ಎಚ್.ಎಸ್ ಮುಕ್ತಾಯಕ್ಕ
ಗೋಚರ
ಶ್ರೀಮತಿ ಎಚ್.ಎಸ್. ಮುಕ್ತಾಯಕ್ಕ ಇವರು ಕನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬರು. ಇವರು ಕರ್ನಾಟಕದ, ರಾಯಚೂರು ಜಿಲ್ಲೆಯವರು. ಅಲ್ಲಿಯ ಮಹಿಳಾ ಕಾಲೇಜಿನಲ್ಲಿ ಉಪನ್ಯಸಕರಾಗಿ, ಪ್ರಾಂಶುಪಾಲಕರಾಗಿ ನಿವೃತ್ತರಾಗಿರುವರು. ಸದ್ಯ ಇವರು ರಾಯಚೂರಿನಲ್ಲಿ ವಾಸಿಸುತ್ತಿರುವರು. ಇವರ ತಂದೆ ಖ್ಯಾತ ಸಾಹಿತಿಗಳಾಗಿದ್ದ ದಿ.ಶಾಂತರಸರು.
ಇವರು ಐದು ಕವನಸಂಕಲನ, ಮೂರು ಗಜಲ್ ಸಂಕಲನ, ಐದು ಗದ್ಯ ಕೃತಿ, ಮತ್ತು ಸಮಗ್ರ ಗಜಲ್ ಸಂಕಲನ, ಹಾಗೂ ಒಂದು ಬಿಡಿ ದ್ವಿಪದಿಗಳ ಸಂಗ್ರಹ ಹೊರತಂದಿದ್ದಾರೆ.
ಯುಕ್ತಿ ಗಳು
[ಸಂಪಾದಿಸಿ]- ನಾನು ಕಾಯುತ್ತೇನೆ ನಿನ್ನ ಎರಡು ಮಾತಿಗಾಗಿ, ನನ್ನ ತುಟಿಯಂಚಿನಲ್ಲಿ ಅರಳಬಹುದಾದ ಕಿರುನಗೆಗಾಗಿ, ಮತ್ತೆ ನೀನು ನನ್ನ ಹೆಸರ ಕರೆದಾಗ ಇಡೀ ಸೃಷ್ಟಿಯೇ ಒಂದು ಕ್ಷಣ ನಿಂತು ಬಿಡುವ ಅನುಭೂತಿಗಾಗಿ.
- ನೀನು ದೂರವಿರುವೆ, ಆದರೂ ದೂರವೇನಿಲ್ಲ.
ಕವನ ಸಂಕಲನಗಳು
[ಸಂಪಾದಿಸಿ]1.ನಾನು ಮತ್ತು ಅವನು 2.ನೀವು ಕಾಣಿರೆ, ನೀವು ಕಾಣಿರೆ 3.ಕಭೀ ಕಭೀ 4.ತನ್. ಹಾಯಿ[೧]
5.ನಿನಗಾಗಿ ಬರೆದ ಕವಿತೆಗಳು[೨]
ಗದ್ಯ ಕೃತಿಗಳು.
[ಸಂಪಾದಿಸಿ]1.ಶಿವಶರಣಿ ಮುಕ್ತಾಯಕ್ಕ (ಮಕ್ಕಳಿಗಾಗಿ)
2.ಢಕ್ಕೆಯ ಬೊಮ್ಮಣ್ಣ (ಸಂಶೋಧನೆ)
3.ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆಗಳು(ವೈಚಾರಿಕ
4.ಅಪ್ಪ (ಸಂಪಾಧನೆ) 5.ಮದಿರೆಯ ನಾಡಿನಲ್ಲಿ ( ಪ್ರವಾಸಕಥನ)