ವಿಷಯಕ್ಕೆ ಹೋಗು

ವಿನ್‌ಸ್ಟನ್‌ ಚರ್ಚಿಲ್‌

ವಿಕಿಕೋಟ್ದಿಂದ
(ವಿನ್ಸ್‌ಟನ್‌ ಚರ್ಚಿಲ್‌ ಇಂದ ಪುನರ್ನಿರ್ದೇಶಿತ)
  • ನಿರಾಶಾವಾದಿ ಪ್ರತಿಯೊಂದು ಅವಕಾಶದಲ್ಲೂ ಕಷ್ಟವನ್ನು ನೋಡುತ್ತಾನೆ. ಆಶಾವಾದಿಯಾದವನು ಪ್ರತಿಯೊಂದು ಕಷ್ಟದಲ್ಲೂ ಅವಕಾಶವನ್ನು ಗುರುತಿಸುತ್ತಾನೆ. - ೦೩:೨೩, ೨೪ ಅಕ್ಟೋಬರ್ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ವ್ಯಕ್ತಿ ಎಷ್ಟು ಎತ್ತರಕ್ಕೆ ಏರಿದ್ದಾನೆ ಎಂಬುದು ಮುಖ್ಯವಲ್ಲ. ಬದಲಿಗೆ ಕೆಳಗೆ ಬಿದ್ದಾಗ ಆತ ಪುಟಿದು ಹೇಗೆ ಮೇಲೇಳುತ್ತಾನೆ ಎಂಬುದರಲ್ಲಿ ಅವನ ಯಶಸ್ಸು ಅಳೆಯಬೇಕು - ೦೫:೨೪, ೨೨ ಫೆಬ್ರುವರಿ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಆಶಾವಾದಿಯಾದವನು ಎಲ್ಲ ಕಷ್ಟಗಳಲ್ಲೂ ಅವಕಾಶಗಳನ್ನೇ ಹುಡುಕುತ್ತಾನೆ. - ೦೫:೦೯, ೧೬ ಮೇ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ತುಂಬಾ ಬಿಡುವು ಇಲ್ಲದವರಿಗೆ ಚಿಂತೆ ಮಾಡುವುದಕ್ಕೆ ಸಮಯ ಇರುವುದಿಲ್ಲ. - ೧೩:೫೨, ೧೭ ಜನವರಿ ೨೦೧೪ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಸುಧಾರಿಸಬೇಕು ಎಂದರೆ ಬದಲಾಗಬೇಕು. ದೋಷವಿಲ್ಲದ ಸ್ಥಿತಿ ತಲುಪಬೇಕು ಎಂದಾದರೆ ಮತ್ತೆ ಮತ್ತೆ ಬದಲಾಗುತ್ತಿರಬೇಕು. - ೦೫:೩೦, ೨೮ ಏಪ್ರಿಲ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಯಶಸ್ಸೇ ಅಂತಿಮವಲ್ಲ. ವೈಫಲ್ಯವೇ ಕೊನೆಯಲ್ಲ. ಮನುಷ್ಯನನ್ನು ಕಾಯುವುದು ಆತನಲ್ಲಿರುವ ಮುನ್ನುಗ್ಗುವ ಗುಣ. - ೧೪:೩೬, ೨೩ ಜೂನ್ ೨೦೧೫ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ಯಶಸ್ಸೇ ಕೊನೆಯಲ್ಲ. ಸೋಲು ಮಾರಣಾಂತಿಕವೂ ಅಲ್ಲ. ಮನುಷ್ಯನಿಗೆ ಮುನ್ನಡೆಯುವ ಧೈರ್ಯ ಇರಬೇಕು. - ೦೭:೦೯, ೪ ಮಾರ್ಚ್ ೨೦೧೬ (UTC)  ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
  • ನಿಮಗೆ ಶತ್ರುಗಳಿದ್ದಾರೆಯೇ? ಒಳ್ಳೆಯದು. ಇದರರ್ಥ ನೀವು ನಿಮ್ಮ ಜೀವನದಲ್ಲಿ ಯಾವುದೋ ಒಂದು ವಿಷಯಕ್ಕಾಗಿ ನಿಂತಿದ್ದೀರಿ.
  • ಗಾಳಿಪಟಗಳು ಗಾಳಿಯ ವಿರುದ್ಧ ಎತ್ತರಕ್ಕೆ ಏರುತ್ತವೆ - ಅದರೊಂದಿಗೆ ಅಲ್ಲ.
  • ನಾವು ನಮ್ಮ ಕೈಲಾದಷ್ಟು ಮಾಡುತ್ತಿದ್ದೇವೆ ಎಂದು ಹೇಳಿ ಪ್ರಯೋಜನವಿಲ್ಲ. ಅಗತ್ಯವಿರುವುದನ್ನು ಮಾಡುವಲ್ಲಿ ನೀವು ಯಶಸ್ವಿಯಾಗಬೇಕು.
  • ಸುಧಾರಿಸುವುದೆಂದರೆ ಬದಲಾಗುವುದು; ಪರಿಪೂರ್ಣವಾಗುವುದು ಎಂದರೆ ಆಗಾಗ್ಗೆ ಬದಲಾಗುವುದು.