವಿಶ್ವವಿದ್ಯಾಲಯದ ಅಧ್ಯಾಪಕರಾಗಿ ಕೆಳಸ ಮಾಡುತ್ತಿದರು. ಅವರು ಕನ್ನಡದ ಪ್ರಸಿದ್ಧ ಕವಿ, ನಾಟಕಕಾರ, ಕಥಾನಾಯಕ, ಚಲನಚಿತ್ರ ನಿರ್ದೇಶಕ ಹಾಗೂ ಭಾಷಾಶಾಸ್ತ್ರಜ್ಞ. ಜಾನಪದ ಪರಂಪರೆಯ ವೈಭವವನ್ನು ಸಾಹಿತ್ಯದಲ್ಲಿ ಶ್ರೀಮಂತಗೊಳಿಸಿ, ಹೊಸ ಶೈಲಿಯ ನಾಟಕಶಾಲೆಯನ್ನೇ ಸ್ಥಾಪಿಸಿರುವವರು. ಇವರ ಪ್ರಮುಖ ಸಾಹಿತ್ಯ ಕೃತಿಗಳು ಜೋಕುಮಾರಸ್ವಾಮಿ, ನಾಯಿ ಕಥೆ(ನಾಟಕಗಳು). ಹೇಳತೆನೆ ಕೇಳಾ, ಮುಗುಳು(ಕಾವ್ಯಗಳು) ಹಾಗು ಅಣ್ಣ ತಂಗಿ, ಶಿಖರ ಸೂರ್ಯ(ಕಾದಂಬರಿಗಳು) ಇವು ಇವರ ಕೆಳವು ಪ್ರಮುಖ ಸಾಹಿತ್ಯ ಕೃತಿಗಳು. ಕಂಬಾರರು ತಮ್ಮ ನಾಟಕಗಳ ಆಧಾರಿತ ಚಿತ್ರಗಳನ್ನು ನಿರ್ದೇಶಿಸಿದ್ದಾರೆ ಕಾಡುಕುದುರೆ (೧೯೭೯), ಹರಕೆಯ ಕುರಿ (೧೯೮೩) ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರಿಗೆ ಜ್ಞಾನಪೀಠ ಪ್ರಶಸ್ತಿ – ೨೦೧೧ (ಸಿಂಗಾರವ್ವ ಕಾದಂಬರಿಗಾಗಿ),ಪದ್ಮಶ್ರೀ – ೨೦೦೧ ಹಾಗು ಪದ್ಮಭೂಷಣ – ೨೦೨೧ ರಲ್ಲಿ ದೊರೆಕಿದೆ.
ನುಡಿಗಳು
[ಸಂಪಾದಿಸಿ]ಭಾಹ್ಯ ಕೊಂಡಿಗಳು
[ಸಂಪಾದಿಸಿ]ವಿಕಿಪೀಡಿಯದಲ್ಲಿ ಇದರ ಬಗ್ಗೆ ಒಂದು ಲೇಖನವಿದೆ:
