ವಿಷಯಕ್ಕೆ ಹೋಗು

ಕೆ ಆರ್ ನಾರಾಯಣನ್

ವಿಕಿಕೋಟ್ದಿಂದ

ಕೆ ಆರ್ ನಾರಾಯಣನ್ಇವರ ಪೂರ್ಣ ಹೆಸರು ಕೊಚೇರಿಲ್ ರಾಮನ್ ನಾರಾಯಣನ್ ಇವರು ಜುಲೈ ೨೫, ೧೯೯೭ - ಜುಲೈ ೨೪, ೨೦೦೨ರ ವರಗೆ ಭಾರತದ ರಾಷ್ಟ್ರಪತಿಯಾಗಿದ್ದರು. ತಿರುವಾಂಕೂರು ರಾಜ್ಯದ ಪೆರುಂಥನಂ ಹಳ್ಳಿಯಲ್ಲಿ ೨೭ ಅಕ್ಟೋಬರ್ ೧೯೨೦ರಂದು ಜನಿಸಿದ ನಾರಾಯಣನ್ ವೈದ್ಯರಾದ ರಾಮನ್ ವೈದ್ಯರ್ ಮತ್ತು ಪಾಪಿಯಮ್ಮ ದಂಪತಿಗಳಿಗೆ೪ನೆಯ ಕೂಸು. ೪ ಫ಼ೆಬ್ರವರಿ ೧೯೨೧ರಂದು ಜನಿಸಿದ್ದರೂ, ಶಾಲಾ ದಾಖಲೆಗಳಲ್ಲಿ ೨೭ ಅಕ್ಟೋಬರ್ ೧೯೨೦ ಎಂದು ನಮೂದಿಸಲ್ಪಟ್ಟಿದೆ. ಉಳವನೂರು ಸರ್ಕಾರಿ ಶಾಲೆ, ಕೊಟ್ಟಾಯಂ ಕಾಲೇಜುಗಳಲ್ಲಿ ಓದಿದ ನಾರಾಯಣನ್, ತಿರುವಾಂಕೂರು ವಿಶ್ವವಿದ್ಯಾಲಯದಲ್ಲಿ ಮೊದಲ ದರ್ಜೆಯಲ್ಲಿ ಇಂಗ್ಲೀಷ್ ಎಂ ಎ ಪದವಿ ಪಡೆದರು. ಮೊದಲ ದಲಿತ ಪದವೀಧರ ಎಂಬ ಹೆಗ್ಗಳಿಕೆ ನಾರಾಯಣನ್‌ರದ್ದು.ದಿಲ್ಲಿಯಲ್ಲಿ ಹಿಂದೂ ಪತ್ರಿಕೆಗೆ ವರದಿಗಾರನಾಗಿಯೂ (೧೯೪೪-೪೫) ಕೆಲಸಗೈದರು. ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾರ್ಥಿವೇತನ ನೆರವಿನಿಂದ ರಾಜ್ಯಶಾಸ್ತ್ರ ಅಧ್ಯಯನ ಮಾಡುವಾಗ ಹೆರಾಲ್ಡ್ ಲಾರ್ಸ್ಕಿರ ನೆಚ್ಚಿನ ಶಿಷ್ಯರಾಗಿದ್ದರು. ನಾರಾಯಣನ್‌ರಿಗೆ ೧೯೪೮ರಲ್ಲಿ ಲಾರ್ಸ್ಕಿ ಅಭಿಮಾನಪೂರ್ವಕವಾಗಿ ನೆಹರೂರಿಗೆ ಪರಿಚಯಪತ್ರವನ್ನು ಇತ್ತರು. ಅದನ್ನು ಓದಿ ಪ್ರಭಾವಿತರಾದ ನೆಹರೂ, ನಾರಾಯಣನ್‌ರನ್ನು ನೇರವಾಗಿ ಭಾರತೀಯ ವಿದೇಶಾಂಗ ಸೇವೆಗೆ ನೇಮಕ ಮಾಡಿದರು. ಆರಂಭಿಸಿದರು ತನ್ನ ನೆಹರು ಆಡಳಿತದಲ್ಲಿ ಭಾರತೀಯ ವಿದೇಶಾಂಗ ಸೇವೆ ಸದಸ್ಯರಾಗಿ ಭಾರತದಲ್ಲಿ ವೃತ್ತಿ. ಜಪಾನ್, ಯುನೈಟೆಡ್ ಕಿಂಗ್ಡಮ್, ಥೈಲ್ಯಾಂಡ್, ಟರ್ಕಿ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ರಾಯಭಾರಿಯಾಗಿ ಕಾರ್ಯ ಮತ್ತು "ದೇಶದ ಅತ್ಯುತ್ತಮ ರಾಯಭಾರಿ" ಎಂದು ನೆಹರೂ ಉಲ್ಲೇಖಿಸಲಾಗುತ್ತದೆ.

ಉಲ್ಲೇಖಗಳು

[ಸಂಪಾದಿಸಿ]

೧. https://kannada.oneindia.com/literature/people/2005/10110krn.html