ಅಭಿನಂದನ್ ವರ್ಧಮಾನ್
ಗೋಚರ
ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ( ೨೧ ಜೂನ್ ೧೯೮೩ ರಂದು ಜನಿಸಿದರು) - ಅಭಿನಂದನ್ ಅವರು ಜೂನ್ ೨೧, ೧೯೮೩ರಂದು ತಮಿಳು ಜೈನ ಕುಟುಂಬದಲ್ಲಿ ಜನಿಸಿದರು. ಅವರ ಕುಟುಂಬದ ಹಿರಿಯರು ಕಾಂಚೀಪುರಂನಿಂದ ೧೯ ಕಿ.ಮೀ (೧೨ ಮೈಲಿ) ದೂರದಲ್ಲಿರುವ ತಿರುಪ್ಪೂರು ಎಂಬ ಹಳ್ಳಿಯಿಂದ ಬಂದವರು. ತಂದೆ ಸಿಂಹಕುಟ್ಟಿ ವರ್ಧಮಾನ್ ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ಮತ್ತು ಶಿಲ್ಲಾಂಗ್‌ನಲ್ಲಿರುವ ಪೂರ್ವ ವಾಯು ಕಮಾಂಡ್‌ನಲ್ಲಿ ಏರ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆಗಿ ಸೇವೆ ಸಲ್ಲಿಸಿ, ನಿವೃತ್ತರಾಗಿದ್ದಾರೆ. ಅವರ ತಾಯಿ ವೈದ್ಯರಾಗಿದ್ದಾರೆ. ಅಭಿನಂದನ್‌ರವರ ಪತ್ನಿ ತಾನ್ವಿ ಕೂಡ ಭಾರತೀಯ ವಾಯುಸೇನೆಯಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿ ಕಾರ್ಯ ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ.
