ಕಾರ್ಲ್ ಮಾರ್ಕ್ಸ್
ಕಾರ್ಲ್ ಮಾರ್ಕ್ಸ್ ಕಾರ್ಲ್ ಮಾರ್ಕ್ಸ್ ಜರ್ಮನಿಗೆ ಸೇರಿದ ತತ್ತ್ವಜ್ಞಾನಿ, ರಾಜಕೀಯ ಮತ್ತು ಆರ್ಥಿಕ ತಜ್ಞ, ರಾಜಕೀಯ ನಾಯಕ ಹಾಗೂ ಇತಿಹಾಸಕಾರ. ಅವರು 1818ರ ಮೇ 5ರಂದು ಜನಿಸಿದರು. 1848ರಲ್ಲಿ ಕಮ್ಯೂನಿಸ್ಟ್ ಘೋಷಣಾಪತ್ರಿಕೆ ಎಂಬ ಪ್ರಸಿದ್ಧ ಗ್ರಂಥವನ್ನು ರಚಿಸಿದರು. ಅವರು 1883ರ ಮಾರ್ಚ್ 14ರಂದು ನಿಧನರಾದರು.
ಕಾರ್ಲ್ ಮಾರ್ಕ್ಸ್ ಅವರ ಪ್ರಮುಖ ನುಡಿಗಳು
[ಸಂಪಾದಿಸಿ]
ಮಾನವ ಇತಿಹಾಸದ ದಿಕ್ಕನ್ನು ನಿರ್ಧರಿಸುವುದು ಆರ್ಥಿಕ ಪರಿಸ್ಥಿತಿಗಳೇ ಹೊರತು, ರಾಜಕೀಯ, ಧಾರ್ಮಿಕ ಅಥವಾ ಸಾಂಸ್ಕೃತಿಕ ಪರಿಸ್ಥಿತಿಗಳಲ್ಲ.
ಯಾವುದೇ ಸಿದ್ಧಾಂತವು ಪ್ರಜಾಪ್ರಭುತ್ವದ ಮೇಲೆ ಹಿಡಿತವನ್ನು ಪಡೆಯಿದರೆ, ಅದು ಶಕ್ತಿಶಾಲಿಯಾಗಿ ಪರಿವರ್ತನೆಯಾಗುತ್ತದೆ.
ಇದುವರೆಗೆ ತತ್ತ್ವಜ್ಞಾನಿಗಳು ಪ್ರಪಂಚವನ್ನು ವಿವರಣೆಮಾಡುತ್ತಿದ್ದಾರೆ, ಇನ್ನುಮುಂದೆ ಅದನ್ನು ಬದಲಾಯಿಸುವ ಕೆಲಸ ಮಾಡಬೇಕಾಗಿದೆ.
ತತ್ತ್ವಶಾಸ್ತ್ರೀಯ ಪರಿಶೀಲನೆಗೆ ಮೂಲ ಅಗತ್ಯವು ನಿರ್ಭಯವಾದ ಸ್ವತಂತ್ರ ಚಿಂತನೆ.
ವಿಜ್ಞಾನ ಜ್ಞಾನವು ಸ್ವಾರ್ಥಪೂರ್ಣ ಭೋಗವಸ್ತುವಾಗಿರಬಾರದು.
ಗತಿತರ್ಕ ಎಂಬುದು ಬಾಹ್ಯ ಜಗತ್ತಿನ ಹಾಗೂ ಮಾನವನ ಚಿಂತನೆಯ ಚಲನೆಗೆ ಸಂಬಂಧಿಸಿದ ಸಾಮಾನ್ಯ ನಿಯಮಗಳ ಅರಿವು.
ಗತಿತರ್ಕವು ಯಾವುದನ್ನೂ ಪೂಜಾ ಪೀಠದ ಮೇಲೆ ಇಡುವುದಿಲ್ಲ; ಇದು ತನ್ನ ಸ್ವಭಾವದ ಪ್ರಕಾರವೇ ವಿಮರ್ಶಾತ್ಮಕ ದೃಷ್ಟಿಯನ್ನು ಹೊಂದಿದೆ.
ಹೋರಾಡಿದರೆ ಕಳೆದುಕೊಳ್ಳುವುದೆಂದರೆ ದಾಸ್ಯ ಸೆಳೆವಗಳು ಮಾತ್ರ.
- "ಪ್ರಜಾಪ್ರಭುತ್ವವು ಸಮಾಜವಾದಕ್ಕೆ ದಾರಿ."
- "ಪ್ರತಿಯೊಬ್ಬ ಯುಗದ ಆಳುವ ವಿಚಾರಗಳು ಅದರ ಆಳುವ ವರ್ಗದ ವಿಚಾರಗಳಾಗಿವೆ."
- "ಪ್ರತಿಯೊಬ್ಬರಿಂದ ಅವನ ಸಾಮರ್ಥ್ಯಕ್ಕೆ ಅನುಗುಣವಾಗಿ, ಪ್ರತಿಯೊಬ್ಬರಿಗೂ ಅವನ ಅಗತ್ಯಗಳಿಗೆ ಅನುಗುಣವಾಗಿ."
- "ಶ್ರಮಜೀವಿಗಳು ತಮ್ಮ ಸರಪಳಿಗಳನ್ನು ಹೊರತುಪಡಿಸಿ ಕಳೆದುಕೊಳ್ಳಲು ಏನೂ ಇಲ್ಲ."
- "ಜಗತ್ತಿನ ಕಾರ್ಮಿಕರೇ ಒಂದಾಗು".
