ಅಂಬಿಗರ ಚೌಡಯ್ಯ
ಅಂಬಿಗರ ಚೌಡಯ್ಯ ೧೨ನೇ ಶತಮಾನದಲ್ಲಿ ಜೀವಿಸಿದ್ಧ ಶಿವಶರಣ ಹಾಗೂ ವಚನ ಸಾಹಿತ್ಯ ವಚನಕಾರರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು[೧] ಬರೆದಿರುವುದು ಗೋಚರಿಸುತ್ತದೆ.
ವಚನಗಳು
[ಸಂಪಾದಿಸಿ]ಅಂತರಂಗವ ಬಿಟ್ಟು ಮಂಡೆ ಬೋಳಾದ ಮೇಲೆ
ಅಂಗಕೆ ಚೆಂದವುಂಟೆ ಚೆಂದ ಅಲಂಕಾರವುಂಟೆ
ತಮ್ಮಂಗದ ಸಂಗವನರಿಯದೆ ಭಂಡರನೇನೆಂಬೆನೆಂದಾತ
ನಮ್ಮ ದಿಟ್ಟ ವೀರಾಧಿವೀರ
ನಿಜ ಭಕ್ತ ಅಂಬಿಗರ ಚವುಡಯ್ಯನು.
ಅಂದಾದಿಬಿಂದುವಿನೊಳೊಂದಿದ ಹುಟ್ಟು,
ಆ ಹುಟ್ಟನೆ ಹಿಡಿದು ಅಂದ ಚೆಂದದಲ್ಲಿ ತೊಳಸಿ ಆಡುತ್ತೈದಾರೆ ಜಗವೆಲ್ಲಾ!
ಅಂದಗೆಟ್ಟವರೆಲ್ಲಾ ಬಂದೇರಿ ಹರುಗೋಲ,
ಒಂದೆ ಹುಟ್ಟಿನಲ್ಲಿಳುಹುವೆನೆಂದಾತನಂಬಿಗ ಚೌಡಯ್ಯ.
ಅಂಬಿಗನು ಜಗದೊಳಗೆ ಇಂಬಿಲೋಲಾಡುವನು;
ತುಂಬಿದ ಸಾಗರದೊಳಗೆ ನೋಡಯ್ಯ.
ನಿಂದ ದೋಣಿಯನೇರಿದಂದಿನ ಹುಟ್ಟ
ಕಂಡವರಂದವನರಿದಾತ ತೊಳಸುತ್ತಿದ್ದನು.
ಉಲ್ಲೇಖಗಳು
[ಸಂಪಾದಿಸಿ]- ಛಂದಗೆಟ್ಟವರೆಲ್ಲಾ ಬಂದೇರಿ ದೋಣಿಯನು ಶಿವನೊಂದೆ ಠಾವಿಗೊಯ್ದಿಳುಹುವೆನೆಂದನಂಬಿಗ ಚೌಡಯ್ಯ.
ಅಡವಿಯ ತೊಪ್ಪಲ ತರತರ ತಂದು ತಿಂದು
ಒಡಲ ದಂಡಿಸಿಕೊಂಡು,
ಪಡೆ, ಗವಿಯೊಳಗೆ ತಪಸ್ಸಿದ್ದೇವೆಯೆಂದು
ಕಡು ಹೆಮ್ಮೆಯಲ್ಲಿ ನುಡಿವ ಅಣ್ಣಗಳು ನೀವು ಕೇಳಿರೋ.
ಷಡುರಸಂಗಳು ಹುಟ್ಟಿದವು ಶಿವನ ಕರುಣರಸದಲ್ಲಿ,
ಆ ರುಚಿಗಳ ಸುಖಮಂ ಪಡೆದವುದಕ್ಕೆ
ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಪದಾರ್ಥವ ಹಿಡಿದ ಭಕ್ತನ ಮನೆಯಲ್ಲಿ
ಗುರುಲಿಂಗಜಂಗಮಕ್ಕೆ ನೀಡಿ ಮಾಡುವ
ಭಕ್ತಿಪದಾರ್ಥವಾದ ಷಡುರುಚಿಯ ಕೊಂಬುದಕ್ಕೆ
ನಿಮ್ಮಲ್ಲಿಯೆ ಷಡ್ವಿಧಲಿಂಗಂಗಳುಂಟು.
ಅವ ನೋಡಿ ಎಚ್ಚತ್ತು ಸವಿಸವಿದರ್ಪಿಸಬಲ್ಲಡೆ ಮಹಾಮಹಿಮ,
ತಾನೇನ ಮಾಡಲು ಜಡನಲ್ಲ, ಅಜಡನು ತಾನೆಂದಾತನಂಬಿಗರ ಚೌಡಯ್ಯ.
