ವಿಷಯಕ್ಕೆ ಹೋಗು

ಕೇಶಿರಾಜ

ವಿಕಿಕೋಟ್ದಿಂದ

ಕೇಶಿರಾಜ - ಇವರ ಕಾಲ ಸುಮಾರು ಕ್ರಿ.ಶ.೧೨೬ಂ. ಇವರು "ಶಬ್ದಮಣಿದರ್ಪಣಂ" ಎಂಬ ಪ್ರಸಿದ್ಧವಾದ ಹಳಗನ್ನಡ ವ್ಯಾಕರಣ ಗ್ರಂಥವನ್ನು ಬರೆದ ಶಾಸ್ತ್ರಕಾರು. ಆ ಗ್ರಂಥದ ಕೊನೆಯ ಒಂದು ಪದ್ಯದಿಂದ ಈ ಶಾಸ್ತ್ರಕಾರ ಚೋಲಪಾಲಕ ಚರಿತಂ. ಶ್ರೀ ಚಿತ್ರಮಾಲೆ, ಸುಭದ್ರಾಪಹರಣಂ, ಪ್ರಬೋಧಚಂದ್ರಂ, ಕಿರಾತಂ ಎಂಬ ಬೇರೆ ಐದು ಗ್ರಂಥಗಳನ್ನೂ ಬರೆದಿರುವಂತೆ ತಿಳಿದು ಬಂದಿದೆ. ಆದರೆ ಶಬ್ದಮಣಿದರ್ಪಣದ ಹೊರತು ಈತನ ಬೇರೆ ಯಾವ ಗ್ರಂಥವೂ ಈ ವರೆಗೆ ನಮಗೆ ದೊರೆತಿಲ್ಲ. ಕನ್ನಡದಲ್ಲಿಯೇ ರಚನೆಗೊಂಡಿರುವ ಸ್ವತಂತ್ರ ಕನ್ನಡ ವ್ಯಾಕರಣ (ಉಪಲಬ್ಧ) ಗ್ರಂಥಗಳಲ್ಲಿ ಶಬ್ದಮಣಿದರ್ಪಣವು ಮೊಟ್ಟ ಮೊದಲನೆಯದು. ಕೇಶಿರಾಜ ೨ನೇ ನಾಗವರ್ಮನ ಕೃತಿಗಳಾದ "ಕಾವ್ಯಾವಲೋಕನ"(ಶಬ್ದ ಸ್ಮೃತಿ) ಗ್ರಂಥಗಳ ಸೂತ್ರ, ವೃತ್ತಿ, ಹಾಗೂ ಪ್ರಯೋಗಗಳನ್ನು ಆಧರಿಸಿದ್ದಾನೆಂದು ವ್ಯಾಕರಣರು ಅಭಿಪ್ರಾಯಪಟ್ಟಿದ್ದಾರೆ.

ನುಡಿಗಳು

[ಸಂಪಾದಿಸಿ]
"https://kn.wikiquote.org/w/index.php?title=ಕೇಶಿರಾಜ&oldid=10446" ಇಂದ ಪಡೆಯಲ್ಪಟ್ಟಿದೆ