ಮಾಸ್ತಿ ವೆಂಕಟೇಶ ಅಯ್ಯಂಗಾರ್
ಗೋಚರ
- ಜೀವಂತವಾದ ಯಾವ ಭಾಷೆಯೂ ತಾನು ಕಡಿಮೆ ಯೋಗ್ಯತೆಯ ಭಾಷೆಯೆಂದು ಕುಗ್ಗಬಾರದು. - ೧೧:೫೫, ೨ ನವೆಂಬರ್ ೨೦೧೫ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಅನುಭವಕ್ಕಿಂತ ಹಿರಿದಾದ ಸತ್ಯ ಇಲ್ಲ
- ಯಾವ ಕಲೆಯಲ್ಲೂ ರುಚಿಯೊಂದಿಗೆ ಶುಚಿಯನ್ನು ಕಾಪಾಡಿಕೊಳ್ಳುವುದು ಭಾರತೀಯ ಸಂಪ್ರದಾಯ - ೦೪:೧೮, ೩ ಜೂನ್ ೨೦೧೪ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಮಾತು ಮನಸ್ಸುಗಳನ್ನು ಒಂದುಗೂಡಿಸಬೇಕೆ ಹೊರತು ಒಡೆಯಬಾರದು.
- ಕೊರಬೇಡಿ , ನಿಲ್ಲಬೇಡಿ, ಇಳಿಯ ಬೇಡಿ , ಏರುತ್ತಾ ಇರಿ.[೧]
- ಮಾತು ಮನಸುಗಳನ್ನು ಒಂದುಗೂಡಿಸಬೇಕೇ ಹೊರತು ಒಡೆಯಬಾರದು. ೧೮:೦೩, ೧೦ ಮೇ ೨೦೧೮ (UTC) ರಂದು ಪ್ರಜಾವಾಣಿಯಲ್ಲಿ ಪ್ರಕಟಗೊಂಡ ಸುಭಾಷಿತ.
- ಒಬ್ಬ ಮನುಷ್ಯ, ಆತನ ಸ್ನೇಹಿತರು ಹೊಗಳಿ ಹಾಡುವಷ್ಟು ಒಳ್ಳೆಯವನೂ ಇರುವುದಿಲ್ಲ, ಅವನಿಗಾಗದವರು ತೆಗಳಿ ತಿರಸ್ಕರಿಸುವಷ್ಟು ಕೆಟ್ಟವನೂ ಇರುವುದಿಲ್ಲ.
- ಬೇರೊಬ್ಬರ ಶ್ರೇಯಸ್ಸನ್ನು ಎಷ್ಟು ಹೆಚ್ಚಾಗಿ ನೀನು ಬಯಸುತ್ತೀಯೋ ಅಷ್ಟರ ಮಟ್ಟಿಗೆ ನಿನ್ನ ಬಾಳು ಸಾರ್ಥಕವಾಗುತ್ತದೆ.
- ಓದು ದೊಡ್ಡದು ಸರಿ. ಆದರೆ ಮನುಷ್ಯ ಓದಿ ಕಲಿಯೋದಕ್ಕಿಂತ ಹೆಚ್ಚು ಸಂಗತಿಗಳನ್ನು ತಾನೇ ಬದುಕಿ ಕಲಿಯುತ್ತಾನೆ. ಸುತ್ತಲ ಬದುಕನ್ನು ನೋಡಿ ಕಲಿಯುತ್ತಾನೆ.