ಕಯ್ಯಾರ ಕಿಞ್ಞಣ್ಣ ರೈ
ಗೋಚರ
ಕಯ್ಯಾರ ಕಿಞ್ಞಣ್ಣ ರೈ(ಜೂನ್ ೮,೧೯೧೫ - ಆಗಸ್ಟ್ ೯,೨೦೧೫).ಅಖಿಲ ಕರ್ನಾಟಕದ ಮಹಾಕವಿಯಾಗಿ, ಹಿರಿಯ ಸಾಹಿತಿಯಾಗಿ,ಬಹುಭಾಷಾ ವಿದ್ವಾಂಸರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ,ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕರಾಗಿ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾರಕರಾಗಿ,ನಿರಂತರವಾಗಿ ದುಡಿದವರು. ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈರವರು, ಅಖಿಲಭಾರತ ಮಟ್ಟದಲ್ಲಿ ಜರುಗಿದ ೬೬ ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
ಉಕ್ತಿಗಳು
[ಸಂಪಾದಿಸಿ]- ದುಡಿತವೆ ನನ್ನ ದೇವರು
- "ದುಡಿತವೆ ನನ್ನ ದೇವರು" ಎನ್ನುವುದು ಕನ್ನಡದ ಲೇಖಕ ಕಯ್ಯಾರ ಕಿಞ್ಞಣ್ಣ ರೈ ಅವರ ಆತ್ಮಕಥನದ ಶೀರ್ಷಿಕೆ. ಈ ಪುಸ್ತಕವು ಅವರ ಜೀವನ ಮತ್ತು ಹೋರಾಟಗಳನ್ನು ವಿವರಿಸುತ್ತದೆ, ಮತ್ತು ದುಡಿಮೆಯ ಮಹತ್ವವನ್ನು ಒತ್ತಿ ಹೇಳುತ್ತದೆ.
- ಬೆಂಕಿ ಬಿದ್ದಿದೆ ಮನೆಗೆ ಓ...ಬೇಗ ಬನ್ನಿ, ಎಲ್ಲೆಲ್ಲೂ ಎದ್ದೆದ್ದು ಓಡಿ ಬನ್ನಿ/ ಕನ್ನಡದ ಗಡಿ ಕಾಯೆ ಗುಡಿ ಕಾಯೆ ನುಡಿ ಕಾಯೆ, ಕಾಯಲಾರೆವೆ ಸಾವೆ, ಓ ಬನ್ನಿ ಬನ್ನಿ'
- ತನ್ನ ನೆಲ, ಕನ್ನಡದ ನೆಲ ಅನ್ಯರ -ಕೇರಳದ ಪಾಲಾದಾಗ ಕೆರಳಿದವರು, ಕೊರಗಿದವರು ಕನ್ನಡದ ಕಲಿ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರು ಈ ಮೇಲಿನ ಮಾತುಗಳನ್ನು ಆಡಿದ್ದಾರೆ.[೧]
- ಐಕ್ಯವೊಂದೇ ಮಂತ್ರ ಐಕ್ಯದಿಂದೆ ಸ್ವತಂತ್ರ ಐಕ್ಯಗಾನದಿ ರಾಷ್ಟ್ರ ತೇಲುತಿರಲಿ
- ತನ್ನ ಕವನಗಳಲ್ಲಿ ದೇಶಭಕ್ತಿಯನ್ನು ಮುಖ್ಯವಾಗಿಟ್ಟುಕೊಂಡಂತೆ ಆಧ್ಯಾತ್ಮಿಕ ಚಿಂತನೆಯನ್ನೂ ಅಳವಡಿಸಿಕೊಂಡ ಕವಿಯ ಪಾಲಿಗೆ ಕೆಲವೊಮ್ಮೆ ದೇಶವೇ ದೇವರಾಗುತ್ತದೆ ಎಂಬುದನ್ನು ಕನ್ನಡದ ಕವಿ ಕಯ್ಯಾರ ಕಿಞ್ಞಣ್ಣ ರೈ ಅವರು ಈ ಮೇಲಿನ ಮಾತುಗಳಲ್ಲಿ ಆಡಿದ್ದಾರೆ

