ಸದಸ್ಯ:Omshivaprakash
Wikipedia:Babel | |||||||||
---|---|---|---|---|---|---|---|---|---|
| |||||||||
Search user languages |
ಮೂಲತ: ಬೆಂಗಳೂರಿನವನಾದ ನಾನು, ಕನ್ನಡ ಮತ್ತು ಅದರ ಸುತ್ತಲಿನ ತಂತ್ರಜ್ಞಾನದ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿದ್ದೇನೆ. ತಂತ್ರಜ್ಞಾನ ಮನೆಮನೆಗೂ ತಲುಪಬೇಕಾದರೆ, ಪ್ರತಿಯೊಂದು ಕನ್ನಡ ಮನ ಅದನ್ನು ಕನ್ನಡದಲ್ಲೇ ಅರ್ಥಮಾಡಿಕೊಳ್ಳುವಂತಾಗಬೇಕು. ವಿಕಿಪೀಡಿಯ ಅಂತಹದ್ದೊಂದು ವೇದಿಕೆ. ಕನ್ನಡದಲ್ಲಿರುವ ಅನೇಕಾನೇಕ ವಿಷಯಗಳನ್ನು ಒಂದೆಡೆ ಕ್ರೂಡೀಕರಿಸಲು ಸಾಮಾನ್ಯನಿಗೂ ಸಮಾನ ಅವಕಾಶ ಕೊಡುತ್ತಿರುವ ಕನ್ನಡ ವಿಕಿಪೀಡಿಯಕ್ಕೆ ನನ್ನ ಮತ್ತು ನಿಮ್ಮಂತಹವರನ್ನು ಒಗ್ಗೂಡಿಸುವುದು ನನ್ನ ಸಧ್ಯದ ಗುರಿ.
ವಿಕಿಮೀಡಿಯ ಭಾರತದ ಸದಸ್ಯನಾಗಿದ್ದು, ಕನ್ನಡ ವಿಶೇಷ ಆಸಕ್ತಿ ಬಳಗವನ್ನು ಕಟ್ಟುವ ಸಣ್ಣದೊಂದು ಪ್ರಯತ್ನವನ್ನು ಮಾಡುತ್ತಿದ್ದೇನೆ. ನನ್ನ ಈ ಕೆಲಸದಲ್ಲಿ ನೆರವಾಗಲು ನನ್ನನ್ನು ಚರ್ಚಾಪುಟ ಅಥವಾ ಟ್ವಿಟರ್ ಅಥವಾ ಫೇಸ್‌ಬುಕ್ ಮೂಲಕ ಸಂಪರ್ಕಿಸಬಹುದು.
ಯೋಜನೆಗಳು
[ಸಂಪಾದಿಸಿ]- ಕನ್ನಡ ವಿಕಿಪೀಡಿಯದ ಸುತ್ತ ಸಮುದಾಯವನ್ನು ಬಲಪಡಿಸುವುದು
- ಕನ್ನಡದಲ್ಲಿ ವಿಜ್ಞಾನ/ತಂತ್ರಜ್ಞಾನದ ಕುರಿತ ಲೇಖನಗಳನ್ನು ಸೇರಿಸುವುದು
- ವಿಕಿ ಸಂಪಾದಕರಿಗೆ ತಾಂತ್ರಿಕ ಬೆಂಬಲ ನೀಡುವ ತಂಡವನ್ನು ಕಟ್ಟುವುದು
- ಕನ್ನಡ ವಿಕಿಪೀಡಿಯವನ್ನು ಜನರಲ್ಲಿಗೆ ತಲುಪಿಸಲು ಯೋಜನೆಗಳನ್ನು ಹಮ್ಮಿಕೊಳ್ಳುವುದು
ವಿಕ್ಷನರಿಯಲ್ಲಿ ನಾನು
[ಸಂಪಾದಿಸಿ]- ಕನ್ನಡ ವಿಕಿಪೀಡಿಯ ಸುತ್ತ ಸಮುದಾಯವನ್ನು ಬಲಗೊಳಿಸುವ ಕಾರ್ಯಕ್ರಮದಡಿ, ವಿಕ್ಷನರಿಗೆ ನಿರಂತರವಾಗಿ ಕೊಡುಗೆ ನೀಡುತ್ತಿರುವ ಸದಸ್ಯರನ್ನು ಬೆಂಬಲಿಸುವುದು
- ಹೊಸ ನಿರ್ವಾಹಕರನ್ನು ನೇಮಿಸಲು ಮನವಿ ಮಾಡುವುದು
- ವಿಕ್ಷನರಿ ಬಾಟ್ ಜೊತೆಗೆ ಮಾಡಬಹುದಾದ ಇತರೆ ಯೋಜನೆಗಳ ಸುತ್ತ ಕೆಲಸ ಮಾಡುವವರನ್ನು ಒಂದುಗೂಡಿಸುವುದು
ಮತ್ತಷ್ಟು ಪರಿಚಯ
[ಸಂಪಾದಿಸಿ]ಉದ್ಯೋಗದಲ್ಲಿ ಬೆಂಗಳೂರಿನ ಸಣ್ಣದೊಂದು ಸಾಫ್ಟ್ವೇರ್ ಕಂಪೆನಿಯ ತಂತ್ರಜ್ಞಾನ ಮತ್ತು ತರಬೇತಿಯ ಮುಖ್ಯಸ್ಥ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಟದೊಡನೆ ಈಗಾಗಲೇ ೧೦ಕ್ಕಿಂತ ಹೆಚ್ಚು ವರ್ಷಗಳನ್ನು ಕಳೆದಿರುವ ನನಗೆ ಗ್ನು/ಲಿನಕ್ಸ್ ಬಗ್ಗೆ ಕನ್ನಡದಲ್ಲಿ ತಿಳಿಸುವುದೆಂದರೆ ಬಹಳ ಇಷ್ಟ. ನಿಮಗೂ ಇದರಲ್ಲಿ ಆಸಕ್ತಿ ಇದ್ದರೆ ಲಿನಕ್ಸಾಯಣಕ್ಕೆ ಒಮ್ಮೆ ಭೇಟಿಕೊಡಿ. ಆಗಾಗ ಕನ್ನಡದಲ್ಲಿ ನಾನು ಬರೆಯುವ ವಿಜ್ಞಾನ, ತಂತ್ರಜ್ಞಾನ, ಕವನ ಇತ್ಯಾದಿಗಳನ್ನು ನನ್‌ಮನನಲ್ಲಿ ನೋಡಬಹುದು. ಫೋಟೋಗ್ರಫಿ,ಸೈಕ್ಲಿಂಗ್ ಮತ್ತು ಚಾರಣ ನನ್ನ ಇನ್ನಿತರ ಆಸಕ್ತಿಗಳು.